ಬಾವಿಗಿಳಿದು ಬೆಕ್ಕನ್ನು ರಕ್ಷಿಸಿದ ಮಂಗಳೂರಿನ ಪ್ರಾಣಿಪ್ರೇಮಿ ಮಹಿಳೆ

| Updated By: guruganesh bhat

Updated on: Aug 11, 2021 | 9:59 PM

ಮಂಗಳೂರಿನ ರಜಿನಿ ದಾಮೋದರ ಶೆಟ್ಟಿ ಅವರು ಈಗಾಗಲೇ ತಮ್ಮ ಪ್ರಾಣಿಪ್ರೇಮದಿಂದ ಸಾರ್ವಜನಿಕ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ.

ಮಂಗಳೂರು: ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯೊಂದನ್ನು ಪ್ರಾಣಿಪ್ರೇಮಿ ಮಂಗಳೂರಿನ ರಜಿನಿ ದಾಮೋದರ ಶೆಟ್ಟಿ ಎಂಬುವವರು ರಕ್ಷಿಸಿದ್ದಾರೆ. ಜೆಪ್ಪು ಬಳಿ ಸಂದೀಪ್ ಎಂಬುವವರ  ಬಾವಿಗೆ ಬೆಕ್ಕಿನ ಮರಿ ಬಿದ್ದಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಂಗಳೂರಿನ ಪ್ರಾಣಿಪ್ರೇಮಿ ರಜಿನಿ ದಾಮೋದರ ಶೆಟ್ಟಿ. ರಜಿನಿ ಅವರು ತನ್ನ ಪತಿಯೊಂದಿಗೆ ಬಂದು ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದು ಬೆಕ್ಕಿನ ಮರಿ ರಕ್ಷಣೆ ಮಾಡಿದರು. 

ಅವರ ಪ್ರಾಣಿಪ್ರೇಮಕ್ಕೆ ಮಂಗಳೂರಿನ ನಾಗರಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.  ಮಂಗಳೂರಿನ ರಜಿನಿ ದಾಮೋದರ ಶೆಟ್ಟಿ ಅವರು ಈಗಾಗಲೇ ತಮ್ಮ ಪ್ರಾಣಿಪ್ರೇಮದಿಂದ ಸಾರ್ವಜನಿಕ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ. ಈ ಹಿಂದೆಯೂ ಅವರು ಇಂತಹುದೇ ರೀತಿಯಲ್ಲಿ ಸಾಹಸದ ಮೂಲಕ ಪ್ರಾಣಿಪ್ರೇಮ ಮೆರೆದಿದ್ದರು.  80 ಅಡಿ ಪಾಳು ಬಾವಿಗೆ ಬಿದ್ದಿದ್ದ ನಾಯಿಯನ್ನು ರಜಿನಿ ಅವರು ರಕ್ಷಿಸಿದ್ದರು. 

ಇದನ್ನೂ ಓದಿ: 

Neeraj Chopra: ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ರಸ್ತೆ ಬದಿ ಡ್ಯಾನ್ಸ್ ಮಾಡಿದ​ ವಿಡಿಯೋ ವೈರಲ್

Viral Video: ವಿಡಿಯೋ ಮಾಡ್ತಾ ಮಾಡ್ತಾ ಈಜುಕೊಳಕ್ಕೆ ಬಿದ್ದ ಕ್ಯಾಮರಾ ಮ್ಯಾನ್​​; ವಧು – ವರ ಕಂಗಾಲು! ವಿಡಿಯೋ ವೈರಲ್​

(A Mangaluru animal lover women who rescued a cat by 200 feet deep well)

Published on: Aug 08, 2021 08:18 PM