ಹೆಪಟೈಟಿಸ್​ ಎ ಸೋಂಕಿನ ಬಗ್ಗೆ ನಿಮಗೆಷ್ಟು ಗೊತ್ತು? ಈ ಕಾಯಿಲೆ ಅದೆಷ್ಟು ಅಪಾಯಕಾರಿ?

ಹೆಪಟೈಟಿಸ್​ ಎ ಸೋಂಕಿನ ಬಗ್ಗೆ ನಿಮಗೆಷ್ಟು ಗೊತ್ತು? ಈ ಕಾಯಿಲೆ ಅದೆಷ್ಟು ಅಪಾಯಕಾರಿ?

TV9 Web
| Updated By: Skanda

Updated on: Aug 09, 2021 | 9:11 AM

ಈ ರೋಗ ಹೆಪಟೈಟಿಸ್ ಎ ವೈರಸ್ ಇರುವ ನೀರು, ಆಹಾರ ಸೇವನೆಯಿಂದ ಬರುತ್ತದೆ. ಲಿವರ್ ಮೇಲೆ ಪರಿಣಾಮ ಬೀರುವ ಈ ಸೋಂಕನ್ನು ನಿರ್ಲಕ್ಷಿಸಿದರೆ ಸಾವು ಸಂಭವಿಸುವ ಸಾಧ್ಯತೆಯೂ ಇದೆ. ಈ ಕಾಯಿಲೆಯ ಲಕ್ಷಣಗಳೆಂದರೆ ಕಾಮಾಲೆ, ವಾಂತಿ, ಕೀಲು ನೋವು.

ಕೊರೊನಾ ಸೋಂಕು ಆರಂಭವಾದ ನಂತರ ಜನರಿಗೆ ಆರೋಗ್ಯದ ಕುರಿತಾದ ಕಾಳಜಿ ಮೊದಲಿಗಿಂತಲೂ ಹೆಚ್ಚಾಗಿದೆ. ಕಳೆದೊಂದು ವರ್ಷದಿಂದ ಮಿಕ್ಕೆಲ್ಲಾ ಕಾಯಿಲೆಗಳ ಆತಂಕವನ್ನು ಹಿಂದಿಕ್ಕಿ ಕೊರೊನಾ ಒಂದೇ ಕಾಡುತ್ತಿದೆಯಾದರೂ ಅದರದ್ದೇ ಯೋಚನೆಯಲ್ಲಿ ಉಳಿದವುಗಳನ್ನು ನಿರ್ಲಕ್ಷಿಸುವಂತೆ ಇಲ್ಲ. ಹೀಗಾಗಿ ವಿಶ್ವದ ಕಾಳಜಿ ವಹಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸಾಕಷ್ಟು ಎಚ್ಚರಿಕೆಗಳನ್ನ ಕೊಡುತ್ತಿದೆ. ಕೊರೊನಾ ಹೊರತಾಗಿ ವಿಶ್ವವನ್ನ ಕಾಡುತ್ತಿರುವ ಇತರೆ ರೋಗಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ನಿಗಾ ಇಟ್ಟಿದೆ. ಪ್ರತಿ ವರ್ಷ ಜಗತ್ತಿನ ಜನರನ್ನ ಹೆಚ್ಚಾಗಿ ಕಾಡುವ ರೋಗದ ಬಗ್ಗೆ ಆತಂಕಕಾರಿ ವರದಿಯನ್ನೂ ಕೊಟ್ಟಿದೆ.

ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ವರದಿ ಪ್ರಕಾರ ಪ್ರತಿವರ್ಷ 10 ಕೋಟಿ ಮಂದಿ ಹೆಪಟೈಟಿಸ್ ಎ ಸೋಂಕಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಹೆಪಟೈಟಿಸ್​ ಎ ರೋಗದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಗಂಭೀರ ಎಚ್ಚರಿಕೆ ನೀಡಿದೆ. ಹೆಪಟೈಟಿಸ್​ ಎ ಎಷ್ಟು ಅಪಾಯಕಾರಿ? ಅದರಿಂದ ಯಾವೆಲ್ಲಾ ತೊಂದರೆಯಾಗುತ್ತದೆ? ಕಾಯಿಲೆಗೆ ಕಾರಣವಾಗುವ ಅಂಶಗಳೇನು ಎಂದು ತಿಳಿಸಿದೆ.

ಈ ರೋಗ ಹೆಪಟೈಟಿಸ್ ಎ ವೈರಸ್ ಇರುವ ನೀರು, ಆಹಾರ ಸೇವನೆಯಿಂದ ಬರುತ್ತದೆ. ಲಿವರ್ ಮೇಲೆ ಪರಿಣಾಮ ಬೀರುವ ಈ ಸೋಂಕನ್ನು ನಿರ್ಲಕ್ಷಿಸಿದರೆ ಸಾವು ಸಂಭವಿಸುವ ಸಾಧ್ಯತೆಯೂ ಇದೆ. ಈ ಕಾಯಿಲೆಯ ಲಕ್ಷಣಗಳೆಂದರೆ ಕಾಮಾಲೆ, ವಾಂತಿ, ಕೀಲು ನೋವು. ಸೋಂಕು ದೇಹ ಪ್ರವೇಶಿಸಿದ 2-6 ವಾರಗಳ ಒಳಗೆ ಕಾಯಿಲೆಯ ಸೂಚನೆ ಸಿಗಲಿದ್ದು, ಅದನ್ನು ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಬೇಕು. ಇದರ ಹೊರತಾಗಿ ನೀವು ತಿಳಿದುಕೊಳ್ಳಲೇಬೇಕಾದ ಕೆಲ ವಿವರ ಈ ವಿಡಿಯೋದಲ್ಲಿ ಲಭ್ಯವಿದೆ.

(How Dangerous Hepatitis A is you need to know these things to protect your health)