ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಾಜಿ ಶಾಸಕ ಮಂಜು ದರ್ಪ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 30, 2024 | 4:17 PM

ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ಸೋಮೇಶ್ವರ ಕಾಲೋನಿ ಬಳಿ ಕರ್ತವ್ಯ ನಿರತ ಪೊಲೀಸರ ಮೇಲೆ ರಾಮನಗರ ಜಿಲ್ಲೆಯ ಮಾಗಡಿ ಕ್ಷೇತ್ರದ JDSನ ಮಾಜಿ ಶಾಸಕ ಎ.ಮಂಜುನಾಥ್‌ ದರ್ಪ ತೋರಿದ್ದಾರೆ. ರೂಲ್ಸ್ ಬಗ್ಗೆ ಹೆಚ್ಚು ಮಾತಾಡಿದ್ರೆ ನಿಮ್ಮ ಊರಿಗೆ ಕಳಿಸುತ್ತೇನೆಂದು ಆವಾಜ್‌ ಹಾಕಿದ್ದಾರೆ. ಸ್ಥಳೀಯರಿಗೆ ಏಕೆ ದಂಡ ಹಾಕ್ತೀಯಾ ಎಂದಿದ್ದಾರೆ.

ರಾಮನಗರ, ಜೂನ್​ 30: ಕರ್ತವ್ಯ ನಿರತ ಪೊಲೀಸರ (Police) ಮೇಲೆ ಜಿಲ್ಲೆ ಮಾಗಡಿ ಕ್ಷೇತ್ರದ JDSನ ಮಾಜಿ ಶಾಸಕ ಎ.ಮಂಜುನಾಥ್‌ (A. Manjunath) ದರ್ಪ ತೋರಿದ್ದಾರೆ. ಜಿಲ್ಲೆಯ ಮಾಗಡಿ ಪಟ್ಟಣದ ಸೋಮೇಶ್ವರ ಕಾಲೋನಿ ಬಳಿ ಘಟನೆ ನಡೆದಿದೆ. ಬೆಂಗಳೂರು-ಮಾಗಡಿ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಳ ಹಿನ್ನೆಲೆ ಹೆಲ್ಮೆಟ್ ಕಡ್ಡಾಯ ನಿಯಮದ ಪ್ರಕಾರ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ದಂಡ ವಿಧಿಸುವಾಗ ವಾಹನ ಸವಾರರ ಜೊತೆ ಪೊಲೀಸ್‌ ಸಿಬ್ಬಂದಿ ಕಿರಿಕ್ ಆಗಿದೆ. ಇದೇ ವೇಳೆ ಸ್ಥಳಕ್ಕೆ ಬಂದಿದ್ದ ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್​ ಸ್ಥಳೀಯರಿಗೆ ದಂಡ ಹಾಕದಂತೆ ಪೊಲೀಸರಿಗೆ ತಾಕೀತು ಮಾಡಿದ್ದಾರೆ. ನಮ್ಮ ರೂಲ್ಸ್ ಪಾಲಿಸುತ್ತಿದ್ದೇವೆಂದು ಎಎಸ್‌ಐ, ಪೊಲೀಸ್ ಸಿಬ್ಬಂದಿ ಹೇಳಿದ್ದು, ಹೆಚ್ಚು ಮಾತನಾಡಬೇಡ, ಎಸ್‌ಪಿಗೆ ಮಾತನಾಡುತ್ತೇನೆಂದು ಆವಾಜ್‌ ಹಾಕಿದ್ದಾರೆ. ರೂಲ್ಸ್ ಬಗ್ಗೆ ಹೆಚ್ಚು ಮಾತಾಡಿದರೆ ನಿಮ್ಮ ಊರಿಗೆ ಕಳಿಸ್ತೇನೆ. ನಾನ್ ಲೋಕಲ್ ಬಂದ್ರೆ ಫೈನ್‌ ಹಾಕು, ಸ್ಥಳೀಯರಿಗೆ ಏಕೆ ದಂಡ ಹಾಕುತ್ತೀಯಾ. ನಾನು ಶಾಸಕರಾಗಿದ್ದಾಗ ಹೀಗೆ ಮಾಡ್ತಿದ್ದರಾ ಅಂತ ಪ್ರಶ್ನಿಸಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.