Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ ಹೀಗೆ ಹೇಳಿದ್ಯಾಕೆ?

ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ ಹೀಗೆ ಹೇಳಿದ್ಯಾಕೆ?

ರಮೇಶ್ ಬಿ. ಜವಳಗೇರಾ
|

Updated on: Jun 30, 2024 | 3:11 PM

ಕರ್ನಾಟದಲ್ಲಿ ಮುಖ್ಯಮಂತ್ರಿ, ಡಿಸಿಎಂ ಬಗ್ಗೆ ಬಲವಾದ ಕೋಗು ಕೇಳಿಬರುತ್ತಿದೆ. ಒಕ್ಕಗಲಿಗ ಹಾಗೂ ಲಿಂಗಾಯತ ಸ್ವಾಮೀಜಿಯೊಬ್ಬರು ತಮ್ಮ ಸಮುದಾಯಕ್ಕೆ ಸಿಎಂ ಸ್ಥಾನ ನೀಡಬೇಕೆಂದು ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ ಸಿಎಂ ಬದಲಾವಣೆ ಮಾಡೋದಾದ್ರೆ ಬಿಕೆ ಹರಿಪ್ರಸಾದ್‌ ಅವರನ್ನೇ ಮುಖ್ಯಮಂತ್ರಿ ಮಾಡಿ ಎಂದು ಪ್ರಣವಾನಂದಶ್ರೀ ಆಗ್ರಹಿಸಿದ್ದಾರೆ. ಇದರ ಮಧ್ಯೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ , ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.

ಚಿತ್ರದುರ್ಗ (ಜೂ.30): ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡುವೆ ಉತ್ತಮ ಸಹಕಾರ ಇದೆ. ರಾಜ್ಯದಲ್ಲಿ ಸಿಎಂ, ಡಿಸಿಎಂ ಉತ್ತಮ ಆಡಳಿತ ನೀಡುತ್ತಿದ್ದಾರೆ. ಸಿಎಂ ಬದಲಾವಣೆ ಚಿಂತನೆ ಮಾಡಬೇಕಿರುವುದು ವರಿಷ್ಠರು. ಸೋನಿಯಾ ಗಾಂಧಿ, ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ. ಬಾರದು ಬಪ್ಪದು ಬಪ್ಪದು ತಪ್ಪದು ಎಂಬ ವಚನದಂತೆ ನಡೆಯುತ್ತೆ. ಸ್ವಾಮೀಜಿಗಳು ಹೇಳಿದ ತಕ್ಷಣ ಬದಲಾಗದಿರುವ ವಿಚಾರವಿದು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಹೇಳಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಸಿಎಂ ಬದಲಾವಣಗೆ ವಿಚಾರ ಅಪ್ರಸ್ತುತ ಎನ್ನುವ ಮೂಲಕ ಡಿಕೆ ಶಿವಕುಮಾರಗೆ ಸಿಎಂ ಸ್ಥಾನ ನೀಡಬೇಕೆಂಬ ಚಂದ್ರಶೇಖರ್ ಶ್ರೀ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.

ಇಂದು (ಜೂನ್ 30) ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಡಿಕೆ ಶಿವಕುಮಾರ್ ಅವರೇ ಈ ಬಗ್ಗೆ ಯಾರೂ ಮಾತಾಡಬೇಡಿ ಎಂದಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿ ವಿಶ್ವಕಪ್ ತಂದಿದ್ದಾರೆ. ಸಿದ್ದರಾಮಯ್ಯ, ಡಿಕೆ ಕೊಹ್ಲಿ, ರೋಹಿತ್​​ ಶರ್ಮಾ ಇದ್ದಂತೆ. ತತ್ವ ಸಿದ್ಧಾಂತದ ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯವಿದೆ. ಹಿಂದೆ ಅನೇಕ ಲಿಂಗಾಯತರು ಮುಖ್ಯಮಂತ್ರಿ ಆಗಿದ್ದಾರೆ. ಈಗ ಸಿದ್ದರಾಮಯ್ಯ ಸಿಎಂ, ಮುಂದಿನ ದಿನಗಳಲ್ಲಿ ಡಿಕೆ ಶಿವಕುಮಾರ್​​ಗೆ ಅವಕಾಶ ಸಿಗಲಿ. ಹಾಗೇ ಜಿ.ಪರಮೇಶ್ವರ್​ ಹಾಗೂ ಸತೀಶ್​ ಅವರಿಗೂ ಅವಕಾಶ ಇದೆ. ದಲಿತ ಸಿಎಂ ಎಂಬ ಮಾತುಗಳನ್ನು ನಾವು ಕೇಳುತ್ತಿದ್ದೇವೆ. SC, ST ಸಮುದಾಯಕ್ಕೂ ಪ್ರಾತಿನಿಧ್ಯ ಕೊಡಬೇಕಾಗುತ್ತದೆ. ಸಮಯ ಬಂದಾಗ ಲಿಂಗಾಯತರು ಸಿಎಂ ಆಗುವ ಯೋಗ ಬರುತ್ತೆ ಎಂದು ಭವಿಷ್ಯ ನುಡಿದಿದರು.

ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ