ಬಸ್ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ? ವಿಡಿಯೋ ನೋಡಿ
ಚಾಲಕನ ನಿಯಂತ್ರಣ ತಪ್ಪಿ ಬಸ್ವೊಂದು ಉರುಳಿ ಬಿದ್ದಿದೆ. ಮೈಸೂರು ತಾಲೂಕಿನ ಹೊಸಕೋಟೆ ಬಳಿ ರಸ್ತೆ ತಿರುವಿನಲ್ಲಿ ಬಸ್ ಉರುಳಿಬಿದ್ದಿದೆ. ಪರಿಣಾಮ ಘಟನೆಯಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ.
ಮೈಸೂರು, (ಜೂನ್ 30): ವೇಗವಾಗಿ ಬಂದು ತಿರುವು ಪಡೆದುಕೊಳ್ಳುವಾಗ ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ವೊಂದು ಪಲ್ಟಿಯಾಗಿ ಕಂದಕಕ್ಕೆ ಬಿದ್ದಿದೆ. ಪರಿಣಾಮ ಚಾಲಕ ಸೇರಿ ಮೂವರ ಸ್ಥಿತಿ ಗಂಭೀರವಾಗಿದ್ದು ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳು ಆಗಿವೆ. ನಂಜನಗೂಡು ತಾಲೂಕಿನ ಮರಡಿಹುಂಡಿ ಗ್ರಾಮದ ಬಳಿ ವೇಗವಾಗಿ ಬಂದು ತಿರುವು ಪಡೆದುಕೊಳ್ಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ ಕಂದಕಕ್ಕೆ ಬಿದ್ದಿದೆ. ಇದರಿಂದ ಬಸ್ನಲ್ಲಿದ್ದ 25ಕ್ಕೂ ಹೆಚ್ಚು ಪ್ರಯಾಣಿಕರ ಪೈಕಿ ಚಾಲಕ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಉಳಿದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳು ಆಗಿವೆ. ಗಾಯಾಳುಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 346 ನಂಬರ್ ಇರುವ ಸಾರಿಗೆ ಬಸ್ ಬಿಳುಗಲಿ ಗ್ರಾಮದಿಂದ ಎಸ್.ಹೊಸಕೋಟೆ ಮಾರ್ಗವಾಗಿ ಮೈಸೂರಿಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ. ವರುಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ

