Adult Education: ಮಧ್ಯಪ್ರದೇಶದ ಗ್ರಾಮವೊಂದರ ಶಿಕ್ಷಕ ಡಿಜಿಟಲ್ ಪ್ರೊಜೆಕ್ಟರ್ ಬಳಸಿ ಅವಿದ್ಯಾವಂತ ವಯಸ್ಕರಿಗೆ ಶಿಕ್ಷಣ ನೀಡುತ್ತಿದ್ದಾರೆ!
ಹಿರಿಯರಿಗೆ ಇಂಗ್ಲಿಷ್ ಮತ್ತು ಹಿಂದಿ ಅಕ್ಷರಭ್ಯಾಸ ಮಾಡಿಸಲು, ಸಂಖ್ಯೆಗಳನ್ನು ಗುರುತಿಸಲು ಮತ್ತು ಇತರ ಹಲವಾರು ಕಲಿಕಾ ವಿಧಾನಗಳಿಗೆ ಪ್ರೊಜೆಕ್ಟರ್ ಅನ್ನು ಮನರಂಜನೆ ಒದಗಿಸುವ ಶೈಲಿಯಲ್ಲಿ ಅಮಿತ್ ಬಳಸುತ್ತಿದ್ದಾರೆ.
ಮಧ್ಯಪ್ರದೇಶ ಸಾಗರ ಜಿಲ್ಲೆಯ ರಾಹ್ಲಿ ಗ್ರಾಮದ ನಿವಾಸಿಯಾಗಿರುವ ಅಮಿತ್ ಯಾದವ್ (Amit Yadav) ಮಾಡುತ್ತಿರುವ ಕೆಲಸ ಎಲ್ಲರಿಗೂ ಮಾದರಿಯಾಗಿದೆ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ಗ್ರಾಮದ ವಯಸ್ಕರನ್ನು ಅಕ್ಷರಸ್ಥರಾಗಿಸಲು ಇವರು ವಿನೂತನ ಶೈಲಿ ಅಳವಡಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಅಮಿತ್, 2020 ರಲ್ಲಿ ಜನಪ್ರಿಯ ಗೇಮ್ ಶೋ ‘ಕೌನ್ ಬನೇಗಾ ಕರೋಡ್ ಪತಿ’ನಲ್ಲಿ (Kaun Banega Karodpati) ಭಾಗವಹಿಸಿ ಒಂದು ಲಕ್ಷ ರೂ. ಗೆದ್ದಿದ್ದರು. ಗೆದ್ದ ಹಣದಿಂದ ಅವರು ಒಂದು ಡಿಜಿಟಲ್ ಪ್ರೊಜೆಕ್ಟರ್ (Digital Projector) ಖರೀದಿಸಿ ಅದನ್ನು ಮೊದಲು ಚಿಕ್ಕಮಕ್ಕಳಿಗೆ ಪಾಠ ಮಾಡಲು ಉಪಯೋಗಿಸಿ ಈಗ ಅದನ್ನೇ ವಯಸ್ಕರಿಗೂ ಬಳಸುತ್ತಿದ್ದಾರೆ.
‘ಅವಿದ್ಯಾವಂತ ಗ್ರಾಮಸ್ಥರಿಗೆ ಶಿಕ್ಷಣ ನೀಡಲು ನಾನು ಹಳ್ಳಿಹಳ್ಳಿಗೆ ಭೇಟಿನೀಡಿ ಡಿಜಿಟಲ್ ಕ್ಲಾಸ್ಗಳನ್ನು ಆಯೋಜಿಸುತ್ತಿದ್ದೇನೆ. ಡಿಜಿಟಲ್ ಪ್ರೊಜೆಕ್ಟರ್ ನಲ್ಲಿ ಲಭ್ಯವಾಗುವ ಚಿನ್ಹೆ ಮತ್ತು ಸಂಕೇತಗಳ ಮೂಲಕ ಪಾಠ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಎಬಿಸಿಡಿ ಅಕ್ಷರಾಭ್ಯಾಸ, ಸಂಖ್ಯೆಗಳನ್ನು ಬರೆಯುವುದು, ಗುರುತಿಸುವುದು ಮೊದಲಾದ ಸಂಗತಿಗಳನ್ನು ನಾನು ಅವರಿಗೆ ಒಂದು ಮುಕ್ತ ಮತ್ತು ಸುರಕ್ಷಿತ ವಾತಾವರಣದಲ್ಲಿ ಕಲಿಸುತ್ತೇನೆ. ಅನಕ್ಷರಸ್ಥ ವಯಸ್ಕರು ಕಲಿಯುವುದು ಮೋಜೆನಿಸುತ್ತಿದೆ. ಅವರಿಗೆ ಶಿಕ್ಷಣ ಸಿಗುತ್ತಿರುವ ಬಗ್ಗೆ ನನ್ನಲ್ಲಿ ಸಂತೃಪ್ತಿಯಿದೆ. 60 ಕ್ಕಿಂತ ಹೆಚ್ಚಾದವರೂ ಸೇರಿದಂತೆ ಅನೇಕರು ಈಗ ಸ್ಲೇಟ್ ಗಳ ಮೇಲೆ ಎಲ್ಲ ಅಕ್ಷರಗಳನ್ನು ಬರೆಯಲು ಶಕ್ತರಾಗಿದ್ದಾರೆ,’ ಎಂದು ಅಮಿತ್ ಹೇಳುತ್ತಾರೆ.
ಹಿರಿಯರಿಗೆ ಇಂಗ್ಲಿಷ್ ಮತ್ತು ಹಿಂದಿ ಅಕ್ಷರಭ್ಯಾಸ ಮಾಡಿಸಲು, ಸಂಖ್ಯೆಗಳನ್ನು ಗುರುತಿಸಲು ಮತ್ತು ಇತರ ಹಲವಾರು ಕಲಿಕಾ ವಿಧಾನಗಳಿಗೆ ಪ್ರೊಜೆಕ್ಟರ್ ಅನ್ನು ಮನರಂಜನೆ ಒದಗಿಸುವ ಶೈಲಿಯಲ್ಲಿ ಅಮಿತ್ ಬಳಸುತ್ತಿದ್ದಾರೆ.
ಇದನ್ನೂ ಓದಿ: Viral Tweet: ನಮ್ಮ ಹಣವನ್ನು ವಿದೇಶದಲ್ಲಿ ಡಾಲರ್‌ನಂತೆಯೇ ಬಳಸಲು ಅನುವು ಮಾಡಿಕೊಟ್ಟ ಮೋದಿಗೆ ಧನ್ಯವಾದ ಹೇಳಿದ ಬಾಲಿವುಡ್ ಗಾಯಕ
‘ಅವರು (ಅಮಿತ್ ಯಾದವ್) ಇಲ್ಲಿಯವರೆಗೆ ಬಂದು ನಮಗೆ ಪಾಠ ಮಾಡುತ್ತಾರೆ. ಪಿ ಫಾರ್ ಪಿಜನ್ಸ್, ಎಫ್ ಫಾರ್ ಫಿಶ್ ಎಲ್ಲ ಅವರು ಹೇಳಿಕೊಡುತ್ತಾರೆ. ಟಿವಿ (ಪ್ರೊಜೆಕ್ಟರ್) ಮೂಲಕ ಅವರು ನಮಗೆ ಹಿಂದಿ ಮತ್ತು ಇಂಗ್ಲಿಷ್ ಕಲಿಸುತ್ತಾರೆ. ನಾವು ಅವರಿಂದ ಕಲಿಯುತ್ತಿದ್ದೇವೆ,’ ಎಂದು ಸೀತಾರಾಮ ಹೆಸರಿನ ವಯಸ್ಕರೊಬ್ಬರು ಹೇಳುತ್ತಾರೆ.
ಮಕ್ಕಳಿಗೆ ಪಾಠ ಮಾಡಲು ಬಳಸುವ ಉಪಕರಣಗಳನ್ನೇ ವಯಸ್ಕರಿಗೂ ಬಳಸುತ್ತಿರುವುದಾಗಿ ಅಮಿತ್ ಹೇಳುತ್ತಾರೆ. ವಯಸ್ಕರಿಗೆ ಪಾಠ ಮಾಡಲು ಭಯಮುಕ್ತ, ಮೋಜುದಾಯಕ ವಾತಾವರಣ ನಿರ್ಮಿಸಿದಾಗ ಮಾತ್ರ ಅವರು ಸಂಕೋಚ ಹಿಂದಟ್ಟಿ ಪಾಠ ಕಲಿಯಲು ಬರುತ್ತಾರೆ ಎಂದು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ