Karnataka Assembly Polls; ಒಬ್ಬ ಸಾಮಾನ್ಯ ಕಾರ್ಯಕರ್ತನಂತೆ ಕರ್ನಾಟಕ ಮತದಾರರ ಮುಂದೆ ಹಾಜರಾಗಿ ಆಶೀರ್ವಾದ ಪಡೆಯುವೆ: ಪ್ರಧಾನಿ ನರೇಂದ್ರ ಮೋದಿ

ರಾಜ್ಯದ ಮತದಾರರು ಬಿಜೆಪಿಗೆ ದಾಖಲೆ ಸಂಖ್ಯೆಯ ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ಬಗ್ಗೆ ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

Karnataka Assembly Polls; ಒಬ್ಬ ಸಾಮಾನ್ಯ ಕಾರ್ಯಕರ್ತನಂತೆ ಕರ್ನಾಟಕ ಮತದಾರರ ಮುಂದೆ ಹಾಜರಾಗಿ ಆಶೀರ್ವಾದ ಪಡೆಯುವೆ: ಪ್ರಧಾನಿ ನರೇಂದ್ರ ಮೋದಿ
|

Updated on:Apr 27, 2023 | 11:21 AM

ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು ರಾಜ್ಯದ ಬಿಜೆಪಿ ಕಾರ್ಯಕರ್ತರು ಮತ್ತು ಮತದಾರರ ಜೊತೆ ಸಂವಾದ ನಡೆಸುವ ಮೊದಲು ಪಕ್ಷದ ರಾಜ್ಯ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಪ್ರಧಾನಿಯವರಿಗೆ ಸ್ವಾಗತ ಕೋರಿದರು. ಕರ್ನಾಟಕದ 58,112 ಬೂತ್ ಮತ್ತು 1,680 ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರು (BJP workers) ಸಂವಾದದಲ್ಲಿ ಭಾಗಿಯಾದರು. ವರ್ಚ್ಯುಯಲ್ ಸಂವಾದದಲ್ಲಿ ಮಾತಾಡಿದ ಪ್ರಧಾನಿ ಮೋದಿ ಕಾರ್ಯಕರ್ತರ ಶ್ರಮ ಹಾಗೂ ಕರ್ನಾಟಕ ಜನತೆಯ ಆಶೀರ್ವಾದದಿಂದ ರಾಜ್ಯದಲ್ಲಿ ಮತ್ತೊಮ್ಮೆ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬರಲಿದೆ, ಇನ್ನೆರಡು ದಿನಗಳಲ್ಲಿ ತಾವು ಖುದ್ದು ಮತದಾರರ ಮುಂದೆ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಹಾಜರಾಗಿ ಅವರು ಆಶೀರ್ವಾದ ಪಡೆಯುವುದಾಗಿ ಹೇಳಿದರು. ರಾಜ್ಯದ ಮತದಾರರು ಬಿಜೆಪಿಗೆ ದಾಖಲೆ ಸಂಖ್ಯೆಯ ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ಬಗ್ಗೆ ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾಅ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:19 am, Thu, 27 April 23

Follow us