ದಾಂಡೇಲಿಯಲ್ಲಿ ಮನೆ ಸದಸ್ಯನಂತೆ ಸಾಕಿದ್ದ ಕೋತಿಯ ಸಾವು, ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 14, 2022 | 1:47 PM

ಕೋತಿಯನ್ನು ಸಾಕಿದ್ದ ಕುಟುಂಬ ಮತ್ತು ಓಣಿಯ ನಿವಾಸಿಗಳು ಶಾಸ್ತ್ರೋಕ್ರವಾಗಿ ಅದರ ಅಂತ್ಯ ಸಂಸ್ಕಾರ ನಡೆಸಿದರು.

ಕಾರವಾರ: ಮನೆಯ ಸದಸ್ಯರೊಬ್ಬರು ಸಾವನ್ನಪ್ಪಿದ್ದಾರೇನೋ ಎಂಬಂತೆ ಕುಟುಂಬದ ಸದಸ್ಯರು ರೋದಿಸುತ್ತಿರುವ ಮನಕಲುಕುವ ದೃಶ್ಯವಿದು. ಅಸಲಿಗೆ ಅನಾರೋಗ್ಯ ಕಾರಣ ಮರಣ ಹೊಂದಿರೋದು ಅವರು ಮನೆಮಗನಂತೆ ಸಾಕಿದ್ದ ಸುಮಾರು ಮೂರು ವರ್ಷದ ಒಂದು ಕೋತಿ (monkey). ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ (Dandeli) ಕಂಜರಪೇಟೆಯಲ್ಲಿ. ಅದನ್ನು ಸಾಕಿದ್ದ ಕುಟುಂಬ ಮತ್ತು ಓಣಿಯ ನಿವಾಸಿಗಳು ಶಾಸ್ತ್ರೋಕ್ರವಾಗಿ ಮರಣಿಸಿದ ಮಂಗನ ಅಂತ್ಯ ಸಂಸ್ಕಾರ (final rites) ನಡೆಸಿದರು.