ಮುರುಘಾ ಶ್ರೀಗಳಿಂದ ತಮ್ಮ ಮೇಲೂ ಅತ್ಯಾಚಾರ ನಡೆದಿದೆಯೆಂದು ಇನ್ನಿಬ್ಬರು ಬಾಲಕಿಯರಿಂದ ದೂರು!

ಮುರುಘಾ ಶ್ರೀಗಳಿಂದ ತಮ್ಮ ಮೇಲೂ ಅತ್ಯಾಚಾರ ನಡೆದಿದೆಯೆಂದು ಇನ್ನಿಬ್ಬರು ಬಾಲಕಿಯರಿಂದ ದೂರು!

TV9 Web
| Updated By: Digi Tech Desk

Updated on:Oct 14, 2022 | 12:54 PM

12-13 ವರ್ಷದ ಬಾಲಕಿಯೊಬ್ಬಳು ತನ್ನನ್ನು 2-3 ವರ್ಷಗಳಿಂದ ಲೈಂಗಿಕವಾಗಿ ಶೋಷಿಸಲಾಗುತ್ತಿತ್ತು ಅಂತ ಹೇಳಿಕೊಂಡಿದ್ದು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಸ್ಟ್ಯಾನ್ಲಿ ಹೇಳಿದ್ದಾರೆ.

ಮೈಸೂರು: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಮುರಾಘಾ ಮಠದ ಶಿವಮೂರ್ತಿ ಸ್ವಾಮಿಯವರ (Shivamurthy Swamiji) ಪ್ರಕರಣದ ಆಳ ಬಗೆದಂತೆಲ್ಲ ಹೆಚ್ಚುತ್ತಿದೆ ಮಾರಾಯ್ರೇ. ಟಿವಿ9 ಕನ್ನಡ ವಾಹಿನಿಯ ಜೊತೆ ಮಾತಾಡಿರುವ ಒಡನಾಡಿ ಸಂಸ್ಥೆಯ ಸಹ-ಸಂಸ್ಥಾಪಕ ಕೆವಿ ಸ್ಟ್ಯಾನ್ಲಿ (KV Stanley), ಗುರುವಾರದಂದು ಮತ್ತಿಬ್ಬರು ಬಾಲಕಿಯರು ತಮ್ಮ ಮೇಲೆ ತಮ್ಮ ಮೇಲೆ ಸ್ವಾಮೀಜಿಯಿಂದ ಲೈಂಗಿಕ ಹಲ್ಲೆ (sexual assault) ನಡೆದಿರುವ ಬಗ್ಗೆ ತಮ್ಮಲ್ಲಿ ಹೇಳಿಕೊಂಡಿದ್ದಾರೆ ಅಂತ ತಿಳಿಸಿದ್ದಾರೆ. 12-13 ವರ್ಷದ ಬಾಲಕಿಯೊಬ್ಬಳು ತನ್ನನ್ನು 2-3 ವರ್ಷಗಳಿಂದ ಲೈಂಗಿಕವಾಗಿ ಶೋಷಿಸಲಾಗುತ್ತಿತ್ತು ಅಂತ ಹೇಳಿಕೊಂಡಿದ್ದು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಸ್ಟ್ಯಾನ್ಲಿ ಹೇಳಿದ್ದಾರೆ.

Published on: Oct 14, 2022 12:18 PM