ಕೊಪ್ಪಳ: ಬಸ್ ಯಾಕೆ ತಡವಾಗುತ್ತಿದೆಯಲ್ಲಣ್ಣ ಅಂತ ಪ್ರಯಾಣಿಕರು ಕೇಳಿದ್ದಕ್ಕೆ ಕೆ ಎಸ್ ಆರ್ ಟಿ ಸಿ ನೌಕರನೊಬ್ಬ ಜಗಳಕ್ಕೆ ನಿಂತ!

ಕೊಪ್ಪಳ: ಬಸ್ ಯಾಕೆ ತಡವಾಗುತ್ತಿದೆಯಲ್ಲಣ್ಣ ಅಂತ ಪ್ರಯಾಣಿಕರು ಕೇಳಿದ್ದಕ್ಕೆ ಕೆ ಎಸ್ ಆರ್ ಟಿ ಸಿ ನೌಕರನೊಬ್ಬ ಜಗಳಕ್ಕೆ ನಿಂತ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 14, 2022 | 11:01 AM

ವಿದ್ಯಾರ್ಥಿಗಳು ಶಾಲೆಗೆ ಹೋಗುವ ಬಸ್ಸೊಂದು ತಡವಾಗಿದ್ದನ್ನು ಪ್ರಯಾಣಿಕರು ಕಂಟ್ರೋಲ್ ರೂಮಿನ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಅವನು  ಅವರೆಲ್ಲರ ಮೇಲೆ ರೇಗಾಡಿದ್ದಾನೆ.

ಕೊಪ್ಪಳ:  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ ಎಸ್ ಆರ್ ಟಿ ಸಿ) (KSRTC) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (BMTC) ಕೆಲಸ ಮಾಡುವ ಕೆಲ ಬಸ್ ಚಾಲಕ, ಕಂಡಕ್ಟರ್ (Conductor) ಮತ್ತು ಇತರ ಸಿಬ್ಬಂದಿಯ ಸ್ವಭಾವವೇ ಹಾಗೆ ಮಾರಾಯ್ರೇ. ಸಂಸ್ಥೆಗಳ ಒಡೆತನ ತಮ್ಮದು ಅನ್ನೋ ರೀತಿಯಲ್ಲಿ ವರ್ತಿಸುತ್ತಾರೆ. ಕೊಪ್ಪಳ ಜಲ್ಲೆಯ ಕುಷ್ಟಗಿ ಬಸ್ ನಿಲ್ದಾಣದಲ್ಲಿ ಆಗಿದ್ದು ಇದೇ. ವಿದ್ಯಾರ್ಥಿಗಳು ಶಾಲೆಗೆ ಹೋಗುವ ಬಸ್ಸೊಂದು ತಡವಾಗಿದ್ದನ್ನು ಪ್ರಯಾಣಿಕರು ಕಂಟ್ರೋಲ್ ರೂಮಿನ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಅವನು  ಅವರೆಲ್ಲರ ಮೇಲೆ ರೇಗಾಡಿದ್ದಾನೆ. ಜನ ಜೋರು ಮಾಡಿದಾಗ ಕಂಟ್ರೋಲ್ ರೂಮಿನೆಡೆ ಧಾವಿಸುತ್ತಾನೆ. ಈ ಘಟನೆಯಲ್ಲಿ ಕಂಡುಬರುವ ಮತ್ತೊಂದು ಸೋಜಿಗದ ಸಂಗತಿಯೆಂದರೆ, ಗುಂಪಿನಲ್ಲಿರುವ ಒಬ್ಬ ಪೊಲೀಸ್ ಅದನ್ನೆಲ್ಲ ಮೂಕಪ್ರೇಕ್ಷಕನಂತೆ ವೀಕ್ಷಿಸುವುದು!