ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವ ಕುಮಾರಸ್ವಾಮಿಗೆ ನೋಟೀಸ್ ಜಾರಿ: ಮಹಿಳಾ ಆಯೋಗದ ಅಧ್ಯಕ್ಷೆ
ಕುಮಾರಸ್ವಾಮಿ ಒಬ್ಬ ಹಿರಿಯ ರಾಜಕಾರಣಿ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿ ಮಹಿಳೆಯರು ಬಗ್ಗೆ ಬಹಳ ಕೀಳುಸ್ತರದಲ್ಲಿ ಮಾತಾಡಿದ್ದಾರೆ, ತಮ್ಮ ರಾಜಕೀಯ ಲಾಭಕ್ಕೆ ಅವರ ಮಹಿಳೆಯರ ಬಗ್ಗೆ ಕೆಟ್ಟದ್ದಾಗಿ ಮಾತಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ನೀಡಲ್ಲ, ಅವರಿಗೆ ನೋಟೀಸ್ ಜಾರಿಗೊಳಿಸಲಾಗಿದೆ ಮತ್ತು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಪ್ರಕರಣ ದಾಖಲಿಸಿಕೊಂಡು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಬೆಂಗಳೂರು: ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಹೇಳಿಕೆ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಇಕ್ಕಟ್ಟಿಗೆ ಮತ್ತು ಸಂಕಷ್ಟಕ್ಕೆ ಸಿಲುಕಿಸಿದೆ. ಕುಮಾರಸ್ವಾಮಿ ಮತ್ತು ಬೆಳಗಾವಿ ಬಿಜೆಪಿ ಧುರೀಣ ಸಂಜಯ ಪಾಟೀಲ್ (Sanjay Patil) ಅವರಿಗೆ ರಾಜ್ಯ ಮಹಿಳಾ ಆಯೋಗ (Karnataka Stare Commission for Women) ನೋಟೀಸ್ ಜಾರಿ ಮಾಡಿದ್ದು ಒಂದು ವಾರದೊಳಗೆ ಅವರು ಆಯೋಗದ ಎದುರು ಹಾಜರಾಗಿ ಸಮಜಾಯಿಷಿ ನೀಡಬೇಕಿದೆ. ಟಿವಿ9 ವರದಿಗಾರನೊಂದಿಗೆ ಮಾತಾಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧುರಿ (Nagalaxmi Choudhury) ಅವರು, ಕುಮಾರಸ್ವಾಮಿ ಒಬ್ಬ ಹಿರಿಯ ರಾಜಕಾರಣಿ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿ ಮಹಿಳೆಯರು ಬಗ್ಗೆ ಬಹಳ ಕೀಳುಸ್ತರದಲ್ಲಿ ಮಾತಾಡಿದ್ದಾರೆ, ತಮ್ಮ ರಾಜಕೀಯ ಲಾಭಕ್ಕೆ ಅವರ ಮಹಿಳೆಯರ ಬಗ್ಗೆ ಕೆಟ್ಟದ್ದಾಗಿ ಮಾತಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ನೀಡಲ್ಲ, ಅವರಿಗೆ ನೋಟೀಸ್ ಜಾರಿಗೊಳಿಸಲಾಗಿದೆ ಮತ್ತು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಪ್ರಕರಣ ದಾಖಲಿಸಿಕೊಂಡು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ಹಾಗೆಯೇ, ಅಕ್ಕ ಒಂದು ಮಾತ್ರೆ ಮತ್ತು ಪೆಗ್ ತಗೊಂಡು ಮಲ್ಕೊಂಬಿಡ್ತಾರೆ ಅಂತ ಹೇಳಿರುವ ಸಂಜಯ ಪಾಟೀಲ್ ಗೂ ನೋಟೀಸ್ ಜಾರಿಮಾಡಲಾಗಿದೆ ಎಂದು ನಾಗಲಕ್ಷ್ಮಿ ಚೌಧುರಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜ್ಯದ ಮಹಿಳೆಯರೆಲ್ಲ ತಿರುಗಿಬಿದ್ದ ಮೇಲೆ ಕುಮಾರಸ್ವಾಮಿಗೆ ಜ್ಞಾನೋದಯವಾಗಿದೆ: ಡಿಕೆ ಶಿವಕುಮಾರ್