ವಿಜಯಪುರ: ಟೈರ್ ಸ್ಫೋಟಕ್ಕೆ ಹೊತ್ತಿ ಉರಿದ ಖಾಸಗಿ ಬಸ್! ವಿಡಿಯೋ ಇಲ್ಲಿದೆ

Edited By: Rakesh Nayak Manchi

Updated on: Dec 15, 2023 | 10:09 AM

ವಿಜಯಪುರ ತಾಲೂಕಿನ ಹಿಟ್ಟನಹಳ್ಳಿ ಬಳಿಯ ಎನ್​ಎಚ್ 50 ರಲ್ಲಿ ಟೈರ್ ಸ್ಫೋಟಗೊಂಡು ಖಾಸಗಿ ಬಸ್ ಹೊತ್ತಿ ಉರಿದ ಘಟನೆ ನಡೆದಿದೆ. ಬೆಂಗಳೂರಿಂದ ವಿಜಯಪುರಕ್ಕೆ ಹೋಗುತ್ತಿದ್ದ ಬಸ್ ಇದಾಗಿದೆ. ಬಸ್​ಗೆ ಬೆಂಕಿ ಹತ್ತುತಲೇ ಗಾಬರಿಗೊಂಡ ಪ್ರಯಾಣಿಕರು ಬಸ್​ನಿಂದ ಇಳಿದಿದ್ದಾರೆ. ಆದರೆ ಲಗೇಜ್​ಗಳು ಬೆಂಕಿಗಾಹುತಿಯಾಗಿವೆ.

ವಿಜಯಪುರ, ಡಿ.15: ಟೈರ್ ಸ್ಫೋಟದಿಂದ ಬೆಂಕಿ ತಗುಲಿ (Fire Accident) ಖಾಸಗಿ ಬಸ್​ ಹೊತ್ತಿ ಉರಿದ ಘಟನೆ ವಿಜಯಪುರ (Vijayapura) ತಾಲೂಕಿನ ಹಿಟ್ಟನಹಳ್ಳಿ ಬಳಿಯ ಎನ್​ಎಚ್ 50 ರಲ್ಲಿ ನಡೆದಿದೆ. ಬೆಂಗಳೂರಿಂದ ವಿಜಯಪುರಕ್ಕೆ ಹೋಗುತ್ತಿದ್ದಾಗ ಜನತಾ ಟ್ರಾವೆಲ್ಸ್ ಬಸ್​ನ ಟೈರ್ ಸ್ಫೋಟಗೊಂಡಿದೆ. ಈ ವೇಳೆ ಜನರೆಲ್ಲರೂ ಬಸ್​ನಿಂದ ಕೆಳಗಿಳಿದಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಬಸ್​ಗೆ ಬೆಂಕಿ ಹತ್ತಿಕೊಂಡು ಇಡೀ ಬಸ್​ಗೆ ವ್ಯಾಪಿಸಿ ಧಗಧಗಿಸಿದೆ. ಘಟನೆಯಲ್ಲಿ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಪ್ರಯಾಣಿಕರ ಲಗೇಜ್​ಗಳು, ಬೆಳೆ ಬಾಳುವ ವಸ್ತುಗಳು, ಬಟ್ಟೆಗಳು, ನಗದು ಒಡವೆಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಹಾಗೂ ಅಗ್ನಿ ಶಾಮಕ‌ದಳ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us