ರಂದೀಪ್ ಸುರ್ಜೆವಾಲಾ ನಡೆಸಿದ ಸಭೆಯಲ್ಲಿ ಹೆಚ್ಚುವರಿ ಡಿಸಿಎಂಗಳ ಪ್ರಸ್ತಾಪವಷ್ಟೇ ಆಗಿದ್ದು: ಜಿ ಪರಮೇಶ್ವರ, ಗೃಹ ಸಚಿವ

ರಂದೀಪ್ ಸುರ್ಜೆವಾಲಾ ನಡೆಸಿದ ಸಭೆಯಲ್ಲಿ ಹೆಚ್ಚುವರಿ ಡಿಸಿಎಂಗಳ ಪ್ರಸ್ತಾಪವಷ್ಟೇ ಆಗಿದ್ದು: ಜಿ ಪರಮೇಶ್ವರ, ಗೃಹ ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on:Jan 09, 2024 | 4:31 PM

ಜನೆವರಿ 11 ರಂದು ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಸಭೆಗೆ ರಾಜ್ಯ ಸಚಿವ ಸಂಪುಟದ 28 ಸಚಿವರನ್ನು ಕರೆದಿದ್ದಾರೆ ಎಂದು ಜಿ ಪರಮೇಶ್ವರ್ ಹೇಳಿದರು. ರಾಜ್ಯದ 28 ಕ್ಷೇತ್ರಗಳ ಜವಾಬ್ದಾರಿಯನ್ನು ಸಚಿವರಿಗೆ ವಹಿಸಿಕೊಟ್ಟಿರುವುದರಿಂದ ಎಲ್ಲರನ್ನು ಸಭೆಗೆ ಕರೆಯಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು: ಕರ್ನಾಟಕದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೇವಾಲಾ (Randeep Surjewala) ಕೆಪಿಸಿಸಿ ನಾಯಕರೊಂದಿಗೆ ಒಂದು ಮೀಟಿಂಗ್ ನಡೆಸಿದ್ದು ಅದರಲ್ಲಿ ಮೂರು ಡಿಸಿಎಂಗಳ (three DCMs) ಬೇಡಿಕೆ ಬಗ್ಗೆ ಚರ್ಚೆಯಾಯಿತೆ ಅನ್ನೋದು ಕುತೂಹಲದ ವಿಷಯವಾಗಿದೆ. ನಗದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ (G Parameshwara), ಅಸಲಿಗೆ ಸಭೆ ಕರೆದಿದ್ದು, ಮುಂಬರುವ ಲೋಕಸಭಾ ಚುನಾವಣೆಗಾಗಿ ಸಿದ್ಧತೆ ಮತ್ತು ಸ್ಟ್ರಾಟಿಜಿಯನ್ನು ಚರ್ಚಿಸಲು; ಸಭೆಯ ನಡುವೆ ಒಂದಷ್ಟು ಜನ ಹೆಚ್ಚುವರಿ ಡಿಸಿಎಂಗಳಿದ್ದರೆ ಅನುಕೂಲವಾಗುತ್ತದೆ ಎಂಬ ಪ್ರಸ್ತಾವನೆಯನ್ನು ಕೆಲವರು ಮುಂದಿಟ್ಟರು, ಅದರೆ ಅದೇ ವಿಷಯ ಚರ್ಚಿಸಲು ಸಭೆ ಕರೆದಿರಲಿಲ್ಲ ಎಂದು ಹೇಳಿದರು. ಡಿಸಿಎಂಗಳ ಪ್ರಸ್ತಾಪದ ಸಾಧಕ ಬಾಧಕಗಳನ್ನು ದೆಹಲಿಯಲ್ಲಿ ವರಿಷ್ಠರು ಚರ್ಚಿಸುತ್ತಾರೆ, ತಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ ಎಂದು ಗೃಹ ಸಚಿವ ಹೇಳಿದರು. ಪಕ್ಷದ ಹಿರಿಯ ನಾಯಕರು ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯೋನ್ಮುಖರಾಗಬೇಕೆಂದು ಸಭೆಯಲ್ಲಿ ಸುರ್ಜೆವಾಲಾ ಹೇಳಿದರೆಂದ ಪರಮೇಶ್ವರ್, ತಾನು ಕೆಪಿಸಿಸಿ ಅಧ್ಯಕ್ಷನಾಗಿ ಎರಡು ಲೋಕಸಭೆ ಚುನಾವಣೆಯಲ್ಲಿ ಭಾಗಿಯಾಗಿರುವುದರಿಂದ ತನ್ನ ಅಭಿಪ್ರಾಯಗಳನ್ನು ಕೇಳಲಾಯಿತು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 09, 2024 11:49 AM