‘ನಾಲಿಗೆಗೆ ಲಗಾಮು ಬೀಳಬೇಕು’; ಕೆಟ್ಟಪದ ಬಳಕೆ ಮಾಡಿದ ವಿನಯ್ಗೆ ನೇರವಾಗಿ ಹೇಳಿದ ಪ್ರತಾಪ್
ಜನವರಿ 8ರ ಎಪಿಸೋಡ್ನಲ್ಲಿ ಇಬ್ಬರೂ ಜಗಳ ಮಾಡಿಕೊಂಡಿದ್ದರು. ಪ್ರತಾಪ್ ಬಗ್ಗೆ ವಿನಯ್ ಕೆಟ್ಟ ಶಬ್ದ ಪ್ರಯೋಗ ಮಾಡಿದ್ದರು. ಈಗ ನಾಮಿನೇಷನ್ ಪ್ರಕ್ರಿಯೆಯಲ್ಲೂ ಇಬ್ಬರ ಮಧ್ಯೆ ಕಿತ್ತಾಟ ನಡೆದಿದೆ. ‘
ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ (Vinay Gowda) ಹಾಗೂ ಪ್ರತಾಪ್ ಮಧ್ಯೆ ಸಾಕಷ್ಟು ಕಿತ್ತಾಟ ನಡೆಯುತ್ತಿದೆ. ಜನವರಿ 8ರ ಎಪಿಸೋಡ್ನಲ್ಲಿ ಇಬ್ಬರೂ ಜಗಳ ಮಾಡಿಕೊಂಡಿದ್ದರು. ಪ್ರತಾಪ್ ಬಗ್ಗೆ ವಿನಯ್ ಕೆಟ್ಟ ಶಬ್ದ ಪ್ರಯೋಗ ಮಾಡಿದ್ದರು. ಈಗ ನಾಮಿನೇಷನ್ ಪ್ರಕ್ರಿಯೆಯಲ್ಲೂ ಇಬ್ಬರ ಮಧ್ಯೆ ಕಿತ್ತಾಟ ನಡೆದಿದೆ. ‘ಫಿನಾಲೆ ತಲುಪಲು ಅರ್ಹತೆ ಇಲ್ಲದ ಸ್ಪರ್ಧಿಗಳ ಹೆಸರನ್ನು ಸೂಚಿಸಿ’ ಎಂದರು ಬಿಗ್ ಬಾಸ್. ವಿನಯ್ ಅವರು ಪ್ರತಾಪ್ನ ಹೆಸರನ್ನು ಸೂಚಿಸಿದರು. ಆ ಬಳಿಕ ಮಾತನಾಡಿದ ಪ್ರತಾಪ್, ‘ಎಲ್ಲಿಯವರೆಗೆ ವಿನಯ್ ನಾಲಿಗೆಗೆ ಲಗಾಮು ಬೀಳುವುದಿಲ್ಲವೋ ಅಲ್ಲಿಯವರೆಗೆ ಅವರಿಗೆ ಇಲ್ಲಿರೋಕೆ ಅರ್ಹತೆ ಇಲ್ಲ’ ಎಂದು ಪ್ರತಾಪ್ ಕಾರಣ ನೀಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಇಂದು (ಜನವರಿ 9) ಈ ಎಪಿಸೋಡ್ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ