ಗ್ರಾಮದಲ್ಲಿ ಶುರುವಾಯ್ತು ಹೆಬ್ಬಾವುಗಳ ಕಾಟ; ಆಹಾರಕ್ಕಾಗಿ ಕಾಡು ಬಿಟ್ಟು ನಾಡಿಗೆ ಬರುತ್ತಿವೆ ಫೈತಾನ್; ವಿಡಿಯೋ ವೈರಲ್
ಜಿಲ್ಲೆ ಮದ್ದೂರು ತಾಲೂಕಿನ ಮೂಡಲದೊಡ್ಡಿ ಗ್ರಾಮದಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದೆ. ಹೌದು ಇಂದು(ಜೂ.13) ಮುಂಜಾನೆ ಮತ್ತೊಂದು ಹೆಬ್ಬಾವು ಕಾಣಿಸಿಕೊಂಡಿದ್ದು, ಯುವಕರ ತಂಡ ಅದನ್ನ ಸರೆ ಹಿಡಿದು ರಕ್ಷಣೆ ಮಾಡಿದ್ದಾರೆ.
ಮಂಡ್ಯ: ಜಿಲ್ಲೆ ಮದ್ದೂರು(Maddur) ತಾಲೂಕಿನ ಮೂಡಲದೊಡ್ಡಿ ಗ್ರಾಮದಲ್ಲಿ ಹೆಬ್ಬಾವು(Python) ಪ್ರತ್ಯಕ್ಷವಾಗಿದೆ. ಹೌದು ಇಂದು(ಜೂ.13) ಮುಂಜಾನೆ ಮತ್ತೊಂದು ಹೆಬ್ಬಾವು ಕಾಣಿಸಿಕೊಂಡಿದ್ದು, ಯುವಕರ ತಂಡ ಅದನ್ನ ಸರೆ ಹಿಡಿದು ರಕ್ಷಣೆ ಮಾಡಿದ್ದಾರೆ. ಈ ಗ್ರಾಮದಲ್ಲಿ ಆರು ತಿಂಗಳಿಂದ ಈಚೇಗೆ 6 ನೇ ಹೆಬ್ಬಾವನ್ನ ಯುವಕರು ರಕ್ಷಣೆ ಮಾಡುತ್ತಿದ್ದಾರೆ. ಈ ಹಿಂದೆ ಕೂಡ ಈ ಗ್ರಾಮದಲ್ಲಿ ಐದಾರು ಹೆಬ್ಬಾವುಗಳನ್ನು ಈ ಯುವಕರ ತಂಡ ರಕ್ಷಣೆ ಮಾಡಿತ್ತು. ಇದೀಗ ಮತ್ತೊಂದು ಹೆಬ್ಬಾವು ಗ್ರಾಮದಲ್ಲಿ ಕಾಣಿಸಿಕೊಂಡಿದೆ. ಐದಾರು ಮರಿಯೊಂದಿಗೆ ಇದ್ದ ಹೆಬ್ಬಾವನ್ನ ನೋಡಿದ ಗ್ರಾಮಸ್ಥರು ಯುವಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಉರಗ ತಜ್ಞ ಕೀರ್ತಿ ಹಾಗೂ ಸ್ನೇಹಿತರ ತಂಡ ಬಂದಿದ್ದು, ತಾಯಿ ಹೆಬ್ಬಾವು ರಕ್ಷಣೆ ಮಾಡುವಷ್ಟರಲ್ಲಿ ಮರಿ ಹೆಬ್ಬಾವುಗಳು ನಾಪತ್ತೆಯಾಗಿವೆ. ಗ್ರಾಮದಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹೆಬ್ಬಾವುಗಳ ಸಂತತಿ, ಗ್ರಾಮದಲ್ಲಿ ಹೆಚ್ಚಾಗಿರೋದಕ್ಕೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ