ತುಂಬಿ ಹರಿಯುತ್ತಿದ್ದ ಹೊಳೆಯ ಸೇತುವೆ ಮೇಲೆ ಶಾಲಾವಾಹನವನ್ನು ಓಡಿಸಿದ ಅವಿವೇಕಿ ಚಾಲಕ
ಶಾಲಾಮಕ್ಕಳನ್ನು ಹೊತ್ತ ವಾಹನದ ಚಾಲಕ ಸೇತುವೆ ದಾಟಿಸಿದ್ದು ಅಕ್ಷಮ್ಯ. ಅವನು ಮಕ್ಕಳನ್ನು ವಾಪಸ್ಸು ಮನೆಗಳಿಗೆ ಕರೆದೊಯ್ದಿದ್ದರೆ ಯಾರೂ ಪ್ರಶ್ನಿಸುತ್ತಿರಲಿಲ್ಲ, ಒಳ್ಳೇದು ಮಾಡಿದೆ ಅಂತ ಪೋಷಕರ ಜೊತೆ ಶಾಲಾ ಆಡಳಿತ ಮಂಡಳಿಯೂ ಹೇಳುತಿತ್ತು. ಏನಾದರೂ ಹೆಚ್ಚು ಕಡಿಮೆಯಾಗಿದ್ದರೆ ಅದಕ್ಕೆ ಅವನೇ ಹೊಣೆಗಾರನಾಗಿರುತ್ತಿದ್ದ. ವಾಹನದಲ್ಲಿ ಹೆಚ್ಚು ಮಕ್ಕಳಿಲ್ಲದಿರೋದು ಬೇರೆ ವಿಚಾರ.
ರಾಯಚೂರು, ಜೂನ್ 12: ಹುಚ್ಚು ಸಾಹಸಗಳು ಬೇಡವೆಂದರೂ ಜನಕ್ಕೆ ಅರ್ಥವಾಗದಿರೋದು ನಂಬಲಾಗದ ಸನ್ನಿವೇಶ. ಜಿಲ್ಲೆಯ ಸಿಂಧನೂರು ತಾಲ್ಲೂಕಿನ (Sindhanur taluk) ಗೋನ್ವಾರ ಹೆಸರಿನ ಗ್ರಾಮದ ಹೊರವಲಯದಲ್ಲಿರುವ ಸೇತುವೆ ಮೇಲೆ ಮೊಣಕಾಲುಮಟ್ಟ ನೀರು ಹರಿಯುತ್ತಿದೆ. ರಾತ್ರಿ ಸುರಿದ ಧಾರಾಕಾರ ಮಳೆಯಿಂದ ತಾಲೂಕಿನ ಹಳ್ಳಕೊಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. ಸೇತುವೆ ಮೇಲೆ ವಾಹನ ಓಡಿಸಿಕೊಂಡು ಹೋಗುವುದು ಅಪಾಯಕಾರಿ ಅಂತ ಗೊತ್ತಿದ್ದರೂ ದ್ಚಿಚಕ್ರವಾಹನ, ಕೆಎಸ್ಆರ್ಟಿಸಿ ಬಸ್ಸು ಮತ್ತು ಶಾಲಾವಾಹನವೊಂದು ಹರಿಯುವ ನೀರಲ್ಲಿ ಅದನ್ನು ದಾಟಿವೆ. ಪುಣ್ಯಕ್ಕೆ ಅಪಾಯವೇನೂ ಸಂಭವಿಸಿಲ್ಲ.
ಇದನ್ನೂ ಓದಿ: ಬೆಳಗಾವಿ: ಜಲಾವೃತವಾದ ಸೇತುವೆ ಮೇಲೆ ವಾಹನ ಸಂಚಾರ; ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್ಕೇರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ