Vijaya Sankalp Yatre: ಬಿಎಸ್ ಯಡಿಯೂರಪ್ಪರ ಬಗ್ಗೆ ಅತೀವ ಕಾಳಜಿ ಪ್ರದರ್ಶಿಸಿದ ಭದ್ರತಾ ಸಿಬ್ಬಂದಿ
ಮಾಜಿ ಮುಖ್ಯಮಂತ್ರಿಗಳು ಹೆಲಿಕಾಪ್ಟರ್ ಮೂಲಕ ಚಿಕ್ಕಮಗಳೂರು ತಲುಪಿ ಹೆಲಿಪ್ಯಾಡ್ ಬಳಿ ಕಾರು ಹತ್ತುವಾಗ ಅವರ ತಲೆ ವಾಹನದ ಟಾಪ್ ಗೆ ತಾಕೀತು ಅಂತ ಭದ್ರತೆಗೆ ನಿಯೋಜಿಸಲ್ಪಟ್ಟ ಸಿಬ್ಬಂದಿಯೊಬ್ಬರು ಕೈ ಅಡ್ಡ ಹಿಡಿದಿದ್ದು ನೋಡುಗರಿಗೆ ಅಪ್ಯಾಯಮಾನವೆನಿಸಿತು.
ಚಿಕ್ಕಮಗಳೂರು: ಕಾಫಿನಾಡು ಎಂದು ಕರೆಸಿಕೊಳ್ಳುವ ಚಿಕ್ಕ,ಮಗಳೂರಲ್ಲಿ ಇಂದು ಬಿಎಸ್ ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ (Vijaya Sankalp Yatre) ಶುರುವಾಯಿತು. ಮಾಜಿ ಮುಖ್ಯಮಂತ್ರಿಗಳು ಹೆಲಿಕಾಪ್ಟರ್ ಮೂಲಕ ಚಿಕ್ಕಮಗಳೂರು ತಲುಪಿ ಹೆಲಿಪ್ಯಾಡ್ ಬಳಿ ಕಾರು ಹತ್ತುವಾಗ ಅವರ ತಲೆ ವಾಹನದ ಟಾಪ್ ಗೆ ತಾಕೀತು ಅಂತ ಭದ್ರತೆಗೆ ನಿಯೋಜಿಸಲ್ಪಟ್ಟ ಸಿಬ್ಬಂದಿಯೊಬ್ಬರು ಕೈ ಅಡ್ಡ ಹಿಡಿದಿದ್ದು ನೋಡುಗರಿಗೆ ಅಪ್ಯಾಯಮಾನವೆನಿಸಿತು. ಯಡಿಯೂರಪ್ಪನವರು ಕಾರೊಳಗೆ ಸೆಟ್ಲ್ ಅದ ಬಳಿಕವೇ ಅವರು ಕೈ ಸರಿಸುತ್ತಾರೆ. ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ (Sadananda Gowda) ಮತ್ತು ಸ್ಥಳೀಯ ಬಿಜೆಪಿ ನಾಯಕರು ಯಡಿಯೂರಪ್ಪನವರೊಂದಿಗೆ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ