Gadag: ವಿಜಯ ಸಂಕಲ್ಪ ಯಾತ್ರೆಯಲ್ಲಿ ಬೈಕ್ ರ‍್ಯಾಲಿ, ಪುಕ್ಕಟೆ ಪೆಟ್ರೋಲು, ಬಂಕ್ ಮುಂದೆ ನೂಕುನುಗ್ಗಲು!
ಗದಗ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ರೋಡ್ ಶೋ ನಡೆಸುತ್ತಿದ್ದಾರೆ ಅದರ ಜೊತೆಗೆ ಬೈಕ್ ರ‍್ಯಾಲಿ ಕೂಡ ನಡೆಯುತ್ತಿದೆ.
ಗದಗ: ಇಲ್ಲ ನೀವಂದುಕೊಳ್ಳುತ್ತಿರುವಂತೆ ಪೆಟ್ರೋಲ್ ಅಭಾವ ಎದುರಾಗಿದೆ ಅಂತೇನೂ ಸರ್ಕಾರ ಘೋಷಿಸಿಲ್ಲ, ಇದು ಎಲೆಕ್ಷನ್ ಟೈಮು ಸ್ವಾಮಿ, ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರಿಂದ ಕೂಪನ್ (coupon) ಪಡೆದು ವಾಹನಗಳಿಗೆ ಪುಕ್ಕಟೆಯಾಗಿ ಪೆಟ್ರೋಲ್ ತುಂಬಿಸಿಕೊಂಡವನೇ ಜಾಣ! ಈ ದೃಶ್ಯ ಕಂಡುಬಂದಿದ್ದು ಗದಗ-ಮುಳುಗುಂದ (Gadag-Mulgund) ರಸ್ತೆಯಲ್ಲಿರುವ ಪೆಟ್ರೋಲ್ ಬಂಕೊಂದರ ಮುಂದೆ. ಈ ಭಾಗದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ರೋಡ್ ಶೋ ನಡೆಸುತ್ತಿದ್ದಾರೆ ಅದರ ಜೊತೆಗೆ ಬೈಕ್ ರ‍್ಯಾಲಿ ಕೂಡ ನಡೆಯುತ್ತಿದೆ. ವಾಹನಗಳಿಗೆ ಪೆಟ್ರೋಲ್ ತುಂಬಿಸಿಕೊಂಡವೆರೆಲ್ಲ ರ‍್ಯಾಲಿಯಲ್ಲಿ ಭಾಗಿಯಾಗುತ್ತಾರೆಯೇ? ಗೊತ್ತಿಲ್ಲ ಮಾರಾಯ್ರೇ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos