ಗದಗ: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕವಿನ್ನೂ ಘೋಷಣೆಯಾಗಿಲ್ಲ, ಮತ್ತು ಲೋಕಸಭಾ ಚುನಾವಣೆಗೆ ಒಂದೂ ಕಾಲು ವರ್ಷ ಬಾಕಿಯಿದೆ. ಅದರೆ ಚುನಾವಣೆಗಳು ನಡೆಯದೆ ರಾಜ್ಯದ ಕೆಲ ಸಚಿವರು ಹಾಗೂ ಶಾಸಕರಿಗೆ ಕೇಂದ್ರ ಸಚಿವರಾಗಿ ಬಡ್ತಿ ಸಿಕ್ಕಿದೆ, ಹೇಗೆ ಅಂದ್ರಾ? ಈ ಪೋಸ್ಟರ್ ಗಳನ್ನು ನೋಡಿ. ನಗರದಲ್ಲಿ ವಿಜಯ ಸಂಕಲ್ಪ ಯಾತ್ರೆ ಭಾಗವಾಗಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಊರಲ್ಲೆಲ್ಲ ಪೋಸ್ಟರ್ ಗಳನ್ನು (poster) ಮೆತ್ತಿದ್ದಾರೆ. ಆದರೆ, ಅವರು ಪೋಸ್ಟರ್ನಲ್ಲಿ ವಿಷಯ ಹಾಕಿಸುವಾಗ ಪ್ರಮಾದವೆಸಗಿದ್ದಾರೆ. ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu), ನೀರಾವರಿ ಸಚಿವ ಗೋವಿಂದ ಕಾರಜೋಳ (Govind Karjol), ಶಾಸಕ ರಮೇಶ್ ಜಾರಕಿಹೊಳಿ, ಸಂಸದ ತೇಜಸ್ವೀ ಸೂರ್ಯ ಮತ್ತು ಬಿಜೆಪಿ ಮುಖಂಡ ಅನಿಲ್ ಮೆಣಸಿನಾಕಾಯಿ ಮೊದಲಾದವರನ್ನೆಲ್ಲ ಕೇಂದ್ರ ಸಚಿವರೆಂದು ಉಲ್ಲೇಖಿಸಲಾಗಿದೆ! ಕಾರ್ಯಕರ್ತರ ಯಡವಟ್ಟು ಯಾರ ಗಮನಕ್ಕೂ ಬಾರದೆ ಹೋಗಿದ್ದು ಅಚ್ಚರಿ ಹುಟ್ಟಿಸುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ