NityaBhavishya: ಶುಕ್ರವಾರದ ಶುಭದಿನದಂದು, ನಿಮ್ಮ ರಾಶಿಭವಿಷ್ಯ ಏನು ಹೇಳುತ್ತವೆ ಎಂದು ತಿಳಿದುಕೊಳ್ಳಲು ವಿಡಿಯೋ ನೋಡಿ
ಮಂಗಳವಾರ 16 ಮಾರ್ಚ್ 2023ರಂದು ನಿಮ್ಮ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿಯಿಂದ ತಿಳಿದುಕೊಳ್ಳಿ.
ಶುಭೋದಯ ಓದುಗರೇ, ಶುಕ್ರವಾರ ಬಹಳ ವಿಶೇಷವಾದ ದಿನವಾಗಿದೆ. ಇಂದು ಲಕ್ಷ್ಮಿ ದೇವಿಯ ಆರಾಧನೆಗೆ ಸೂಕ್ತವಾದ ದಿನ. ಹಾಗೇ ನವಶಕ್ತಿಯರನ್ನು ಪೂಜಿಸಿದರೇ ಇಷ್ಟಾರ್ಥಗಳು ಸಿದ್ದಿಸುತ್ತವೆ. ಮಂತ್ರಗಳಲ್ಲೇ ಶ್ರೇಷ್ಠವಾದ ಮಂತ್ರವಾದ ಗಾಯತ್ರಿ ಮಂತ್ರ ಆದಿಶಕ್ತಿಯರ ಆರಾಧನೆಗೆ ಬಹಳ ಯೋಗ್ಯವಾಗಿದೆ. ಪ್ರತಿದಿನ 108 ಬಾರಿ ಗಾಯತ್ರಿ ಮಂತ್ರ ಜಪಿಸಿದರೆ ಇಷ್ಟಾರ್ಥಗಳು ಸಿದ್ದಿಯಾಗುತ್ತವೆ. ಇದರಿಂದ ನಾವು ಮಾಡುವ ಕಾರ್ಯಗಳು ಶುಭವಾಗಿರುತ್ತವೆ. ಶುದ್ಧ ಮನಸ್ಸಿನಿಂದ, ಶುದ್ಧ ಹಸ್ತದಿಂದ ಯಾವುದೇ ಒಳ್ಳೆ ಕಾರ್ಯ ಮಾಡಿದರು ಯಶಸ್ಸು ಖಂಡಿತವಾಗಿಯೂ ಲಭಿಸುತ್ತದೆ. ಪ್ರತಿ ದಿನ ಸೂರ್ಯ, ಚಂದ್ರ ಹುಟ್ಟುತ್ತಾರೆ. ಭೂಮಿ ತಿರುಗುತ್ತಿರುತ್ತೆ. ಪ್ರತಿಯೊಬ್ಬರ ಜೀವನವು ನಡೆಯುತ್ತಲೇ ಇರುತ್ತೆ. ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮಾರ್ಚ್ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿಯಿಂದ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ :ಶುಕ್ರ, ತಿಥಿ : ದಶಮೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ವರಿಯಾನ್, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 40 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 11:11-12:41ರ ವರೆಗೆ, ಯಮಘಂಡ ಕಾಲ 03:42-05:12ರವರೆಗೆ, ಗುಳಿಕ ಕಾಲ ಬೆಳಗ್ಗೆ08:11-09:41ರ ವರೆಗೆ.