ಬೆಂಗಳೂರಿನಲ್ಲಿ ಮಧ್ಯಾಹ್ನವೇ ಒಂಟಿ ಮಹಿಳೆಯ ಮನೆಗೆ ನುಗ್ಗಿ ದರೋಡೆ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರಿನಲ್ಲಿ ಮಧ್ಯಾಹ್ನವೇ ಒಂಟಿ ಮಹಿಳೆಯ ಮನೆಗೆ ನುಗ್ಗಿ ದರೋಡೆ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 22, 2023 | 5:03 PM

ಮಧ್ಯಾಹ್ನವೇ ಸಿನಿಮೀಯಾ ರೀತಿಯಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ದರೋಡೆ(Robbery) ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿ(Thotada Guddadahalli)ಯಲ್ಲಿ ನಡೆದಿದೆ. ರಾಜಸ್ಥಾನದ ಮಾಣಿಕ್ ರಾಮ್ ಮತ್ತು ಮಧು ದಂಪತಿಗಳ ಮನೆಯಲ್ಲಿ ಈ ಕೃತ್ಯ ನಡೆದಿದೆ.

ಬೆಂಗಳೂರು, ಡಿ.22: ಮಧ್ಯಾಹ್ನವೇ ಸಿನಿಮೀಯಾ ರೀತಿಯಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ದರೋಡೆ(Robbery) ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿ(Thotada Guddadahalli)ಯಲ್ಲಿ ನಡೆದಿದೆ. ರಾಜಸ್ಥಾನದ ಮಾಣಿಕ್ ರಾಮ್ ಮತ್ತು ಮಧು ದಂಪತಿಗಳ ಮನೆಯಲ್ಲಿ ಈ ಕೃತ್ಯ ನಡೆದಿದೆ. ಮಾಣಿಕ್ ರಾಮ್ ಅವರು ಮಾದನಾಯಕನಹಳ್ಳಿಯಲ್ಲಿ ಚಿಕ್ಕದೊಂದು ಜ್ಯುವೇಲರಿ ಶಾಫ್​ ಇಟ್ಟುಕೊಂಡಿದ್ದು, ಇಂದು ಅವರು ತೆರಳುತ್ತಿದ್ದಂತೆ ಖದೀಮರು ಎಂಟ್ರಿ ಕೊಟ್ಟಿದ್ದರು. ಮನೆಗೆ ನುಗ್ಗಿ ಪತ್ನಿಗೆ ಗಮ್ ಟೇಪ್ ಬಳಸಿ ಮುಖಕ್ಕೆ ಹಾಗೂ ಕೈಕಾಲುಗಳನ್ನ ಕಟ್ಟಿ ಹಾಕಿದ್ದಾರೆ. ಇನ್ನು ಖದೀಮರು ಸೇಠು ಮನೆಯಲ್ಲಿ ಅಪಾರ ಪ್ರಮಾಣ ಹಣ, ಚಿನ್ನ ಇರುತ್ತದೆ ಎಂದು ದರೋಡೆ ನಡೆಸಿದ್ದರು. ಆದರೆ, ಮನೆಯಲ್ಲ ತಡಕಾಡಿದರೂ ಕೇವಲ 5 ಸಾವಿರ ಹಣ ಮಾತ್ರ ಸಿಕ್ಕಿದೆ. ಇನ್ನು ಬಳಿಕ ಜ್ಯುವೇಲರಿ ಶಾಫ್​ ಅಂಗಡಿಯಿಂದ ಕೆಲಸದ ಹುಡುಗ, ಮನೆ ಬಳಿ ಬರುತ್ತಲೇ. ಆತನನ್ನು ನೂಕಿ ದರೋಡೆ ಕೋರರು ಪರಾರಿಯಾಗಿದ್ದಾರೆ. ಸಿಸಿಟಿವಿಯಲ್ಲಿ 4 ಆರೋಪಿಗಳು ಓಡುತ್ತಿರುವ ಲಭ್ಯವಾಗಿದ್ದು, ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ