ಕಿದ್ವಾಯಿ ಆಸ್ಪತ್ರೆ ಶಂಕುಸ್ಥಾಪನೆ ನೆರವೇರಿಸಿ ಮಾತಾಡುವಾಗ ಒಬ್ಬ ಡಾಕ್ಟರ್ ಹಾಗೆ ವೈದ್ಯಕೀಯ ಜ್ಞಾನ ಪ್ರದರ್ಶಿಸಿದ ಸಿದ್ದರಾಮಯ್ಯ!

ಕಿದ್ವಾಯಿ ಆಸ್ಪತ್ರೆ ಶಂಕುಸ್ಥಾಪನೆ ನೆರವೇರಿಸಿ ಮಾತಾಡುವಾಗ ಒಬ್ಬ ಡಾಕ್ಟರ್ ಹಾಗೆ ವೈದ್ಯಕೀಯ ಜ್ಞಾನ ಪ್ರದರ್ಶಿಸಿದ ಸಿದ್ದರಾಮಯ್ಯ!

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 22, 2023 | 6:08 PM

ಮಾತಾಡುವಾಗ ತಮ್ಮ ಕಾಲೇಜು ದಿನಗಳನ್ನು ಮೆಲಕು ಹಾಕಿದ ಸಿದ್ದರಾಮಯ್ಯ ತಮಗೆ ಡಾಕ್ಟರ್ ಆಗುವ ಮನಸ್ಸಿತ್ತು ಅದರೆ ಪಿಯುನಲ್ಲಿ ಕಡಿಮೆ ಅಂಕ ಗಳಿಸಿದ ಕಾರಣ ಬಿಎಸ್ಸಿಗೆ ಸೇರಬೇಕಾಯಿತು ಎಂದು ಹೇಳಿದರು. ತಾನು ವೈದ್ಯನಾಗಿದ್ದರೆ, ಚೀಫ್ ಮಿನಿಸ್ಟರ್ ಆಗುತ್ತಿರಲಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ಆಗೋದೆಲ್ಲ ಒಳ್ಳೆಯದಕ್ಕೆ ಅಂದಾಗ ಜನ ಮತ್ತೇ ಜೋರಾಗಿ ನಕ್ಕರು.

ಮೈಸೂರು: ನಗರದಲ್ಲಿಂದು ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳಿಗೆ ಕಿದ್ವಾಯಿ ಆಸ್ಪತ್ರೆಯ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಭಾಷಣ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ರಾಜಕಾರಣಿಗಿಂತ ಜಾಸ್ತಿ ಒಬ್ಬ ಪರಿಣಿತ ವೈದ್ಯನ (expert doctor) ಹಾಗೆ ಕಂಡರು! ಜೆಡಿಎಸ್ ಶಾಸಕ ಹರೀಶ್ ಗೌಡ (JDS MLA Harish Gowda) ಮೈಸೂರಿಗೆ ಮೂತ್ರಪಿಂಡದ ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸುವ ಒಂದು ನೆಫ್ರಾಲಜಿ ಆಸ್ಪತ್ರೆ ಬೇಕಾಗಿದೆ ಅಂತ ಕೇಳಿರುವುದನ್ನು ಹೇಳಿದ ಸಿದ್ದರಾಮಯ್ಯ, ನೆಫ್ರಾಲಜಿಯ ಅರ್ಥವಿವರಣೆಗೆ ಮುಂದಾದರು. ವೇದಿಕೆ ಮೇಲಿದ್ದ ಮಹಿಳೆಯೊಬ್ಬರು ಡಯಾಲಿಸಿಸ್ ಸೆಂಟರ್ ಅಂತ ಹೇಳಿದಾಗ, ಡಯಾಲಿಸಿಸ್ ಅಲ್ಲಮ್ಮ ನೆಫ್ರಾಲಜಿ ಅಂದರೆ ಕಿಡ್ನಿಗೆ ಸಂಬಂಧಪಟ್ಟಿದ್ದು ಅನ್ನುತ್ತಾರೆ. ಮುಂದುವರಿದು ಮಾತಾಡುವ ಅವರು, ಈಗ ವೈದ್ಯಕೀಯ ವಿಜ್ಞಾನ ಎಷ್ಟು ಮುಂದುವರಿದಿದೆ ಅಂದರೆ, ಕಿಡ್ನಿ, ಶ್ವಾಸಕೋಶ, ಹೃದಯ, ಲಿವರ್ ಮೊದಲಾದವುಗಳನ್ನೆಲ್ಲ ಕಸಿ ಮಾಡುತ್ತಾರೆ ಅಂತ ಹೇಳಿದರು. ಕಸಿ ಮಾಡೋದ್ರಲ್ಲಿ ಈಗ ಉಳಿದಿರೋದು ಒಂದೇ ಅಂತ ಸಿದ್ದರಾಮಯ್ಯ ಹೇಳಿ ಅಲ್ಪವಿರಾಮ ಹಾಕಿದಾಗ ಬೇರೇನೋ ಅರ್ಥೈಸಿಕೊಳ್ಳುವ ಜನ ಗೊಳ್ಳೆಂದು ನಗಲಾರಂಭಿಸುತ್ತಾರೆ. ಅವರು ಯಾಕೆ ನಕ್ಕಿರಬಹುದೆಂದು ಯೋಚಿಸದ ಮುಖ್ಯಮಂತ್ರಿಯವರು, ಮೆದುಳು ಟ್ರಾನ್ಸ್ ಪ್ಲ್ಯಾಂಟ್ ಮಾಡೋದೊಂದು ಬಾಕಿಯುಳಿದಿದೆ ಅನ್ನುತ್ತಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ