ಅರ್ಚಕ ಕೆಲಸ ಬಿಡಿಸಿದ್ದಕ್ಕೆ ನದಿಯ ನಡುಗಡ್ಡೆಯಲ್ಲಿ ಕುಳಿತು ಧರಣಿ; ಪತಿಯನ್ನು ಹೊರ ತರುವಂತೆ ಪತ್ನಿ, ಇಬ್ಬರು ಮಕ್ಕಳಿಂದ ಮನವಿ
ಅರ್ಚಕ ಕೆಲಸ ಬಿಡಿಸಿದ್ದಕ್ಕೆ ಮಾರುತಿ ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ದೇವೇಂದ್ರ ಶರ್ಮಾ ಎಂಬುವವರು ಮಲಪ್ರಭಾ ನದಿ ನಡುಗಡ್ಡೆಯಲ್ಲಿ ಕುಳಿತು ಧರಣಿ ನಡೆಸುತ್ತಿರುವ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಬಳಿ ನಡೆದಿದೆ.
ಬೆಳಗಾವಿ: ಅರ್ಚಕ ಕೆಲಸ ಬಿಡಿಸಿದ್ದಕ್ಕೆ ಮಾರುತಿ ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ದೇವೇಂದ್ರ ಶರ್ಮಾ ಎಂಬುವವರು ಮಲಪ್ರಭಾ ನದಿ ನಡುಗಡ್ಡೆಯಲ್ಲಿ ಕುಳಿತು ಧರಣಿ ನಡೆಸುತ್ತಿರುವ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಬಳಿ ನಡೆದಿದೆ. ಅರ್ಚಕ ಕೆಲಸಕ್ಕಾಗಿ ಹರಿಯಾಣದಿಂದ ಬಂದಿದ್ದ ದೇವೇಂದ್ರ ಶರ್ಮಾ. ಸರಿಯಾಗಿ ಕರ್ತವ್ಯ ನಿರ್ವಹಿಸದ ಹಿನ್ನಲೆ ಅರ್ಚಕ ಕೆಲಸದಿಂದ ಬಿಡಿಸಿದ್ದರು. ಈ ಕಾರಣಕ್ಕೆ ನದಿಯ ನಡುಗಡ್ಡೆಯಲ್ಲಿ ಧರಣಿ ನಡೆಸಿದ್ದು, ಇದೀಗ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿರುವ ಹಿನ್ನೆಲೆ ದೇವೇಂದ್ರರನ್ನು ಹೊರ ತರುವಂತೆ ಪತ್ನಿ, ಇಬ್ಬರು ಮಕ್ಕಳಿಂದ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ