ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ದೋಸೆ ತಯಾರಿಸಿ ರಾಷ್ಟ್ರಾಭಿಮವನ್ನು ಮೆರೆದರು ಜೇವರ್ಗಿಯಲ್ಲಿ ಹೋಟೆಲ್ ನಡೆಸುವ ರವಿಸಿಂಗ್!
ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಭಾರತೀಯರಿಗೆ ಅತಿದೊಡ್ಡ ಹಬ್ಬಗಳು. ಈ ಹಬ್ಬಗಳನ್ನು ಪ್ರತಿಯೊಬ್ಬ ಭಾರತೀಯ ಆಚರಿಸುತ್ತಾನೆ. ಈ ಹಬ್ಬಗಳ ಆಚರಣೆಗೆ ಧರ್ಮ, ಜಾತಿ ಯಾವುದೂ ಆಡ್ಡಿಯಾಗುವುದಿಲ್ಲ.
ಗಣರಾಜ್ಯೋತ್ಸವ ದಿನವನ್ನು (Republic Day) ಭಾರತದಲ್ಲಿಂದು ಸಡಗರ, ಸಂಭ್ರಮ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆಚರಿಸುವ ಉದ್ದೇಶ ಒಂದೇ ಆದರೂ ವಿಧಾನಗಳು ಬೇರೆ ಬೇರೆಯಾಗಿರುತ್ತವೆ ಅನ್ನೋದು ಸುಳ್ಳಲ್ಲ. ಈ ದಿನದಂದು ಭಾರತದೆಲ್ಲೆಡೆ ಸಾಂಸ್ಕೃತಿಕ ಚಟುವಟಿಕೆಗಳನ್ನು (cultural activities) ಹಮ್ಮಿಕೊಳ್ಳಲಾಗುತ್ತದೆ. ಆದರೆ ಪ್ರತಿ ಚಟುವಟಿಕೆಯಲ್ಲೂ ರಾಷ್ಟ್ರಪ್ರೇಮ (patriotism), ರಾಷ್ಟ್ರಾಭಿಮಾನದ ಕುರುಹು ಕಾಣುತ್ತದೆ. ನಮಗೆ ಕಲಬುರಗಿ ಜಿಲ್ಲೆಯ ಜೇವರ್ಗಿ (Jewargi) ಪಟ್ಟಣದಿಂದ ಈ ವಿಡಿಯೋ ಲಭ್ಯವಾಗಿದೆ. ಇದೊಂದು ಬೀದಿಬದಿಯ ಹೋಟೆಲ್. ಸಾಮಾನ್ಯವಾಗಿ ಈ ಭಾಗದಲ್ಲಿ ಇಂಥ ಹೋಟೆಲ್ಗಳನ್ನು ತಟ್ಟಿ ಹೋಟೆಲ್ ಅಂತ ಕರೆಯುತ್ತಾರೆ. ಹೋಟೆಲ್ ಮಾಲೀಕ ಇವರೇ, ದೋಸೆ ಹಾಕುತ್ತಿರುವ ರವಿಸಿಂಗ್. ತಮ್ಮ ರಾಷ್ಟ್ರಾಭಿಮಾನವನ್ನು ರವಿಸಿಂಗ್ ದೋಸೆ ಹಾಕುವುದರಲ್ಲಿ ತೋರುತ್ತಿದ್ದಾರೆ!
ನಿಮಗೆ ಕಾಣುತ್ತಿರುವ ಹಾಗೆ ಅವರು ನಮ್ಮ ರಾಷ್ಟ್ರಧ್ವಜ ಹೊಂದಿರುವ ಮೂರು ಬಣ್ಣ-ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಲ್ಲಿ ದೋಸೆ ಸಿದ್ಧಪಡಿಸಿ ತಮ್ಮ ಗ್ರಾಹಕರಿಗೆ ನೀಡುತ್ತಿದ್ದಾರೆ. ಗ್ರಾಹಕರು ಸಹ ಅಷ್ಟೇ ಅಭಿಮಾನದಿಂದ ತ್ರಿವರ್ಣದ ದೋಸೆಗಳನ್ನು ಇಷ್ಟಪಟ್ಟು ತಿನ್ನುತ್ತಿದ್ದಾರೆ.
ಅದಕ್ಕೇ ನಾವು ಹೇಳಿದ್ದು, ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಭಾರತೀಯರಿಗೆ ಅತಿದೊಡ್ಡ ಹಬ್ಬಗಳು. ಈ ಹಬ್ಬಗಳನ್ನು ಪ್ರತಿಯೊಬ್ಬ ಭಾರತೀಯ ಆಚರಿಸುತ್ತಾನೆ. ಈ ಹಬ್ಬಗಳ ಆಚರಣೆಗೆ ಧರ್ಮ, ಜಾತಿ ಯಾವುದೂ ಆಡ್ಡಿಯಾಗುವುದಿಲ್ಲ.
ಎಲ್ಲ ಸಮುದಾಯಗಳು ಒಟ್ಟಾಗಿ, ಶಾಲಾ-ಕಾಲೇಜುಗಳಲ್ಲಿ, ಕೋರ್ಟು-ಕಚೇರಿಗಳಲ್ಲಿ, ಕ್ರೀಡಾಂಗಣಗಳಲ್ಲಿ, ಪೌರಸೇವೆ ಒದಗಿಸುವ ಕಚೇರಿಗಳಲ್ಲಿ ಸಡಗರದಿಂದ ಆಚರಿಸಲಾಗುತ್ತೆ. ವೈವಿಧ್ಯತೆಯಲ್ಲಿ ಏಕತೆ ಅನ್ನೋದು ನಮ್ಮ ದೇಶಕ್ಕೆ ಮಾತ್ರ ಅನ್ವಯಿಸುವ ಉಕ್ತಿಯಾಗಿದೆ.
ಭಾರತ್ ಮಾತಾ ಕೀ ಜೈ, ಜೈ ಹಿಂದ್!!
ಇದನ್ನೂ ಓದಿ: ಮೊದಲ ಬಾರಿಗೆ ಸಮೋಸಾ ತಿಂದ ಇಟಾಲಿಯನ್ ವ್ಯಕ್ತಿ; ಆತನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..? ಇಲ್ಲಿದೆ ವೈರಲ್ ವಿಡಿಯೋ