ಜೋಗದಲ್ಲಿ ತಾಯಿಗೆ ಪಾರ್ಶ್ವವಾಯು ಸ್ಟ್ರೋಕ್ ಆದಾಗ ಆಸ್ಪತ್ರೆಗೆ ಸೇರಿಸಲು ಮಗ ಡೋಲಿ ಮಾಡಿಕೊಂಡು ಹೊತ್ತು ತರಬೇಕಾಯಿತು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 31, 2022 | 4:13 PM

ಅವರು ನಡೆದು ಬರುತ್ತಿರುವ ದಾರಿ ಕೂಡ ದುರ್ಗಮವಾಗಿದೆ. ತೀರಾ ಇಕ್ಕಟ್ಟಾದ ರಸ್ತೆ ಮತ್ತು ಒಂದು ಬದಿಯಲ್ಲಿ ಪ್ರಪಾತ. ಅವರು ನಡೆದು ಬರುವಾಗ ಮಳೆ ಸುರಿಯದಿರುವುದು ಅದೃಷ್ಟವಲ್ಲದೆ ಮತ್ತೇನೂ ಅಲ್ಲ.

Shivamogga:  ಪಾರ್ಶ್ವವಾಯುಗೆ ತುತ್ತಾಗಿರುವ ತನ್ನ ಅಮ್ಮನನ್ನು ಆಸ್ಪತ್ರೆಗೆ ಸಾಗಿಸಲು ಅದ್ಯಮ್ ಹೆಸರಿನ ಯುವಕ ಪಡುತ್ತಿರುವ ಪಾಡು ನೋಡಿ. ನಿಜಕ್ಕೂ ಮನಕಲಕುವ ದೃಶ್ಯವಿದು. ಶಿವಮೊಗ್ಗ ಜಿಲ್ಲೆಯ ಸಾಗರದ (Sagar) ತಾಲ್ಲೂಕಿನ ಜೋಗದ ಜಲಪಾತ (Jog Waterfalls) ಜಗತ್ಪ್ರಸಿದ್ಧ, ಆದರೆ ಜೋಗದ ಊರಿನ ಜನಕ್ಕೆ ರಸ್ತೆ ಸೌಕರ್ಯ ಇಲ್ಲ ಅಂದರೆ ನೀವು ನಂಬಲೇಬೇಕು. ಈ ಕಾರಣಕ್ಕಾಗೇ ಅದ್ಯಮ್ ತಮ್ಮ ತಾಯಿಯನ್ನು ಆಸ್ಪತ್ರೆಗೆ ಸಾಗಿಸಲು ಡೋಲಿ (Doli) ಮಾಡಿಕೊಂಡು ಇಬ್ಬರು ಸ್ನೇಹಿತರ ಸಹಾಯದಿಂದ ಮನೆ ಮತ್ತು ಊರಿಂದ ಒಂದು ಕಿಮೀ ದೂರವಿರುವ ಮುಖ್ಯರಸ್ತೆಗೆ ಹೊತ್ತು ಬಂದಿದ್ದಾರೆ.

ಅವರು ನಡೆದು ಬರುತ್ತಿರುವ ದಾರಿ ಕೂಡ ದುರ್ಗಮವಾಗಿದೆ. ತೀರಾ ಇಕ್ಕಟ್ಟಾದ ರಸ್ತೆ ಮತ್ತು ಒಂದು ಬದಿಯಲ್ಲಿ ಪ್ರಪಾತ. ಅವರು ನಡೆದು ಬರುವಾಗ ಮಳೆ ಸುರಿಯದಿರುವುದು ಅದೃಷ್ಟವಲ್ಲದೆ ಮತ್ತೇನೂ ಅಲ್ಲ.

ಮಳೆ ಬಂದರೆ ಈ ರಸ್ತೆಯಲ್ಲಿ ನಡೆಯುವುದು ಸಾಧ್ಯವೇ ಇಲ್ಲ. ನಮ್ಮ ನಾಯಕರು ಪ್ರತಿ ಊರಿಗೆ ರಸ್ತೆ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಅಂತ ಹೇಳುವುದನ್ನು ನಾವು ಕೇಳಿಸಿಕೊಳ್ಳುತ್ತಿರುತ್ತೇವೆ. ಆದರೆ ವಾಸ್ತವತೆ ಏನು ಅನ್ನೋದು ನಮ್ಮ ಕಣ್ಣೆದುರಿಗಿದೆ. ಜೋಗದಂಥ ಊರಿನ ಸ್ಥಿತಿ ಹೀಗಿರಬೇಕಾದರೆ ಹೇಳ ಹೆಸರಿಲ್ಲದ ಕುಗ್ರಾಮಗಳ ಗತಿ ಏನಾಗಿರಬೇಡ ಅಂತ ಒಮ್ಮೆ ಯೋಚಿಸಿ ನೋಡಿ ಮಾರಾಯ್ರೇ.

ಅದ್ಯಮ್ ಮತ್ತು ಅವರ ಸಂಗಡಿಗರು ಒಂದು ಕಿಮೀ ನಡೆದು ಬಂದ ಬಳಿಕ ವಾಹನವೊಂದು ಅವರಿಗಾಗಿ ಕಾಯುತ್ತಿರುವುದು ನಿಮಗೆ ಕಾಣುತ್ತದೆ. ಹಿರಿಯ ಮಹಿಳೆಗೆ ಪಾರ್ಶ್ವವಾಯು ಬಡಿದ ಕಾರಣ ಅಸ್ಪತ್ರೆಗೆ ಸೇರಿಸುವುದು ಸ್ವಲ್ಪ ವಿಳಂಬವಾದರೂ ನಡೆದೀತು, ಆದರೆ ಜೋಗದಲ್ಲಿ ಯಾರಿಗಾದರೂ ಹೃದಯಾಘಾತವಾದರೆ ಏನು ಗತಿ? ಅಂಥವರನ್ನ ಕೂಡಲೇ ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಇಷ್ಟು ದೂರದವರೆಗೆ ಡೋಲಿ ಮಾಡಿಕೊಂಡು ತರುವುದು ಸಾಧ್ಯವೇ?

ಸಂಬಂಧಪಟ್ಟವರು ಯೋಚಿಸಬೇಕು.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on