ಇದು ಅಳಿಲು ಸೇವೆಯಲ್ಲ ಅಳಿಲಿಗೆ ಸೇವೆ! ಅಳಿಲು ಸ್ಟೂಲ್ ಮೇಲೆ ಕೂತು ಅಕ್ರೋಟ್ ತಿನ್ನುವ ವಿಡಿಯೋ ವೈರಲ್!
ಮಿನಿಯೇಚರ್ ಸ್ಟೂಲಿನ ಮೇಲೆ ಕುಳಿತಿರುವ ಅಳಿಲು ಒಂದಾದ ನಂತರ ಒಂದು ಅಕ್ರೋಟ್ ಅನ್ನು ಗಬಗಬನೆ ತಿನ್ನುತ್ತಿರುವುದು ನಿಜಾವಾದರೂ ಅದು ಕದ್ದುಮುಚ್ಚಿ ಅದನ್ನು ತಿನ್ನುತ್ತಿಲ್ಲ. ವಿಡಿಯೋದಲ್ಲಿ ಈ ದೃಶ್ಯವನ್ನು ಸೆರೆಹಿಡಿದವರು ಅಳಿಲುಗಾಗಿಯೇ ಒಂದು ಪಿಕ್ನಿನ್ ಏರ್ಪಾಟು ಮಾಡಿರುವಂತೆ ಭಾಸವಾಗುತ್ತಿದೆ.
ಮನೆಯಂಗಳದಲ್ಲಿ ಹುಳ ಹಿಡಿದ ಕಾಳುಗಳನ್ನು ಬಿಸಿಲಿಗೆ ಇಟ್ಟಾಗ ಅದನ್ನು ತಿನ್ನಲು ಅಳಿಲು ಬರುವುದನ್ನು ನೀವು ನೋಡಿರುತ್ತೀರಿ. ಅಥವಾ ಪಾರ್ಕ್ಗಳಲ್ಲಿ ಅವು ಪುಟಪುಟ ಅಂತ ಓಡಾಡುವುದು ನಿಮಗೆ ಕಂಡಿರಬಹುದು. ಈ ಪುಟ್ಟ ಜೀವಿಗಳನ್ನು ವೇಗವಾಗಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಾ ಒಂದೆಡೆ ಕೂತು ತಿನ್ನವುದನ್ನು ನೋಡುವುದು ಮನಸ್ಸಿಗೆ ಮುದ ನೀಡುತ್ತದೆ. ಅಂಥ ವಿಡಿಯೋ ಒಂದರಲ್ಲಿ ಅಳಿಲೊಂದು ಟೇಬಲ್ ಮೇಲಿಟ್ಟಿರುವ ಅಕ್ರೋಟ್ಗಳನ್ನು ತಿನ್ನುತ್ತಿರೋದು ಜನರಿಗೆ ಭಯಂಕರ ಇಷ್ಟವಾಗಿ ಅದನ್ನು ಪದೇಪದೆ ನೋಡುತ್ತಿದ್ದಾರೆ.
ಈ ವಿಡಿಯೋವನ್ನು ಗಮನವಿಟ್ಟು ನೋಡಿ. ಮಿನಿಯೇಚರ್ ಸ್ಟೂಲಿನ ಮೇಲೆ ಕುಳಿತಿರುವ ಅಳಿಲು ಒಂದಾದ ನಂತರ ಒಂದು ಅಕ್ರೋಟ್ ಅನ್ನು ಗಬಗಬನೆ ತಿನ್ನುತ್ತಿರುವುದು ನಿಜಾವಾದರೂ ಅದು ಕದ್ದುಮುಚ್ಚಿ ಅದನ್ನು ತಿನ್ನುತ್ತಿಲ್ಲ. ವಿಡಿಯೋದಲ್ಲಿ ಈ ದೃಶ್ಯವನ್ನು ಸೆರೆಹಿಡಿದವರು ಅಳಿಲುಗಾಗಿಯೇ ಒಂದು ಪಿಕ್ನಿನ್ ಏರ್ಪಾಟು ಮಾಡಿರುವಂತೆ ಭಾಸವಾಗುತ್ತಿದೆ. Buitengebieden ಹೆಸರಿನ ಟ್ವಿಟರ್ ಪೇಜ್ ವಿಡಿಯೋವನ್ನು ಶೇರ್ ಮಾಡಿದ್ದು ಅದಕ್ಕೆ ‘ಗುಡ್ ಟೈಮ್ಸ್’ ಅಂತ ಶೀರ್ಷಿಕೆ ಇಡಲಾಗಿದೆ.
ಸದರಿ ವಿಡಿಯೋವನ್ನು ಈಗಾಗಲೇ ಸುಮಾರು 60,000 ಜನ ನೋಡಿದ್ದಾರೆ ಮತ್ತು ಹೆಚ್ಚು ಕಡಿಮೆ 5,000 ಜನ ಲೈಕ್ ಮಾಡಿದ್ದಾರೆ. ಸಾಕಷ್ಟು ಜನ ಕಾಮೆಂಟ್ ಸಹ ಮಾಡಿದ್ದಾರೆ. ಒಬ್ಬ ಯೂಸರ್, ‘ಅದು ಯಾಕೆ ಹಾಗೆ ಅವಸರದಲ್ಲಿ ತಿನ್ನಿತ್ತಿದೆಯೋ ನಾ ಕಾಣೆ, ಅದರ ಅಣ್ಣ-ತಮ್ಮಂದಿರೇನೂ ಅದರೊಂದಿಗೆ ಪೈಪೋಟಿಗೆ ಬಿದ್ದಿಲ್ಲವಲ್ಲ, ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು, ‘ಇದು ನಿಸ್ಸಂದೇಹವಾಗಿ ಬುದ್ಧಿವಂತ ಅಳಿಲು, ರೀಯಲ್ ಆಹಾರ ಮತ್ತು ಫೇಕ್ ಆಹಾರದ ನಡುವಿನ ವ್ಯತ್ಯಾಸ ಅದಕ್ಕೆ ಗೊತ್ತಿದೆ. ಟೇಬಲ್ ಮೇಲೆ ಇಟ್ಟಿರುವ ಕೆಲ ಅಹಾರ ಪದಾರ್ಥಗಳು ಫೇಕ್ ಅಗಿವೆ,’ ಎಂದು ಪ್ರತಿಕ್ರಿಯಿಸಿದ್ದಾರೆ.