‘ಭಯೋತ್ಪಾದಕ ದೇಶ ನನ್ನನ್ನು ಈ ಪ್ರಶ್ನೆ ಕೇಳುತ್ತಿದೆಯೇ?’; ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಿ ಪತ್ರಕರ್ತನ ಮೈಚಳಿ ಬಿಡಿಸಿದ ಸಚಿವ ಜೈಶಂಕರ್!
ಲೈಬೀರಿಯಾದ ವಿದೇಶಾಂಗ ಸಚಿವೆ ಸಾರಾ ಬೈಸೋಲೊ ನ್ಯಾಂಟಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಪಾಕಿಸ್ತಾನಿ ಪತ್ರಕರ್ತ, ಪಾಕಿಸ್ತಾನದ ಮೇಲೆ ಭಾರತ ಇನ್ನೆಷ್ಟು ಭಯೋತ್ಪಾದನಾ ದಾಳಿ ನಡೆಸುತ್ತೀರಿ? ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಸಚಿವ ಜೈಶಂಕರ್ "ಭಯೋತ್ಪಾದಕ ದೇಶವೊಂದು ನನ್ನನ್ನು ಈ ಪ್ರಶ್ನೆ ಕೇಳುತ್ತಿದೆಯೇ?" ಎಂದು ಪ್ರತ್ಯುತ್ತರ ನೀಡಿ ಪತ್ರಕರ್ತನ ಮೈಚಳಿ ಬಿಡಿಸಿದ್ದಾರೆ. ಪಾಕಿಸ್ತಾನಿ ಪತ್ರಕರ್ತರಿಗೆ ವಿದೇಶಾಂಗ ಸಚಿವರು ಈ ರೀತಿ ಖಡಕ್ ಆಗಿ ಉತ್ತರ ನೀಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆ ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲೂ ಇಂತಹುದೇ ಪ್ರಸಂಗ ನಡೆದಿತ್ತು.
ನ್ಯೂಯಾರ್ಕ್, ಸೆಪ್ಟೆಂಬರ್ 25: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) 81ನೇ ಸಾಮಾನ್ಯಸಭೆಯ ಭಾಗವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಹೈಡ್ರಾಮಾ ನಡೆದಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಪ್ರಶ್ನಿಸಲು ಎದ್ದುನಿಂತ ಪಾಕಿಸ್ತಾನಿ ಪತ್ರಕರ್ತರೊಬ್ಬರು ತಮ್ಮ ಮಾನವನ್ನು ತಾವೇ ಹರಾಜು ಹಾಕಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಲು ಯತ್ನಿಸಿದ ಪಾಕಿಸ್ತಾನಿ ಪತ್ರಕರ್ತನಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಖಡಕ್ ತಿರುಗೇಟು ನೀಡಿದ್ದಾರೆ.
ಲೈಬೀರಿಯಾದ ವಿದೇಶಾಂಗ ಸಚಿವೆ ಸಾರಾ ಬೈಸೋಲೊ ನ್ಯಾಂಟಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಪಾಕಿಸ್ತಾನಿ ಪತ್ರಕರ್ತ, ಪಾಕಿಸ್ತಾನದ ಮೇಲೆ ಭಾರತ ಇನ್ನೆಷ್ಟು ಭಯೋತ್ಪಾದನಾ ದಾಳಿ ನಡೆಸುತ್ತೀರಿ? ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಸಚಿವ ಜೈಶಂಕರ್ “ಭಯೋತ್ಪಾದಕ ದೇಶವೊಂದು ನನ್ನನ್ನು ಈ ಪ್ರಶ್ನೆ ಕೇಳುತ್ತಿದೆಯೇ?” ಎಂದು ಪ್ರತ್ಯುತ್ತರ ನೀಡಿ ಪತ್ರಕರ್ತನ ಮೈಚಳಿ ಬಿಡಿಸಿದ್ದಾರೆ.
ಪಾಕಿಸ್ತಾನಿ ಪತ್ರಕರ್ತರಿಗೆ ವಿದೇಶಾಂಗ ಸಚಿವರು ಈ ರೀತಿ ಖಡಕ್ ಆಗಿ ಉತ್ತರ ನೀಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆ ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲೂ ಇಂತಹುದೇ ಪ್ರಸಂಗ ನಡೆದಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ