ಕೇವಲ 22 ದಿನಗಳಲ್ಲಿ ಮಂತ್ರಾಲಯ ರಾಯರ ಮಠಕ್ಕೆ ಭಕ್ತರಿಂದ ಹರಿದು ಬಂದ ಕಾಣಿಕೆಯ ಮೊತ್ತ ರೂ. 2.35 ಕೋಟಿ!

|

Updated on: Aug 24, 2023 | 11:21 AM

ಮಂತ್ರಾಲಯದ ರಾಯರ ಮಠದಲ್ಲಿನ ಕಾಣಿಕೆ ಹುಂಡಿಗಳನ್ನು ತೆರೆಯಲಾಗಿದ್ದು ಮಠದ ಸಿಬ್ಬಂದಿಯಿಂದ ಹಣದ ಎಣಿಕೆಯೂ ಆಗಿದೆ. ಭಕ್ತರು ಹಾಕಿರುವ ಕಾಣಿಕೆಗಳಲ್ಲಿ 5 ಲಕ್ಷ ರೂ. ಮೌಲ್ಯದ ನಾಣ್ಯಗಳಿವೆ! ಹಣ ಎಣಿಕೆ ಕಾರ್ಯ ಮಠದ ಸಿಬ್ಬಂದಿಯಿಂದ ಸುಮಾರು 8 ಗಂಟೆಗಳ ಕಾಲ ನಡೆದಿದೆ ಎಂದು ರಾಘವೇಂದ್ರಸ್ವಾಮಿ ಮಠದ ಮೂಲಗಳಿಂದ ಗೊತ್ತಾಗಿದೆ.

ರಾಯಚೂರು: ದೇವಸ್ಥಾನ ಮತ್ತು ಮಠಮಾನ್ಯಗಳಲ್ಲಿ ಬಡವ ಬಲ್ಲಿದನೆಂಬ ತಾರತಮ್ಯವಿಲ್ಲ, ದೇವರು ಜನರ ಭಕ್ತಿಯನ್ನು ಮಾತ್ರ ಗಮನಿಸುತ್ತಾನೆ ಅವರ ಶ್ರೀಮಂತಿಕೆಯನ್ನಲ್ಲ ಅಂತ ಹಿರಿಯರು, ಬಲ್ಲವರು ಹೇಳುತ್ತಾರೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ ಮಂತ್ರಾಲಯದ ರಾಯರ ಮಠದಲ್ಲಿನ (Mantralayam Raghavendra Swamy Mutt) ಕಾಣಿಕೆ ಹುಂಡಿಗಳನ್ನು ತೆರೆಯಲಾಗಿದ್ದು ಮಠದ ಸಿಬ್ಬಂದಿಯಿಂದ (mutt staff) ಹಣದ ಎಣಿಕೆಯೂ ಆಗಿದೆ. ಭಕ್ತರು ಹಾಕಿರುವ ಕಾಣಿಕೆಗಳಲ್ಲಿ 5 ಲಕ್ಷ ರೂ. ಮೌಲ್ಯದ ನಾಣ್ಯಗಳಿವೆ! ಸ್ಥಿತಿವಂತರು (wealthy devotees) ಹೆಚ್ಚಿನ ಮುಖಬೆಲೆಯ ನೋಟು ಮತ್ತು ಚಿನ್ನ ಬೆಳ್ಳಿಯನ್ನು ಹುಂಡಿಗೆ ಹಾಕಿದರೆ, ಸ್ಥಿತಿವಂತರಲ್ಲದವರು ನಾಣ್ಯಗಳನ್ನು ಹಾಕುತ್ತಾರೆ. ಕಳೆದ 22 ದಿನಗಳ ಅವಧಿಯಲ್ಲಿ ಮಠದ ಹುಂಡಿಗಳಲ್ಲಿ ಸಂಗ್ರಹವಾಗಿರುವ ಹಣದ ಮೊತ್ತ ಎಷ್ಟು ಗೊತ್ತಾ? ನಾಣ್ಯಗಳೂ ಸೇರಿದಂತೆ ರೂ. 2.35 ಕೋಟಿ. ಅಷ್ಟು ಮಾತ್ರವಲ್ಲದೆ ಭಕ್ತರು 65 ಗ್ರಾಂ ಚಿನ್ನ ಮತ್ತು 85 ಗ್ರಾಂ ಬೆಳ್ಳಿಯ ಆಭರಣಗಳನ್ನೂ ಹುಂಡಿಗೆ ಹಾಕಿದ್ದಾರೆ. ಹಣ ಎಣಿಕೆ ಕಾರ್ಯ ಮಠದ ಸಿಬ್ಬಂದಿಯಿಂದ ಸುಮಾರು 8 ಗಂಟೆಗಳ ಕಾಲ ನಡೆದಿದೆ ಎಂದು ರಾಘವೇಂದ್ರಸ್ವಾಮಿ ಮಠದ ಮೂಲಗಳಿಂದ ಗೊತ್ತಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on