ಮಂತ್ರಾಲಯದ ರಾಯರ 351 ನೇ ಆರಾಧನಾ ಮಹೋತ್ಸವ ಅಂಗವಾಗಿ ಮಹಾ ರಥೋತ್ಸವ; ಶ್ರೀ ಮಠಕ್ಕೆ ಸಾಲುಮರದ ತಿಮಕ್ಕ ಭೇಟಿ
ಮಂತ್ರಾಲಯದ ರಾಯರ 351 ನೇ ಆರಾಧನಾ ಮಹೋತ್ಸವ ಅಂಗವಾಗಿ ಮಹಾ ರಥೋತ್ಸವಕ್ಕೆ ಶ್ರೀ ಸುಬುಧೇಂದ್ರ ತೀರ್ಥ ಸಾಮೀಜಿ ಚಾಲನೆ ನೀಡಿದರು.
ರಾಯಚೂರು: ಮಂತ್ರಾಲಯದ ರಾಯರ 351 ನೇ ಆರಾಧನಾ ಮಹೋತ್ಸವ (Mantralaya Raghavendra Swamy 351th Aradhane Mahostav)ಅಂಗವಾಗಿ ಮಹಾ ರಥೋತ್ಸವಕ್ಕೆ ಶ್ರೀ ಸುಬುಧೇಂದ್ರ ತೀರ್ಥ ಸಾಮೀಜಿ (Subhendra teerth Swamiji) ಚಾಲನೆ ನೀಡಿದರು. ಮಹಾ ರಥೋತ್ಸವಕ್ಕೆ ಶ್ರೀಗಳು ಹೆಲಿಕಾಪ್ಟರ್ ಮೂಲಕ ಪುಷ್ಪ ನಮನ ಸಲ್ಲಿಸಿದರು. ಈ ಮಹಾ ರಥೋತ್ಸವ ಕಣತುಂಬಿಕೊಳ್ಳಲು ಮತ್ತು ರಾಯ ರ ದರ್ಶನ ಪಡೇಯಲು ಮಂತ್ರಾಲಯಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಶ್ರೀಮಠದಲ್ಲಿ ಬೆಳಗ್ಗೆಯಿಂದ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ ಮತ್ತು ಮೂಲ ಬೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಉತ್ಸವದ ಪ್ರಲ್ಲಾದ ರಾಜರು ಶ್ರೀಮಠದಿಂದ ಸಂಸ್ಕೃತ ಪಾಠ ಶಾಲೆಗೆ ಪ್ರಯಾಣ ಮಾಡಿದರು. ಆ ಬಳಿಕ ಶ್ರೀಮಠದಲ್ಲಿ ಸಿಬ್ಬಂದಿ ವಸಂತೋತ್ಸವ, ರಾಯರ ಮೂಲ ಬೃಂದಾವನಕ್ಕೆ ಬಣ್ಣ ಅರ್ಪಣೆ ಮಾಡಿದರು. ಬಳಿಕ ಅರ್ಚಕರು ಮತ್ತು ಪಂಡಿತರು ಪರಸ್ಪರ ಬಣ್ಣದ ಓಕುಳಿ ಆಡಿದರು.
ಭಕ್ತರು ಬೇಡಿದ ವರವನ್ನು ರಾಯರ ಕಲ್ಪಿಸಲಿ. ಕೊರೊನಾ ಕಡಿಮೆಯಾದ ಹಿನ್ನೆಲೆಯಲ್ಲಿ ಇಂತಹ ಉತ್ತರಾಧನೆ ಮಾಡಲು ಸಾಧ್ಯವಾಗಿದೆ. ಇಡೀ ಜಗತ್ತಿನಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲಿ ಎಂದು ಮಹಾ ರಥೋತ್ಸವದ ವೇಳೆ ಶ್ರೀ ಸುಭುದೇಂದ್ರ ತೀರ್ಥರು ಆಶಿರ್ವವಚನ ನೀಡಿದರು.
ಯಾವುದೇ ಧರ್ಮ ಶ್ರೇಷ್ಠವೆಂದು ಹೇಳಬಾರದು. ಎಲ್ಲರೂ ಸಮಾನರು ಎಂದು ಭಾವಿಸಬೇಕಾಗಿದೆ. ಹಿಂದೂ ಧರ್ಮದ ಸಂಸ್ಕೃತಿ ಮತ್ತೊಂದು ಇಲ್ಲ. ಇತರೆ ಧರ್ಮದವರನ್ನು ಯಾರು ಕೀಳಾಗಿ ಕಾಣಬಾರದು. ನಮ್ಮ ಧರ್ಮ ಪಾಲನೆ ಮಾಡುತ್ತಾ ಇನ್ನೊಂದು ಧರ್ಮವನ್ನು ಗೌರವಿಸೋಣ ಎಂದು ಸಮಾನತೆಯ ಸದ್ಭಾವನೆಯ ಸಂದೇಶ ಸಾರಿದರು.ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಚಾರವಾಗಿ ಮಾತನಾಡಿದ ಅವರು ಎಲ್ಲರೂ ದೇಶ ಪ್ರೇಮ ಬೆಳೆಸಿಕೊಳ್ಳಬೇಕು.ದೇಶ ಸೇವೆಗೆ ಎಲ್ಲರೂ ಹೋಗಲು ಸಿದ್ದರಾಗಿರಬೇಕು.
ರಾಯರ ಉತ್ತರಾಧನೆ ಹಿನ್ನಲೆ ಶ್ರೀ ಮಠಕ್ಕೆ ವನಮಾತೆ ಸಾಲುಮರದ ತಿಮ್ಮಕ ಆಗಮಿಸಿದ್ದರು. ಮಂತ್ರಾಲಯದ ಮಂಚಾಲಮ್ಮ ದೇವಿ ದರ್ಶನ ಪಡೆದು, ಮಂಚಾಲಮ್ಮ ದೇವಿಗೆ ಆರತಿ ಬೆಳಗಿ ಕೈಮುಗಿದರು. ಬಳಿಕ ರಾಯರ ದರ್ಶನ ಪಡೆದರು.
ರಾಯರ ದರ್ಶನದ ಬಳಿಕ ಮಾತನಾಡಿದ ಅವರು ರಾಘವೇಂದ್ರ ಆರಾಧನೆ ಇವತ್ತು ಅದ್ಧೂರಿಯಾಗಿ ನಡೆಯುತ್ತಿದೆ. ನೀವೆ ಕೇಳಿಕೊಂಡ್ರೆ, ಎಲ್ಲ ಒಳ್ಳೆಯದ್ದು ಮಾಡುತ್ತಾನೆ ರಾಘವೇಂದ್ರ ಸ್ವಾಮಿ. ಗಿಡ ಬೆಳಿಸಿ, ರಾಯರ ಆಶಿರ್ವಾದಿಂದ ಗಿಡ-ಮರಗಳು ಬೆಳೆಯಲಿ. ಮರವನ್ನ ಯಾರೂ ಕಡಿಯಬೇಡಿ. ಮರಗಳನ್ನು ಬೆಳೆಸಿ. ಪರಮಾತ್ಮ, ರಾಘವೇಂದ್ರ ಸ್ವಾಮಿ ಮರ ಬೆಳೆಯುದಕ್ಕೆ ಆಶಿರ್ವಾದ ಮಾಡಲಿ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ