Assembly Polls: ಮುರುಗೇಶ್ ನಿರಾಣಿ ನೀಡಿದ ಉಡುಗೊರೆಯನ್ನು ಸಾರಾಸಗಟು ತಿರಸ್ಕರಿಸಿದ ಬೀಳಗಿಯ ಪ್ರಜ್ಞಾವಂತ ಮತದಾರ ಮಹಿಳೆ

Assembly Polls: ಮುರುಗೇಶ್ ನಿರಾಣಿ ನೀಡಿದ ಉಡುಗೊರೆಯನ್ನು ಸಾರಾಸಗಟು ತಿರಸ್ಕರಿಸಿದ ಬೀಳಗಿಯ ಪ್ರಜ್ಞಾವಂತ ಮತದಾರ ಮಹಿಳೆ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 09, 2023 | 11:13 AM

ಆದರೆ ಒಬ್ಬ ದಿಟ್ಟ, ಸ್ವಾಭಿಮಾನಿ ಮತ್ತು ಪ್ರಜ್ಞಾವಂತ ಮಹಿಳೆ ಈ ‘ಗಿಫ್ಟ್’ ಅನ್ನು ತಿರಸ್ಕರಿಸಿ ಮನೆಯೊಳಗೆ ತಂದಿಟ್ಟ ಸಕ್ಕರೆ ಪ್ಯಾಕೆಟ್ ಅನ್ನು ಬಾಗಿಲ ಹೊರಗೆ ಒಯ್ದಿಡುತ್ತಾರೆ.

ಬಾಗಲಕೋಟೆ: ರಾಜ್ಯದ ಮತದಾರರು (voters) ಪ್ರಜ್ಞಾವಂತರು ಅಂತ ನಾವು ಪದೇಪದೆ ಹೇಳುತ್ತಲೇ ಇದ್ದೇವೆ. ರಾಜಕಾರಣಿಗಳ ಆಮಿಷಗಳಿಗೆ ಅವರು ಬಲಿಯಾಗಲಾರರು. ಇದಕ್ಕೊಂದು ಜ್ವಲಂತ ಉದಾಹರಣೆ ಬಾಗಲಕೋಟೆ ಜಿಲ್ಲೆ ಬೀಳಗಿ ಮತಕ್ಷೇತ್ರದ ಗಲಗಲಿ (Galagali) ಗ್ರಾಮದಲ್ಲಿ ಕಂಡುಬಂದಿದೆ. ಸ್ಥಳೀಯ ಬಿಜೆಪಿ ಶಾಸಕ ಮುರುಗೇಶ್ ಆರ್ ನಿರಾಣಿ (Murugesh R Nirani) ಅವರು ಚುನಾವಣೆ ಹತ್ತಿರ ಬಂದಿರುವ ಹಿನ್ನೆಲೆಯಲ್ಲಿ ಇಲ್ಲಿನ ಮತದಾರರ ಮನೆಗಳಿಗೆ 2-3 ಕೆಜಿಯ ಸಕ್ಕರೆ ಪೊಟ್ಟಣಗಳನ್ನು ತಮ್ಮ ಬೆಂಬಲಿಗರ ಮೂಲಕ ಕಳಿಸುತ್ತಿದ್ದಾರೆ. ಆದರೆ ಒಬ್ಬ ದಿಟ್ಟ, ಸ್ವಾಭಿಮಾನಿ ಮತ್ತು ಪ್ರಜ್ಞಾವಂತ ಮಹಿಳೆ ಈ ‘ಗಿಫ್ಟ್’ ಅನ್ನು ತಿರಸ್ಕರಿಸಿ ಮನೆಯೊಳಗೆ ತಂದಿಟ್ಟ ಸಕ್ಕರೆ ಪ್ಯಾಕೆಟ್ ಅನ್ನು ಬಾಗಿಲ ಹೊರಗೆ ಒಯ್ದಿಡುತ್ತಾರೆ. ಈ ವಿಡಿಯೋ ನೋಡಿದರೆ ನಿರಾಣಿ ಸಾಹೇಬರಿಗೆ ಏನನಿಸುತ್ತದೆಯೋ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Feb 09, 2023 11:13 AM