ಮುರುಡೇಶ್ವರದಲ್ಲೊಂದು ‘ಮುಂಗಾರು ಮಳೆ’ ಚಿತ್ರವನ್ನು ನೆನಪಿಸುವ ದೃಶ್ಯ!
ಸುರಿಯುತ್ತಿರುವ ಮಳೆಯಲ್ಲಿ ಒಬ್ಬ ಯುವತಿ ಮತ್ತು ಯುವಕ ಕೊಡೆಗಳನ್ನು ಹಿಡಿದು ತಮ್ಮ ಸುತ್ತಲಿನ ವಾತಾವರಣವನ್ನು ಭಾರಿ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿ ಇನ್ನೂ ಹಲವಾರು ಜನರಿದ್ದಾರೆ, ಆದರೆ ಈ ಜೋಡಿ ಮಾತ್ರ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾರೆ!
ಕಾರವಾರ: ಮಳೆ ನಮ್ಮಲ್ಲಿ ತರಹೇವಾರಿ ಭಾವನೆಗಳನ್ನು ಸೃಷ್ಟಿಸುತ್ತದೆ ಮಾರಾಯ್ರೇ. ಪ್ರತಿಯೊಂದು ಭಾವನೆಯ ಬಣ್ಣ ಭಿನ್ನ. ಸಾಮಾನ್ಯವಾಗಿ ಪ್ರೇಮಿಗಳಿಗೆ (lovers), ನವವಿವಾಹಿತರಿಗೆ (newly-weds) ಮಳೆ ಬಹಳ ಇಷ್ಟವಾಗುತ್ತದೆ. ಮಳೆಯಲ್ಲಿ ನೆನೆಯುವುದು ಕೆಲವರ ಮನಸ್ಸಿಗೆ ಬಹಳ ಮುದ ನೀಡುತ್ತದೆ. ಕಾರವಾರ ಬಳಿಯ ಮುರುಡೇಶ್ವರ (Murudeshwara) ಮತ್ತು ಉತ್ತರ ಕನ್ನಡ ಜಿಲ್ಲೆಯ ಹಲವಾರು ಭಾಗಗಳಲ್ಲಿ ಸತತವಾಗಿ ಮಳೆಯಾಗುತ್ತಿದೆ ಮತ್ತು ನಮಗೆ ಮುರುಡೇಶ್ವರದಿಂದ ಈ ವಿಡಿಯೋ ಲಭ್ಯವಾಗಿದೆ. ಸುರಿಯುತ್ತಿರುವ ಮಳೆಯಲ್ಲಿ ಒಬ್ಬ ಯುವತಿ ಮತ್ತು ಯುವಕ ಕೊಡೆಗಳನ್ನು ಹಿಡಿದು ತಮ್ಮ ಸುತ್ತಲಿನ ವಾತಾವರಣವನ್ನು ಭಾರಿ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿ ಇನ್ನೂ ಹಲವಾರು ಜನರಿದ್ದಾರೆ, ಆದರೆ ಈ ಜೋಡಿ ಮಾತ್ರ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾರೆ!
ಇದನ್ನೂ ಓದಿ: Viral Video: ಆನೆಯ ಆಟಕ್ಕೆ ಸುಸ್ತಾದ ರೂಪದರ್ಶಿ, ಸಖತ್ ವೈರಲ್ ಆಗುತ್ತಿದೆ ಈ ವಿಡಿಯೋ