ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ (Corona Third Wave) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಭೀತಿಗೆ ಕಾರಣವಾಗಿದೆ. ಆದರೆ ಕೊರೊನಾ (Coronavirus) ತೀವ್ರತೆ ಈ ಬಾರಿ ಕಡಿಮೆ ಇದೆ. ಹೀಗಾಗಿ ಸರ್ಕಾರ ಸದ್ಯ ಲಾಕ್ಡೌನ್ ಜಾರಿಗೊಳಿಸಿಲ್ಲ. ಕೊರೊನಾ ವಿರುದ್ಧ ಹೋರಾಡಲು ಏಕೈಕ ಅಸ್ತ್ರವೆಂದರೆ ಅದು ಲಸಿಕೆ. ಹೀಗಿದ್ದೂ, ಕೆಲವರು ಮಾತ್ರ ವ್ಯಾಕ್ಸಿನ್ ಪಡೆಯಲು ನಿರಾಕರಿಸುತ್ತಿದ್ದಾರೆ. ಅಧಿಕಾರಿಗಳು ಮನೆ ಬಾಗಿಲಿಗೆ ಹೋಗಿ ಲಸಿಕೆ ನೀಡುತ್ತಿದ್ದರೂ, ರಾಜ್ಯದ ಹಲವೆಡೆ ಜನರು ಲಸಿಕೆ (Vaccine) ಪಡೆಯಲು ಮುಂದೆ ಬರುತ್ತಿಲ್ಲ. ಲಸಿಕೆ ಬೇಡವೇ ಬೇಡ ಕಾಲ್ಕಿತ್ತು ಓಡುತ್ತಾರೆ. ಹೀಗೆ ಯುವಕನೊಬ್ಬ ಲಸಿಕೆ ಬೇಡ ಎಂದು ಮನೆ ಮೇಲೆ ಏರಿ ಕುಳಿತಿದ್ದ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿಯಲ್ಲಿ ಯುವಕ ಮಂಜುನಾಥ್ ಎಂಬುವವನು ಲಸಿಕೆ ಬೇಡ ಅಂತ ಮನೆ ಏರಿದ್ದ. ಕೊವಿಡ್ ಲಸಿಕೆ ಹಾಗೂ ಜಾಗೃತಿ ಕಾರ್ಯಕ್ರಮ ವೇಳೆ ಈ ಘಟನೆ ನಡೆದಿದೆ. ನಂತರ ತಹಶೀಲ್ದಾರ್ ಎನ್.ರಘುಮೂರ್ತಿ, ಆರೋಗ್ಯ ಸಿಬ್ಬಂದಿ ಯುವಕನ ಮನವೊಲಿಸಿದರು.
ಇದನ್ನೂ ಓದಿ
‘ನಿಮ್ಮನ್ನು ಮುಟ್ಟಬಹುದಾ?’: ಸಲ್ಮಾನ್ ಖಾನ್ ಭೇಟಿ ಮಾಡಿದ ಮೊದಲ ದಿನವೇ ನಟಿಯ ವಿಚಿತ್ರ ಬೇಡಿಕೆ
Virat Kohli: ಭಾರತದ ರಾಷ್ಟ್ರಗೀತೆ ವೇಳೆ ವಿರಾಟ್ರಿಂದ ಅಸಭ್ಯ ವರ್ತನೆ: ವೈರಲ್ ಆಗುತ್ತಿದೆ ಕೊಹ್ಲಿಯ ವಿಡಿಯೋ