ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಈ ಬಾರಿಯ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರಾಘವ್ ಚಡ್ಡಾ ಅವರು ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ವಿಷಯವನ್ನು ಎತ್ತಿದ್ದರು. ಈ ಕಾರ್ಮಿಕರ ಪರಿಸ್ಥಿತಿ ದಿನಗೂಲಿ ಕಾರ್ಮಿಕರಿಗಿಂತ ಕೆಟ್ಟದಾಗಿದೆ ಎಂದು ಅವರು ಹೇಳಿದ್ದರು. 10 ನಿಮಿಷದಲ್ಲಿ ಡೆಲಿವರಿ ಎಂಬ ಆಯ್ಕೆಯನ್ನು ತೆಗೆದುಹಾಕಬೇಕೆಂದು ಅವರು ಒತ್ತಾಯಿಸಿದ್ದರು.
ನವದೆಹಲಿ, ಜನವರಿ 12: ಪಂಜಾಬ್‌ನ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ (Raghav Chadha) ಇಂದು ಒಂದು ದಿನದ ಮಟ್ಟಿಗೆ ಡೆಲಿವರಿ ಬಾಯ್ ಆಗಿ ಬದಲಾಗಿದ್ದರು. ಡೆಲಿವರಿ ಬಾಯ್ಗಳು ಎದುರಿಸುತ್ತಿರುವ ತೊಂದರೆಗಳನ್ನು ಅರ್ಥಮಾಡಿಕೊಳ್ಳಲು ಅವರು ವೈಯಕ್ತಿಕವಾಗಿ ಜನರ ಮನೆಗಳಿಗೆ ದಿನಸಿ ಮತ್ತಿತರ ಪದಾರ್ಥಗಳನ್ನು ತಲುಪಿಸಿದರು. ಅವರು ಇದರ ವೀಡಿಯೊವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಬಾರಿಯ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರಾಘವ್ ಚಡ್ಡಾ ಅವರು ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ವಿಷಯವನ್ನು ಎತ್ತಿದ್ದರು. ಈ ಕಾರ್ಮಿಕರ ಪರಿಸ್ಥಿತಿ ದಿನಗೂಲಿ ಕಾರ್ಮಿಕರಿಗಿಂತ ಕೆಟ್ಟದಾಗಿದೆ ಎಂದು ಅವರು ಹೇಳಿದ್ದರು. 10 ನಿಮಿಷದಲ್ಲಿ ಡೆಲಿವರಿ ಎಂಬ ಆಯ್ಕೆಯನ್ನು ತೆಗೆದುಹಾಕಬೇಕೆಂದು ಅವರು ಒತ್ತಾಯಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ