Mysuru Dasara Mahotsav-2024: ಅಂಬಾರಿಯೊಳಗೆ ಚಾಮುಂಡಿಯನ್ನು ಹೊತ್ತ ಅಭಿಮನ್ಯುನ ನಡಿಗೆ ವರ್ಣಿಸಲದಳ!

|

Updated on: Oct 12, 2024 | 6:41 PM

Mysuru Dasara Mahotsav 2024: ಜಂಬೂ ಸವಾರಿಗೆ ಮಳೆ ಅಡ್ಡಿಯಾಗುತ್ತಿಲ್ಲ ಅನ್ನೋದು ಸಂತಸದ ಸಂಗತಿ. ಆದರೆ, ಅದು ಶುರುವಾಗುವ ಮೊದಲು ಮೈಸೂರು ನಗರದಲ್ಲಿ ಮಳೆ ಸುರಿಯಲಾರಂಭಿಸಿತ್ತು. ಸ್ತಬ್ಧಚಿತ್ರಗಳ ಮೆರವಣಿಗೆ ಆರಂಭಗೊಂಡ ಮಳೆ ಸ್ವಲ್ಪಹೊತ್ತಿನ ನಂತರ ನಿಂತಿತು. ನಗರದಲ್ಲಿ ಈಗಲೂ ಮೋಡ ಕವಿದ ವಾತಾವರಣವಿದೆ.

ಮೈಸೂರು: ದಸರಾ ಮಹೋತ್ಸವವನ್ನು ವೀಕ್ಷಿಸಲು ದೇಶವಿದೇಶಗಳಿಂದ ಬರುವ ಜನ ಇದೇ ಕ್ಷಣಕ್ಕಾಗಿ ಅವಡುಗಚ್ಚಿ ಕಾಯುತ್ತಿರುತ್ತಾರೆ. ಚಿನ್ನದ ಅಂಬಾರಿಯಲ್ಲಿ ಕೂತ ಚಾಮುಂಡೇಶ್ವರಿ ದೇವಿ ಆನೆಯ ಬೆನ್ನೇರಿ ಮೈಸೂರಿನ ರಾಜಬೀದಿಗಳಲ್ಲಿ ಸಾಗುವ ದೃಶ್ಯ ನಯನ ಮನೋಹರ ಮತ್ತು ಅತ್ಯಂತ ಅಹ್ಲಾದಕರ. ಭಾರೀ ತೂಕದ ಅಂಬಾರಿ ಮತ್ತು ಚಾಮುಂಡಿಯನ್ನು ಹೊತ್ತ ಮತ್ತು ಸರ್ವಾಲಂಕೃತ ಕ್ಯಾಪ್ಟನ್ ಅಭಿಮನ್ಯುವಿನ ನಡಿಗೆ ನೋಡಲು ಎರಡು ಕಣ್ಣು ಸಾಲದು. ಮೈಸೂರಿನ ರಸ್ತೆಗಳಲ್ಲಿ ನಡೆಯುತ್ತಿರುವ ಜಂಬೂ ಸವಾರಿಯನ್ನು ಸಾವಿರಾರು ಜನ ತಮ್ಮ ಮೊಬೈಲ್ ಮತ್ತು ಕೆಮೆರಾಗಳಲ್ಲಿ ಸೆರೆಹಿಡಿಯುತ್ತಿದ್ದಾರೆ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Mysuru Dasara Mahotsav-2024: ಜಂಬೂ ಸವಾರಿಯ ದಿನ ನಗರದಲ್ಲಿ ಜೋರು ಮಳೆ!