Abhinaya: ‘ವೇಶ್ಯಾವಾಟಿಕೆಗೆ ನನ್ನನ್ನು ತಳ್ಳಲು ಪ್ರಯತ್ನಿಸಿದ್ರು’; ನಟಿ ಅಭಿನಯಾ ವಿರುದ್ಧ ಅತ್ತಿಗೆ ಗಂಭೀರ ಆರೋಪ

Edited By:

Updated on: Dec 14, 2022 | 4:08 PM

ನಟಿ ಅಭಿನಯಾ ಮತ್ತು ಅವರ ಕುಟುಂಬದ ಮೇಲೆ ಅತ್ತಿಗೆ ಲಕ್ಷ್ಮಿದೇವಿ ಅನೇಕ ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ..

ಕನ್ನಡ ಚಿತ್ರರಂಗದ ಖ್ಯಾತ ನಟಿ ಅಭಿನಯಾ (Abhinaya) ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಅತ್ತಿಗೆ ಲಕ್ಷ್ಮಿದೇವಿ ಮೇಲೆ ಕೌಟುಂಬಿಕ ದೌರ್ಜನ್ಯ (Domestic Violence) ನಡೆಸಿದ್ದಕ್ಕಾಗಿ ಹಾಗೂ ವರದಕ್ಷಿಣೆ ಕಿರುಕುಳ ನೀಡಿದ ಅಪರಾಧಕ್ಕಾಗಿ ಅಭಿನಯಾಗೆ ಹೈಕೋರ್ಟ್​ ಈ ಶಿಕ್ಷೆ ನೀಡಿದೆ. ತೀರ್ಪು ಪ್ರಕಟವಾದ ಬಳಿಕ ಲಕ್ಷ್ಮಿದೇವಿ (Lakshmi Devi) ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಅಭಿನಯಾ ಕುಟುಂಬದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ನನ್ನನ್ನು ಕೂಡ ಅದರಲ್ಲಿ ತಳ್ಳಲು ಅವರು ಪ್ರಯತ್ನಿಸಿದ್ದರು’ ಎಂದು ಲಕ್ಷ್ಮಿದೇವಿ ಗಂಭೀರ ಆರೋಪ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.