ಬಿಗ್ ಬಾಸ್ ಮನೆಗೆ ತೆರಳಿ ಅತಿಯಾಗಿ ತೂಕ ಕಳೆದುಕೊಂಡ ಅಭಿಷೇಕ್

Updated on: Dec 08, 2025 | 12:59 PM

ಬಿಗ್ ಬಾಸ್ ಮನೆಯಿಂದ ಹೊರ ಬಂದಿರೋ ಅಭಿಷೇಕ್ ಅವರು ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ಅವರು ದೇಹದ ತೂಕ ಕಳೆದುಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗಾದರೆ ಅವರು ಎಷ್ಟು ದೇಹದ ತೂಕ ಕಳೆದುಕೊಂಡಿದ್ದಾರೆ. ಆ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಅವರಿಗೆ ಇದು ಶಾಕಿಂಗ್.

ಬಿಗ್ ಬಾಸ್ ಮನೆ ಹೊರಗಿನ ಪ್ರಪಂಚಕ್ಕಿಂತ ಭಿನ್ನ. ಅಲ್ಲಿ ಹೋಗೋದು ಸೆಲೆಬ್ರಿಟಿಗಳೇ ಆದರೂ ಅವರು ಊಟಕ್ಕೆ ಸಾಕಷ್ಟು ಕಷ್ಟಪಡಬೇಕು. ಪ್ರತಿ ವಾರ ಅಂದುಕೊಂಡಷ್ಟು ದಿನಸಿ ಸಿಗೋದಿಲ್ಲ. ಹೀಗಾಗಿ ಕೆಲವರು ದೇಹದ ತೂಕ ಕಳೆದುಕೊಂಡಿದ್ದಾರೆ. ‘ನಾನು ಬಿಗ್ ಬಾಸ್ ಮನೆಯಲ್ಲಿ 11 ಕೆಜೆ ದೇಹದ ತೂಕ ಕಳೆದುಕೊಂಡೆ. ಸ್ಟ್ರೆಸ್​ನಿಂದ ದೇಹದ ತೂಕ ಕಡಿಮೆ ಆಗಿರಬಹುದು. ಬಟ್ಟೆಗಳು ದೊಡ್ಡ ಆಗುತ್ತಿರುವಾಗ ಸಾಕಷ್ಟು ಟೆನ್ಶನ್ ಆಗಿತ್ತು’ ಎಂದಿದ್ದಾರೆ ಅಭಿಷೇಕ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More