Loading video

ಬಿಎಸ್​ವೈ ಇಲ್ಲದಿರುವುದು ಬಿಜೆಪಿಗೆ ಶಾಪ; ಎಂಪಿ ರೇಣುಕಾಚಾರ್ಯ, ವಿಡಿಯೋ ಇಲ್ಲಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 31, 2023 | 10:34 PM

ಪ್ರತಿಯೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತನ ಅಪೇಕ್ಷೆಯನ್ನು ನಾನು ನೇರವಾಗಿ ಹೇಳಿದ್ದೇನೆ. ಕೆಲ ವ್ಯಕ್ತಿಗಳ ದೌರ್ಬಲ್ಯವನ್ನು ನಾನು ನೇರವಾಗಿ ಖಂಡಿಸಿದ್ದೇನೆ. ನಾನು ಬಿಜೆಪಿ ಬಿಡೋದಿಲ್ಲ, ಪಕ್ಷದಲ್ಲೇ ಇದ್ದೇನೆ. ನಾನು ಯಾವುದನ್ನು ಮುಚ್ಚುಮರೆ ಇಲ್ಲದೆ ಹೇಳಿದ್ದೇನೆ. ಪಕ್ಷದಲ್ಲಿ ಸಂಘಟನೆ ಕೊರತೆ ಇದೆ, ಇದು ಸರಿಯಾಗಬೇಕು ಎಂದು ಬಿಜೆಪಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು.

ಬೆಂಗಳೂರು, ಆ.31: ಬಿಎಸ್​ ಯಡಿಯೂರಪ್ಪ (BS Yediyurappa) ಅಂತಹ ಮಹಾನ್​ ನಾಯಕರನ್ನು ಕಡೆಗಣಿಸಿ ಬಿಜೆಪಿಗೆ ಶಾಪ ಆಗಿದೆ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ(MP Renuakacharya) ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಇವತ್ತು ಪಕ್ಷದಲ್ಲಿ ವರ್ಚಸ್ಸು ಇರುವವರಿಗೆ ಬೆಳೆಯಲು ಬಿಡುತ್ತಿಲ್ಲ. ಇದರಿಂದ ನನಗೆ ವೈಯಕ್ತಿಕವಾಗಿ ಯಾವ ಲಾಭ ಇಲ್ಲ, ನಷ್ಟವೂ ಇಲ್ಲ. ಪ್ರತಿಯೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತನ ಅಪೇಕ್ಷೆಯನ್ನು ನಾನು ನೇರವಾಗಿ ಹೇಳಿದ್ದೇನೆ ಎಂದರು. ನಾನು ಪಕ್ಷ, ಮೋದಿ, ನಡ್ಡಾ, ಅಮಿತ್ ಶಾ ವಿರುದ್ಧ ಮಾತಾಡಿಲ್ಲ. ಕೆಲ ವ್ಯಕ್ತಿಗಳ ದೌರ್ಬಲ್ಯವನ್ನು ನಾನು ನೇರವಾಗಿ ಖಂಡಿಸಿದ್ದೇನೆ. ನಾನು ಬಿಜೆಪಿ ಬಿಡೋದಿಲ್ಲ, ಪಕ್ಷದಲ್ಲೇ ಇದ್ದೇನೆ. ನಾನು ಯಾವುದನ್ನು ಮುಚ್ಚುಮರೆ ಇಲ್ಲದೆ ಹೇಳಿದ್ದೇನೆ. ಪಕ್ಷದಲ್ಲಿ ಸಂಘಟನೆ ಕೊರತೆ ಇದೆ, ಇದು ಸರಿಯಾಗಬೇಕು ಎಂದಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ