ಚಿಕ್ಕಮಗಳೂರು ಪಿಡಬ್ಲ್ಯುಡಿ ಎಇಇ ಗವಿ ರಂಗಪ್ಪನ ಮನೆಯಲ್ಲಿ ಎಸಿಬಿ ಅಧಿಕಾರಿಗಳಿಗೆ ಮುಕ್ಕಾಲು ಕೆಜೆ ತೂಕದ ಚಿನ್ನದ ಗಟ್ಟಿ ಸಿಕ್ಕಿತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 16, 2022 | 8:56 PM

ಎಸಿಬಿ ಅಧಿಕಾರಿಗಳಿಗೆ ರಂಗಪ್ಪನವರ ಮನೆಯಲ್ಲಿ ಸಿಕ್ಕಿದ್ದು ಹೇರಳ ಚಿನ್ನಾಭರಣಗಳ ಜೊತೆ ಮುಕ್ಕಾಲು ಕೆಜಿ ತೂಗುವ ಚಿನ್ನದ ಗಟ್ಟಿ, 900 ಗ್ರಾಂ ಬೆಳ್ಳಿಯ ಸಾಮಾನುಗಳು ಮತ್ತು 2.74 ಲಕ್ಷ ರೂ. ನಗದು!

ಅವರೆಲ್ಲ ಬೆಳಗ್ಗೆ ಏಳುವ ಗಳಿಗೆ ಸರಿಯಿರಲಿಲ್ಲವೋ ಅಥವಾ ಕಳೆದ ರಾತ್ರಿ ರಾಹುಕಾಲದಲ್ಲಿ ನಿದ್ರಿಸಲು ತೆರಳಿದರೋ ಗೊತ್ತಿಲ್ಲ ಮಾರಾಯ್ರೇ. ಹಾಗೆ ನೋಡಿದರೆ ಅವರು ಬೆಳಗ್ಗೆ ಏಳುವ ಮೊದಲೇ ಏನು ನಡೆಯಬಾರದು ಅವರು ಅಂದುಕೊಂಡಿದ್ದರೋ ಅದು ನಡೆದುಹೋಗಿತ್ತು. 18 ವಿವಿಧ ಇಲಾಖೆಗಳಲ್ಲಿ (departments) ಕೆಲಸ ಮಾಡುವ 78 ಸರಕಾರೀ ಅಧಿಕಾರಿಗಳಿಗೆ (government officials) ಬುಧವಾರದ ಬೆಳಗು ಆಘಾತಕಾರಿಯಾಗಿತ್ತು. ಬೆಳ್ಳಂಬೆಳಗ್ಗೆ ಅವರ ಮನಬಾಗಿಲಿಗೆ ಬಂದು ಕರೆಗಂಟೆ ಬಾರಿಸಿದ್ದು ಭ್ರಷ್ಟಾಚಾರ ನಿಗ್ರಹ ದಳದ (Anti Corruption Bureau) ಅಧಿಕಾರಿಗಳು. ಅವರಿಗೆ ಸಾವರಿಸಿಕೊಳ್ಳುವ ಅವಕಾಶವೂ ನೀಡದೆ ಎಸಿಬಿ ಅವರ ಮನೆಗಳನ್ನೆಲ್ಲ ಜಾಲಾಡಿ ಅಕ್ರಮವಾಗಿ ಗಳಿಸಿದ ಆಸ್ತಿ ಮತ್ತು ಅದರ ವಿವರಗಳನ್ನು ಬಯಲಿಗೆಳೆದರು. ನಿಮಗೆ ನಾವಿಲ್ಲಿ ಚಿಕ್ಕಮಗಳೂರು ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಆಗಿ ಕೆಲಸ ಮಾಡುವ ಗವಿ ರಂಗಪ್ಪ ಅವರ ಮನೆ.

ಚಿಕ್ಕಮಗಳೂರಿನ ಗಾಂಧಿನಗರ ಬಡಾವಣೆಯಲ್ಲಿರುವ ರಂಗಪ್ಪನವರ ಮನೆಯನ್ನು ಹೊರಗಿನಿಂದ ನೋಡಿದಾಗಲೇ ಕುಬೇರನೊಬ್ಬನ ನಿವಾಸದಂತೆ ಕಾಣುತ್ತದೆ. ಎಸಿಬಿ ಅಧಿಕಾರಿಗಳಿಗೆ ರಂಗಪ್ಪನವರ ಮನೆಯಲ್ಲಿ ಸಿಕ್ಕಿದ್ದು ಹೇರಳ ಚಿನ್ನಾಭರಣಗಳ ಜೊತೆ ಮುಕ್ಕಾಲು ಕೆಜಿ ತೂಗುವ ಚಿನ್ನದ ಗಟ್ಟಿ, 900 ಗ್ರಾಂ ಬೆಳ್ಳಿಯ ಸಾಮಾನುಗಳು ಮತ್ತು 2.74 ಲಕ್ಷ ರೂ. ನಗದು! ನಮಗೆ ಈ ಮಾಹಿತಿ ಸಿಗುವವರೆಗೆ ಎಸಿಬಿ ಅಧಿಕಾರಿಗಳ ಶೋಧ ಮತ್ತು ಜಾಲಾಟ ಜಾರಿಯಲ್ಲಿತ್ತು.

ಚಿಕ್ಕಮಗಳೂರಿನ ಟಿವಿ9 ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಅಧಿಕಾರಿಗಳ ಕಾರ್ಯಾಚರಣೆ ಗುರುವಾರ ಬೆಳಗಿನವರೆಗೆ ಮುಂದುವರಿಯಲಿದೆ. ರಂಗಪ್ಪ ನವರ ಚರಾಸ್ತಿ ಮತ್ತು ಸ್ಥಿರಾಸ್ತಿಗಳ ಕಾಗದಪತ್ರಗಳು ಎಸಿಬಿ ಅಧಿಕಾರಿಗಳ ಕೈಗೆ ಸಾಯಂಕಾಲದವರೆಗೆ ಸಿಕ್ಕಿರಲಿಲ್ಲ.

ಇದನ್ನೂ ಓದಿ:   ACB Raid: ಖಾಲಿ ಸೈಟ್​ನಲ್ಲಿ ಬಿಸಾಡಿದ್ದ ಹಣ ಪತ್ತೆ; ಅರಣ್ಯಾಧಿಕಾರಿ ಮನೆಯಲ್ಲಿ ಸಿಕ್ಕಿತು ಚಿನ್ನ, ಬೆಳ್ಳಿ, ಗಂಧ, 20 ಲಕ್ಷಕ್ಕೂ ಅಧಿಕ ನಗದು

Follow us on