ಭಟ್ಕಳದಲ್ಲಿ ಪೊಲೀಸರೊಂದಿಗೆ ಅಲ್ಪಸಂಖ್ಯಾತ ಸಮುದಾಯ ಯುವಕರ ಬಿರುಸಿನ ವಾಗ್ವಾದ

ಭಟ್ಕಳದಲ್ಲಿ ಪೊಲೀಸರೊಂದಿಗೆ ಅಲ್ಪಸಂಖ್ಯಾತ ಸಮುದಾಯ ಯುವಕರ ಬಿರುಸಿನ ವಾಗ್ವಾದ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 16, 2022 | 10:03 PM

ಒಬ್ಬ ವ್ಯಕ್ತಿ ಪೊಲೀಸರ ಜೊತೆ ವಾದಕ್ಕಿಳಿಯುತ್ತಾನೆ. ಅವನ ವರ್ತನೆಯಿಂದ ಕೋಪಗೊಳ್ಳುವ ಪೊಲೀಸರು ಅವನನ್ನು ಠಾಣೆಗೆ ಕರೆದೊಯ್ಯಲು ಮುಂದಾಗುತ್ತಾರೆ. ಅವನು ಸಹ ನಡೀರಿ ಹೋಗೋಣ ಅಂತ ಹೊರಡಲು ಅಣಿಯಾಗುತ್ತಾನೆ.

ಭಟ್ಕಳ: ಹಿಜಾಬ್ ವಿವಾದ ಕೊನೆಗೊಂಡಿದೆ ಅಂತ ನೀವು ಭಾವಿಸಿದ್ದರೆ ನಿಮ್ಮ ಊಹೆ ತಪ್ಪು. ಮಂಗಳವಾರ ಹೈಕೋರ್ಟ್ (high court) ಅಂತಿಮ ತೀರ್ಪು ನೀಡಿದ್ದು ಶಾಲಾ ಕಾಲೇಜುಗಳಲ್ಲಿ ಅದನ್ನು ಧರಿಸುವಂತಿಲ್ಲ ಎಂದು ಹೇಳಿದೆ. ಆದರೆ, ರಾಜ್ಯದ ಅನೇಕ ಭಾಗಗಳಲ್ಲಿ ಮುಸ್ಲಿಂ ಸಮುದಾಯದ (Muslim community) ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುವುದನ್ನು ಮುಂದುವರಿಸಿದ್ದಾರೆ. ಸಮುದಾಯ ವ್ಯಾಪಾರಸ್ಥರು (traders) ಸ್ವಯಂಘೋಷಿತ ಬಂದ್ ಗಳನ್ನು ಆಚರಿಸುತ್ತಿದ್ದಾರೆ. ರಾಜ್ಯದ ಹಲವಾರು ಭಾಗಗಳಲ್ಲಿ ಸರ್ಕಾರ ನಿಷೇಧಾಜ್ಞೆ ಘೋಷಿಸಿದೆ. ಭಟ್ಕಳ ಒಂದು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಇಲ್ಲೂ ನಿಷೇಧಾಜ್ಞೆ (prohibitory orders) ಜಾರಿಯಲ್ಲಿದೆ. ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬುಧವಾರವೂ ಬಂದ್ ಮಾಡಿದ್ದರು.

ಪರಿಸ್ಥಿತಿ ಹೀಗಿರುವಾಗ ಪಟ್ಟಣದ ಒಂದು ಭಾಗದಲ್ಲಿ ಜನ ಗುಂಪಗೂಡಿದ ಕಾರಣ ಪೊಲೀಸರು ಅಲ್ಲಿಗೆ ಹೋಗಿದ್ದಾರೆ. ಒಬ್ಬ ವ್ಯಕ್ತಿ ಪೊಲೀಸರ ಜೊತೆ ವಾದಕ್ಕಿಳಿಯುತ್ತಾನೆ. ಅವನ ವರ್ತನೆಯಿಂದ ಕೋಪಗೊಳ್ಳುವ ಪೊಲೀಸರು ಅವನನ್ನು ಠಾಣೆಗೆ ಕರೆದೊಯ್ಯಲು ಮುಂದಾಗುತ್ತಾರೆ. ಅವನು ಸಹ ನಡೀರಿ ಹೋಗೋಣ ಅಂತ ಹೊರಡಲು ಅಣಿಯಾಗುತ್ತಾನೆ.

ಪೊಲೀಸರು ಅವನನ್ನು ಕರೆದೊಯ್ಯುವಾಗ ಮತ್ತ್ತೊಬ್ಬ ವ್ಯಕ್ತಿ ಪೊಲೀಸರೊಂದಿಗೆ ಹೋಗುತ್ತಿದ್ದ ವ್ಯಕ್ತಿಯನ್ನು ಹಿಂದಕ್ಕೆಳೆದು ವಾದ ಮಾಡಲು ಶುರುಮಾಡುತ್ತಾನೆ.

ಅವನ ಮತ್ತು ಪೋಲೀಸರ ನಡುವೆ ಜೋರಾಗಿ ವಾಗ್ವಾದ ನಡೆಯುತ್ತದೆ. ಗಲಾಟೆ ಜಾಸ್ತಿಯಿರುವುದರಿಂದ ನಮಗೆ ಮಾತುಗಳು ಕೇಳಿಸುವುದಿಲ್ಲ. ಆದರೆ 2-3 ನಿಮಿಷಗಳ ಕಾಲ ಜಗಳ ಸ್ವರೂಪದ ಮಾತುಕತೆ ನಡೆಯುತ್ತದೆ. ಅದಾದ ಮೇಲೆ ಮೊದಲಿನ ವ್ಯಕ್ತಿ ‘ನಾ ಎಂತ ಮಾಡಿದ್ದೆ,’ ಅನ್ನುತ್ತಾ ಪುನಃ ಪೊಲೀಸರಲ್ಲಿಗೆ ಬರುತ್ತಾನೆ, ಅದರೆ ನೆರೆದ ಜನ ಅವನನ್ನು ಹಿಂದೆ ತಳ್ಳುತ್ತಾರೆ.

ಇದನ್ನೂ ಓದಿ:  ಹಿಜಾಬ್ ಧರಿಸುವ ಅವಕಾಶವಿಲ್ಲ ಅಂತಾದರೆ ಪರೀಕ್ಷೆಗಳನ್ನೂ ಬರೆಯಲ್ಲ ಎಂದರು ಚಾಮರಾಜನಗರ ಕಾಲೇಜೊಂದರ ವಿದ್ಯಾರ್ಥಿನಿಯರು