Ukraine Russia War: ಸಂಧಾನ ಮಾತುಕತೆಯ ನಡುವೆಯೂ ಉಕ್ರೇನ್ ಮೇಲೆ ನಿಲ್ಲದ ರಷ್ಯಾ ದಾಳಿ
ವ್ಯಾಕೆಸ್ಲಾವ್ ಖೌಸ್ ಹೆಸರಿನ ಉಕ್ರೇನಿ ಅಧಿಕಾರಿಯೊಬ್ಬರು ಉಕ್ರೇನಿಯನ್ ಟೆಲಿವಿಷನ್ ಗೆ ನೀಡಿರುವ ಹೇಳಿಕೆಯ ಪ್ರಕಾರ ಬುಧವಾರದಂದು ಉಕ್ರೇನಿನ ಮತ್ತೊಂದು ನಗರ ಚೆರ್ನಿಹಿವ್ ಮೇಲೆ ಪುಟಿನ್ ಸೇನೆ ನಡೆಸಿರುವ ಶೆಲ್ಲಿಂಗ್ ದಾಳಿಯಲ್ಲಿ ಬ್ರೆಡ್ ಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದ 10 ಜನ ಬಲಿಯಾಗಿದ್ದಾರೆ.
ಕೀವ್ ಮೇಲೆ ರಷ್ಯಾದ ಆಕ್ರಮಣ ತೀವ್ರಗೊಳ್ಳುತ್ತಿದೆ ಮತ್ತು ಅಲ್ಲಿನ ನಿವಾಸಿಗಳಲ್ಲಿ ಹತಾಷೆ ಹೆಚ್ಚಾಗುತ್ತಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಧಾನದ ಮಾತುಕತೆಗಳಲ್ಲಿ ಸಕಾರಾತ್ಮಕ ಬೆಳವಣಿಗೆಯ (positive development) ಕುರುಹು ಕಾಣುತ್ತಿದ್ದರೂ ರಷ್ಯಾ ಸೇನೆಯ (Russian forces) ಆರ್ಭಟ ಮುಂದುವರಿದಿದೆ. ನಿಮಗೆ ವಿಡಿಯೋನಲ್ಲಿ ಕಾಣುತ್ತಿರುವ ಬಹುಮಹಡಿ ಕಟ್ಟಡದ ಸ್ಥಿತಿ ನೋಡಿ ಏನಾಗಿದೆ. ಕೀವ್ ನಗರದಲ್ಲಿರುವ (Kyiv city) ಇತರ ಕಟ್ಟಡಗಳ ಮೇಲೆ ಸಹ ಅಕ್ರಮಣ ನಡೆಯುತ್ತಿದೆ. ದಾಳಿಯಲ್ಲಿ ಸತ್ತವರ ಸಂಖ್ಯೆ ಎಷ್ಟು ಅನ್ನುವ ಬಗ್ಗೆ ನಿಖರವಾದ ಮಾಹಿತಿ ಸಿಗುತ್ತಿಲ್ಲ. 12 ಮಹಡಿಗಳ ಈ ಕಟ್ಟಡದ ಮೇಲೆ ಒಂದೇ ಸಮನೆ ಶೆಲ್ಲಿಂಗ್ ನಡೆದ ಕಾರಣ ಕೆಲ ಮಹಡಿಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯು ಬೆಂಕಿಯನ್ನು ಆರಿಸುವ ಪ್ರಯತ್ನ ಮಾಡುತ್ತಿದೆ. ಇದರ ಪಕ್ಕದಲ್ಲೇ 9-ಮಹಡಿಯ ಇನ್ನೊಂದು ಕಟ್ಟಡವಿದ್ದ್ದು ದಾಳಿಯಲ್ಲಿ ಅದು ಸಹ ಸಾಕಷ್ಟು ಹಾಳಾಗಿದೆ.
ಮಂಗಳವಾರದಂದು ರಷ್ಯನ್ ಸೇನೆ ಕೀವ್ ನಗರದ ವಸತಿ ಪ್ರದೇಶಗಳಲ್ಲಿರುವ ಕಟ್ಟಡಗಳ ಮೇಲೆ ದಾಳಿ ನಡೆಸಿದ ಪರಿಣಾಮ ನಾಲ್ವರು ನಾಗರಿಕರು ಮೃತಪಟ್ಟಿದ್ದರು. ಕೀವ್ ನಗರದದ ಪೂರ್ವ ಮತ್ತು ಸಿಟಿ ಸೆಂಟರ್ ಉತ್ತರ ಮತ್ತು ಪಶ್ಚಿಮ ಭಾಗಗಳ ಕಟ್ಟಡಗಳ ಮೇಲೂ ರಷ್ಯನ್ ಸೇನೆ ಆಕ್ರಮಣ ನಡೆಸಿತು.
ಹಾಗೆಯೇ, ವ್ಯಾಕೆಸ್ಲಾವ್ ಖೌಸ್ ಹೆಸರಿನ ಉಕ್ರೇನಿ ಅಧಿಕಾರಿಯೊಬ್ಬರು ಉಕ್ರೇನಿಯನ್ ಟೆಲಿವಿಷನ್ ಗೆ ನೀಡಿರುವ ಹೇಳಿಕೆಯ ಪ್ರಕಾರ ಬುಧವಾರದಂದು ಉಕ್ರೇನಿನ ಮತ್ತೊಂದು ನಗರ ಚೆರ್ನಿಹಿವ್ ಮೇಲೆ ಪುಟಿನ್ ಸೇನೆ ನಡೆಸಿರುವ ಶೆಲ್ಲಿಂಗ್ ದಾಳಿಯಲ್ಲಿ ಬ್ರೆಡ್ ಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದ 10 ಜನ ಬಲಿಯಾಗಿದ್ದಾರೆ.
ರಷ್ಯಾ ಈಗ ಸಾಮಾನ್ಯ ನಾಗರಿಕರ ಮೇಲೆ ಅಪರೋಕ್ಷವಾಗಿ ದಾಳಿ ನಡೆಸುತ್ತಿರುವುದು ಇದರಿಂದ ವಿದಿತವಾಗುತ್ತದೆ ಎಂದು ವ್ಯಾಕೆಸ್ಲಾವ್ ಖೌಸ್ ಹೇಳಿದ್ದಾರೆ. ‘ಇದು ನಗರದ ಮೇಲೆ ನಡೆಯುತ್ತಿರುವ ಮೊದಲ ಶೆಲ್ಲಿಂಗ್ ಏನೂ ಅಲ್ಲ, ಅಥವಾ ಉಕ್ರೇನಿನ ವೈರಿಯು ನಾಗರಿಕ ಮೇಲೆ ದಾಳಿ ನಡೆಸುತ್ತಿರುವುದು ಸಹ ಮೊದಲ ಬಾರಿಯಲ್ಲ. ಚೆರ್ನಿಹಿವ್ ಮತ್ತು ಈ ಪ್ರಾಂತ್ಯದಲ್ಲಿರುವ ಇತರ ನಗರಗಳಲ್ಲಿರುವ ಹೆಚ್ಚಿನ ವಸತಿಪ್ರದೇಹಗಳ ಮೇಲೆ ರಷ್ಯನ್ನರು ದಾಳಿ ನಡೆಸುತ್ತಿದ್ದಾರೆ,’ ಎಂದು ಖೌಸ್ ಹೇಳಿದ್ದಾರೆ.