ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೋಪಿ ನಂ.7 ಅನುಕುಮಾರ್ನ ತಾಯಿ ಜಯಮ್ಮ ಪಟ್ಟ ಕಷ್ಟ ಸಾಮಾನ್ಯವಲ್ಲ
ಮಗನಿಗೆ ಜಾಮೀನು ಸಿಕ್ಕ ವಿಷಯ ಟಿವಿಯಲ್ಲಿ ಕೇಳಿ ತಿಳ್ಕೊಂಡೆ ಅಂತ ಜಯಮ್ಮ ಹೇಳುತ್ತಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅನುಕುಮಾರ್ ಪಾತ್ರ ಏನು ಅಂತ ಗೊತ್ತಿಲ್ಲ ಮತ್ತು ವಿಷಯ ಕೋರ್ಟ್ನಲ್ಲಿರುವುದರಿಂದ ಮಾತಾಡುವುದು ಸಹ ತರವಲ್ಲ. ಆದರೆ, ನಟರ ಬಗ್ಗೆ ಅಂದಾಭಿಮಾನ ಬೆಳೆಸಿಕೊಂಡರೆ ಏನೆಲ್ಲ ತಾಪತ್ರಯಗಳು ಎದುರಾಗಬಹುದು ಅನ್ನೋದಿಕ್ಕೆ ಅನುಕುಮಾರ್ ಸಾಕ್ಷಿಯಾಗುತ್ತಾರೆ.
ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 7ನೇ ಆರೋಪಿ ಅನುಕುಮಾರ್ ನ ತಾಯಿ ಇವರು, ಹೆಸರು ಜಯಮ್ಮ. ಕಳೆದ ಏಳು ತಿಂಗಳಿಂದ ಇವರು ಪಟ್ಟಿರುವ ಪಾಡು ಅಷ್ಟಿಷ್ಟಲ್ಲ, ದುಡಿಯುವ ಪತಿಯನ್ನು ಕಳೆದುಕೊಂಡ ಬಳಿಕ ಸಂಸಾರದ ಹೊರೆ ಹೊತ್ತಿದ್ದ ಮಗ ಅನುಕುಮಾರ್ ಜೈಲು ಸೇರಿದ್ದ. ಹೂವು ಕಟ್ಟಿ ಇವರು ಜೀವನ ಸಾಗಿಸಿದ್ದಾರೆ. ಜಯಮ್ಮನ ಆರೋಗ್ಯವೂ ಸರಿಯಿಲ್ಲ, ಇತ್ತೀಚಿಗಷ್ಟೇ ರಕ್ತ್ತ ಟ್ರಾನ್ಸ್ಫ್ಯೂಸ್ ಮಾಡಿಸಿಕೊಂಡಿದ್ದಾರೆ ಮತ್ತು ಮಾನಸಿಕವಾಗಿ ಮತ್ತು ದೈಹಿಕವಾಗಿ ಎಷ್ಟು ನೊಂದಿದ್ದಾರೆಂದರೆ ಸುಮ್ಮನೆ ಮಾತಾಡಿದರೂ ಎದೆನೋವು ಬರುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಮಗೆ ಮಗ ಬೇಕು, ದರ್ಶನ್ ಬಂದು ಭೇಟಿಯಾಗುವುದಲ್ಲ: ಕಾಶೀನಾಥಯ್ಯ, ರೇಣುಕಾಸ್ವಾಮಿ ತಂದೆ