ಗೃಹ ಸಚಿವರನ್ನು ಭೇಟಿಯಾಗಿ ಪುನಃ ಗನ್ಮ್ಯಾನ್ ರಕ್ಷಣೆ ಒದಗಿಸಬೇಕೆಂದು ಕೋರಿದರು ನಟ ಚೇತನ್
ಜೈಲಿನಿಂದ ಹೊರಬಂದ ಮೇಲೆ ಅವರಿಗೆ ಪುನಃ ಬೆದರಿಕೆ ಕರೆಗಳು ಬರಲಾರಂಭಿಸಿವೆ. ಅವರ ಪತ್ನಿ ಸಹ ಆ ಬಗ್ಗೆ ದೂರಿದ್ದರು. ತಮ್ಮ ಪ್ರಾಣಕ್ಕೆ ಅಪಾಯವಿರುವುದರಿಂದ ಮೊದಲಿನ ಹಾಗೆ ಗನ್ ಮ್ಯಾನ್ ಒದಗಿದಬೇಕು ಅಂತ ಅವರು ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ.
ಪ್ರತಿಭಾವಂತ ನಟ ಮತ್ತು ಸಾಮಾಜಿಕ ಹೋರಾಟಗಾರ (social activist) ಚೇತನ್ ಕುಮಾರ್ (Chetan Kumar) ಅವರು ಮಂಗಳವಾರ ಬೆಳಗ್ಗೆ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರನ್ನು ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತಾಡುತ್ತಾ ಸಚಿವರನ್ನು ಮಾತಾಡಿಸಿದ ಕಾರಣವನ್ನು ವಿವರಿಸಿದರು. ಹಿಜಾಬ್ ವಿವಾದ ಕುರಿತಂತೆ ಹೈಕೋರ್ಟ್ ನ್ಯಾಯಾಧೀಶರ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ ಕಾರಣ ಬಂಧಕ್ಕೊಳಗಾಗಿದ್ದ ಚೇತನ್ ಅವರು ಫೆಬ್ರವರಿ 28 ರಂದು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರೀಯ ಜೈಲಿನಿಂದ ಹೊರಬಂದಿದ್ದರು. ಚೇತನ್ ಹೇಳುವ ಪ್ರಕಾರ ಜೈಲಿನಿಂದ ಆಚೆ ಬಂದ ಬಳಿಕ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಹಾಗಾಗಿ ತಮಗೆ ರಕ್ಷಣೆ ಮತ್ತು ಭದ್ರತೆಯ ಭಾಗವಾಗಿ ಒಬ್ಬ ಗನ್ ಮ್ಯಾನ್ ಒದಗಸಬೇಕು ಎಂದು ಮನವಿ ಮಾಡಿಕೊಳ್ಳಲು ಗೃಹ ಸಚಿವರನ್ನು ಭೇಟಿಯಾಗಿದ್ದಾಗಿ ಅವರು ಹೇಳಿದರು.
ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ವಿರೋಧಿಸಿ ನಡೆಯುತ್ತಿದ್ದ ಎಲ್ಲ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದ ಚೇತನ್ ಅವರಿಗೆ ಆಗಲೂ ಬೆದರಿಕೆ ಕರೆಗಳು ಬರುತ್ತಿದ್ದ ಕಾರಣ ಆಗಿನ ಸರ್ಕಾರ ಅವರಿಗೆ ಒಬ್ಬ ಗನ್ ಮ್ಯಾನ್ ಅನ್ನು ಒದಗಿಸಿತ್ತು. ಆದರೆ ಕಳೆದ ತಿಂಗಳು ಅವರು ಜೈಲಿಗೆ ಹೋದ ಬಳಿಕ ಸರ್ಕಾರ ಅವರಿಗೆ ಒದಗಿಸಿದ್ದ ಭದ್ರತೆಯನ್ನು ವಾಪಸ್ಸು ತೆಗೆದುಕೊಂಡಿತ್ತು.
ಜೈಲಿನಿಂದ ಹೊರಬಂದ ಮೇಲೆ ಅವರಿಗೆ ಪುನಃ ಬೆದರಿಕೆ ಕರೆಗಳು ಬರಲಾರಂಭಿಸಿವೆ. ಅವರ ಪತ್ನಿ ಸಹ ಆ ಬಗ್ಗೆ ದೂರಿದ್ದರು. ತಮ್ಮ ಪ್ರಾಣಕ್ಕೆ ಅಪಾಯವಿರುವುದರಿಂದ ಮೊದಲಿನ ಹಾಗೆ ಗನ್ ಮ್ಯಾನ್ ಒದಗಿದಬೇಕು ಅಂತ ಅವರು ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ.
ಗಡೀಪಾರು ಮಾಡುವ ಬಗ್ಗೆ ಹರಡಿರುವ ವದಂತಿಯನ್ನು ಚೇತನ್ ಅವರ ಗಮನಕ್ಕೆ ತಂದಾಗ, ಅಂಥ ಯಾವುದೇ ವಿಷಯ ತನ್ನ ಗಮನಕ್ಕೆ ಬಂದಿಲ, ಸೆನ್ಸೇಷನ್ ಹುಟ್ಟಿಸುವುದಕ್ಕೆ ಮಾಡಿರುವ ಪ್ರಯತ್ನ ಇದು, ಅತಿರೇಕದ ಮಾತಾಗಿರುವುದರಿಂದ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ನಟ ಚೇತನ್ಗೆ ಮತ್ತೊಂದು ಸಂಕಷ್ಟ; ಚಾರ್ಜ್ ಶೀಟ್ ಸಲ್ಲಿಕೆಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಪೊಲೀಸರು