ದಯವಿಟ್ಟು ಇದನ್ನು ಗಮನಿಸಿ: ಸ್ವಚ್ಛತೆಗಾಗಿ ಅಧಿಕಾರಿಗಳು, ಪ್ರತಿನಿಧಿಗಳಿಗೆ ಅನಿರುದ್ಧ್ ಮನವಿ
ಕನ್ನಡದ ನಟ ಅನಿರುದ್ಧ್ ಅವರಿಗೆ ಸಾಮಾಜಿಕ ಕಾಳಜಿ ಇದೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಅವರು ಈ ಕುರಿತು ಮಾತನಾಡುತ್ತಾರೆ. ಬೆಂಗಳೂರಿನ ಸ್ವಚ್ಛತೆಯ ಕುರಿತು ಸ್ಥಳೀಯರಲ್ಲಿ ಮತ್ತು ಅಧಿಕಾರಿಗಳಲ್ಲಿ ಅನಿರುದ್ಧ್ ಮನವಿ ಮಾಡುತ್ತಾರೆ. ಕಸದ ರಾಶಿ ಕಂಡರೆ ಅದರ ವಿಡಿಯೋ ಹಂಚಿಕೊಂಡು ಬದಲಾವಣೆಗಾಗಿ ಕರೆ ನೀಡುತ್ತಾರೆ.
ನಟ ಅನಿರುದ್ಧ್ ಜತ್ಕರ್ (Anirudh Jatkar) ಅವರು ಸಾಮಾಜಿಕ ಕಾಳಜಿ ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಆಗಾಗ ಈ ಕುರಿತು ಮಾತನಾಡುತ್ತಾರೆ. ಬೆಂಗಳೂರಿನ ಸ್ವಚ್ಛತೆಯ ಬಗ್ಗೆ ಸ್ಥಳೀಯರಲ್ಲಿ ಹಾಗೂ ಅಧಿಕಾರಿಗಳಲ್ಲಿ ಅನಿರುದ್ಧ್ ಮನವಿ ಮಾಡುತ್ತಾರೆ. ಎಲ್ಲಿಯೇ ಕಸದ ರಾಶಿ ಕಂಡರೂ ಕೂಡ ಅದರ ವಿಡಿಯೋ ಹಂಚಿಕೊಂಡು ಬದಲಾವಣೆಗಾಗಿ ಕರೆ ನೀಡುತ್ತಾರೆ. ಈಗ ಅವರು ಲಾಲ್ಬಾಗ್ (Lalbagh) ಎದುರಿನ ಸ್ವಚ್ಛತೆಗಾಗಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ‘ಸ್ಥಳೀಯರಲ್ಲಿ, ಅಧಿಕಾರಿಗಳಲ್ಲಿ, ಜನ ಪ್ರತಿನಿಧಿಗಳಲ್ಲಿ ಕೈ ಮುಗಿದು ಕಳಕಳಿಯಿಂದ ಕೇಳಿಕೊಳ್ಳುತ್ತೇವೆ. ಈ ಬಗ್ಗೆ ಗಮನ ಹರಿಸಿ, ಸ್ವಚ್ಛಗೊಳಿಸಿ. ನಾವು ಬೇರೆ ದೇಶಗಳಿಗೆ ಮಾದರಿ ಆಗೋಣ’ ಎಂದು ಅನಿರುದ್ಧ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.