ಕೈ ನೋವಿನ ಮಧ್ಯೆಯೂ ನಗುನಗುತ್ತಲೇ ಆಲ್ಬಂ ಸಾಂಗ್ ರಿಲೀಸ್ ಮಾಡಿದ ದರ್ಶನ್

ಕೈ ನೋವಿನ ಮಧ್ಯೆಯೂ ನಗುನಗುತ್ತಲೇ ಆಲ್ಬಂ ಸಾಂಗ್ ರಿಲೀಸ್ ಮಾಡಿದ ದರ್ಶನ್

ರಾಜೇಶ್ ದುಗ್ಗುಮನೆ
|

Updated on: Apr 04, 2024 | 8:01 AM

ದರ್ಶನ್ ಅವರು ‘ಜಾಜಿ’ ಆಲ್ಬಂ ಸಾಂಗ್​ನ ರಿಲೀಸ್ ಮಾಡಿ ತಂಡಕ್ಕೆ ಶುಭಾಶಯ ಕೋರಿದ್ದಾರೆ. ಕೈ ನೋವಿನ ಮಧ್ಯೆಯೂ ನಗುತ್ತಲೇ ಸಾಂಗ್ ರಿಲೀಸ್ ಮಾಡಿದ್ದಾರೆ. ಹರ್ಷಿತ್ ಗೌಡ ಗೀತರಚನೆ ಮಾಡಿ ಸಂಗೀತ ನೀಡಿದ್ದಾರೆ.

ಮಾಜಿ ಕಾರ್ಪೋರೇಟರ್​ ಮೋಹನ್​ ರಾಜು ಅವರ ಮಗಳು ಜಾಜಿ ನಟಿಸಿರುವ ಆಲ್ಬಂ ಸಾಂಗ್ ರಿಲೀಸ್ ಆಗಿದೆ. ಈ ಆಲ್ಬಂಗೆ ‘ಜಾಜಿ’ ಎಂದೇ ಟೈಟಲ್ ಇಡಲಾಗಿದೆ. ಇದನ್ನು ನಟ ದರ್ಶನ್ (Darshan) ಅವರು ರಿಲೀಸ್ ಮಾಡಿದ್ದಾರೆ. ದರ್ಶನ್ ಅವರ ಕೈಗೆ ಪೆಟ್ಟಾಗಿದೆ. ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಆದರೆ, ಸುಮಲತಾ ಅವರ ರಾಜಕೀಯ ನಿಲುವು ಘೋಷಣೆ ಕಾರ್ಯಕ್ರಮದಲ್ಲಿ ಅವರು ಭಾಗಿ ಆಗಿದ್ದರು. ಹೀಗಾಗಿ ಶಸ್ತ್ರಚಿಕಿತ್ಸೆ ಮುಂದೂಡಿಕೊಂಡಿದ್ದಾರೆ. ಈಗ ದರ್ಶನ್ ಅವರು ‘ಜಾಜಿ’ ಆಲ್ಬಂ ಸಾಂಗ್​ನ ರಿಲೀಸ್ ಮಾಡಿ ತಂಡಕ್ಕೆ ಶುಭಾಶಯ ಕೋರಿದ್ದಾರೆ. ಕೈ ನೋವಿನ ಮಧ್ಯೆಯೂ ನಗುತ್ತಲೇ ಸಾಂಗ್ ರಿಲೀಸ್ ಮಾಡಿದ್ದಾರೆ. ಹರ್ಷಿತ್ ಗೌಡ ಗೀತರಚನೆ ಮಾಡಿ ಸಂಗೀತ ನೀಡಿದ್ದಾರೆ. ಖ್ಯಾತ ಗಾಯಕಿ ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ಡಿ ಬಿಟ್ಸ್ ಆಡಿಯೋ ಸಂಸ್ಥೆ ಮೂಲಕ ಈ ಸಾಂಗ್ ಬಿಡುಗಡೆ ಆಗಿದ್ದಾರೆ. ದರ್ಶನ್ ಜೊತೆ ನಿರ್ಮಾಪಕಿ ಶೈಲಜಾನಾಗ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗಿ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ