‘ಜಾಜಿ’ ಹಾಡು ಮತ್ತು ಹೆಸರಿನ ಹಿಂದೆ ಇರುವ ಅಪರೂಪದ ಕಥೆ ಹೇಳಿದ ನಟ ದರ್ಶನ್
ನಟ ದರ್ಶನ್ ಅವರು ‘ಜಾಜಿ’ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ್ದಾರೆ. ಕೈ ನೋವಿನ ನಡುವೆಯೂ ಅವರು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದಾರೆ. ‘ಜಾಜಿ’ ತಂಡಕ್ಕೆ ಅವರು ಶುಭ ಕೋರಿದ್ದಾರೆ. ಅಲ್ಲದೇ ಈ ಹೆಸರಿನ ಹಿಂದೆ ಇರುವ ಅಚ್ಚರಿಯ ವಿಚಾರವನ್ನು ಕೂಡ ಹಂಚಿಕೊಂಡಿದ್ದಾರೆ. ಈ ಹಾಡಿಗೆ ಐಶ್ವರ್ಯಾ ರಂಗರಾಜನ್ ಅವರು ಧ್ವನಿ ನೀಡಿದ್ದಾರೆ.
ಮಾಜಿ ಕಾರ್ಪೋರೇಟರ್ ಮೋಹನ್ ರಾಜು ಅವರ ಪುತ್ರಿ ಜಾಜಿ ನಟಿಸಿರುವ ಆಲ್ಬಂ ಸಾಂಗ್ (Album Song) ಬಿಡುಗಡೆ ಆಗಿದೆ. ಈ ಹಾಡಿನ ಹೆಸರು ಕೂಡ ‘ಜಾಜಿ’. ನಟ ದರ್ಶನ್ ಅವರು ಈ ಹಾಡನ್ನು ಇಂದು (ಏಪ್ರಿಲ್ 3) ಬಿಡುಗಡೆ ಮಾಡಿದ್ದಾರೆ. ಈ ವೇಳೆ ಅವರು ಜಾಜಿ (Jaaji) ಹೆಸರಿನ ಹಿಂದೆ ಇರುವ ಅಪರೂಪದ ಕಥೆಯನ್ನು ವಿವರಿಸಿದ್ರು. ‘ಈ ಆಲ್ಬಂ ಸಾಂಗ್ನ ಹಿಂದೆ ಒಂದು ಚಿಕ್ಕ ಕಥೆ ಇದೆ. ಮೋಹನ್ ರಾಜು ಅವರು ಎಲ್ಲದರಲ್ಲೂ ಕ್ರಿಯೇಟಿವ್ ಆಗಿರುತ್ತಾರೆ. ಒಂದು ದಿನ ತಮ್ಮ ಮಗಳು ಡ್ಯಾನ್ಸ್ ಕಲಿಯುತ್ತಿದ್ದಾಳೆ ಅಂದ್ರು. ಆಕೆಯ ಹೆಸರು ಜಾಜಿ ಅಂತ ಗೊತ್ತಾದಾಗ ನನಗೆ ಆಶ್ಚರ್ಯ ಎನಿಸಿತು. ಈಗನ ಟ್ರೆಂಡ್ನಲ್ಲಿ ಯಾರು ಜಾಜಿ ಅಂತ ಹೆಸರು ಇಡ್ತಾರೆ? ಮಗಳಿಗೆ ಜಾಜಿ ಅಂತ ಹೆಸರು ಇಟ್ಟರು ಓಕೆ. ಆದರೆ ಮಗನಿಗೆ ಜಾಣ ಅಂತ ಹೆಸರು ಇಟ್ಟಿದ್ದಾರೆ! ಇಷ್ಟು ಕ್ರಿಯೇಟಿವ್ ಆಗಿದ್ದಾರೆ ಅವರು. ಎಲ್ಲರೂ ಸೇರಿ ಒಳ್ಳೆಯ ಸಾಂಗ್ ಮಾಡಿದ್ದಾರೆ. ಅದಕ್ಕೆ ಆನೆ ಬಲದ ರೀತಿ ಶೈಲಜಾ ನಾಗ್ ಮತ್ತು ಹರಿಕೃಷ್ಣ ಅವರು ಡಿ-ಬೀಟ್ಸ್ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ. ಅದು ದೊಡ್ಡ ವಿಷಯ. ನಿಮ್ಮ ಪ್ರೀತಿ-ಪ್ರೋತ್ಸಾಹ ನೀಡಿ. ಈ ಮಗು ಚೆನ್ನಾಗಿ ಬೆಳೆಯಲಿ’ ಎಂದು ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ (Challenging Star Darshan) ಹಾರೈಸಿದ್ದಾರೆ. ಹರ್ಷಿತ್ ಗೌಡ ಅವರು ಈ ಹಾಡಿಗೆ ಸಂಗೀತ ನೀಡಿ, ಸಾಹಿತ್ಯ ಬರೆದಿದ್ದಾರೆ. ಬಿ. ಸುನೀತಾ ಮೋಹನ್ ರಾಜು ನಿರ್ಮಾಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.