AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಟ್ಟೇರಿತು ‘ಮೆಜೆಸ್ಟಿಕ್​ 2’ ಸಿನಿಮಾ; ಹೀರೋ ದರ್ಶನ್​ ಅಲ್ಲ, ಭರತ್​

2002ರಲ್ಲಿ ‘ಮೆಜೆಸ್ಟಿಕ್​’ ಸಿನಿಮಾ ಬಂದಿತ್ತು. ಅದರಲ್ಲಿ ದರ್ಶನ್​ ಅವರು ದಾಸ ಎಂಬ ಪಾತ್ರ ಮಾಡಿದ್ದರು. ಈಗ ‘ಮೆಜೆಸ್ಟಿಕ್​ 2’ ಚಿತ್ರ ಸೆಟ್ಟೇರಿದೆ. ಇದರಲ್ಲಿ ಹೊಸ ನಟ ಭರತ್​ ಅವರು ಮರಿ ದಾಸ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಟೈಟಲ್​ ಕಾರಣದಿಂದ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಮನೆ ಮಾಡಿದೆ. ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡದವರು ಮಾತನಾಡಿದ್ದಾರೆ.

ಸೆಟ್ಟೇರಿತು ‘ಮೆಜೆಸ್ಟಿಕ್​ 2’ ಸಿನಿಮಾ; ಹೀರೋ ದರ್ಶನ್​ ಅಲ್ಲ, ಭರತ್​
ಭರತ್​
ಮದನ್​ ಕುಮಾರ್​
|

Updated on: Mar 31, 2024 | 10:47 PM

Share

ನಟ ದರ್ಶನ್​ (Darshan) ಅವರು ಹೀರೋ ಆಗಿ ನಟಿಸಿದ್ದು ‘ಮೆಜೆಸ್ಟಿಕ್​’ ಸಿನಿಮಾದಲ್ಲಿ. ಆ ಚಿತ್ರದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಈಗ ‘ಮೆಜೆಸ್ಟಿಕ್​ 2’ ಸಿನಿಮಾ (Majestic 2 Movie) ಸೆಟ್ಟೇರಿದೆ. ಇಂದು (ಮಾರ್ಚ್​ 31) ಈ ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ಆದರೆ ಈ ಬಾರಿಗೆ ಹೀರೋ ಆಗಿ ನಟಿಸಲಿರುವುದು ದರ್ಶನ್​ ಅಲ್ಲ. ಬದಲಿಗೆ, ಹೊಸ ನಟ ಭರತ್ ಅವರು ಹೀರೋ ಆಗಿ ‘ಮೆಜೆಸ್ಟಿಕ್​ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ರಾಮು ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಎಚ್​. ಆನಂದಪ್ಪ ಅವರು ನಿರ್ಮಾಣ ಮಾಡುತ್ತಿದ್ದಾರೆ. ‘ಅಮ್ಮ ಎಂಟರ್​ಟೈನ್ಮೆಂಟ್​’ ಹಾಗೂ ‘ಅಮ್ಮ ಫಿಲ್ಮ್ಸ್​’ ಮೂಲಕ ‘ಮೆಜೆಸ್ಟಿಕ್​ 2’ ಸಿನಿಮಾ ಸಿದ್ಧವಾಗುತ್ತಿದೆ. ಮುಹೂರ್ತದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಟ ಭರತ್​ (Bharat) ಅವರು ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.

ಕ್ಯಾಮೆರಾ ಚಾಲನೆ ಮಾಡುವ ಮೂಲಕ ಹಿರಿಯ ನಟಿ ಶ್ರುತಿ ಅವರು ‘ಮೆಜಸ್ಟಿಕ್​ 2’ ಸಿನಿಮಾ ತಂಡಕ್ಕೆ ಸಾಥ್​ ನೀಡಿದ್ದಾರೆ. ಸಂಹಿತಾ ವಿನ್ಯಾ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ವಿನು ಮನಸು ಅವರ ಸಂಗೀತ ನಿರ್ದೇಶನ, ವೀನಸ್​ ಮೂರ್ತಿ ಅವರ ಛಾಯಾಗ್ರಣ ಈ ಸಿನಿಮಾಗೆ ಇರಲಿದೆ. ‘ಮೆಜೆಸ್ಟಿಕ್​ 2’ ಎಂಬ ಟೈಟಲ್​ ಕಾರಣದಿಂದ ಎಲ್ಲರ ಗಮನ ಈ ಸಿನಿಮಾದ ಮೇಲಿದೆ. ಆ ಬಗ್ಗೆ ನಟ ಭರತ್​ ಅವರು ಮಾತನಾಡಿದ್ದಾರೆ.

‘ನನ್ನ ಮೊದಲ ಸಿನಿಮಾದ ಮುಹೂರ್ತಕ್ಕೆ ಇಷ್ಟು ಜನರು ಬಂದು ಆಶೀರ್ವಾದ ಮಾಡಿದ್ದು ನನಗೆ ಖುಷಿ ನೀಡಿದೆ. ನಮ್ಮ ಸಿನಿಮಾದ ಟೈಟಲ್​ ಮೇಲೆ ಎಲ್ಲರ ಗಮನ ಇದೆ. ಮೆಜೆಸ್ಟಿಕ್​ ಅಂದ ತಕ್ಷಣ ನೆನಪಿಗೆ ಬರುವುದು ಡಿ ಬಾಸ್​ ದರ್ಶನ್​. ಅವರು ನಮಗೆ ದೇವರು ಇದ್ದಂಗೆ. ದೇವರು ವಿಗ್ರಹ ಬಿಟ್ಟು ಬರಬೇಕು ಅಂತೇನೂ ಇಲ್ಲ. ಅವರು ಬರದಿದ್ದರೂ ಅವರ ಆಶೀರ್ವಾದ ನಮ್ಮ ಮೇಲೆ ಇದೆ ಎಂದುಕೊಂಡು ನಾವು ಈ ಸಿನಿಮಾವನ್ನು ಶುರು ಮಾಡಿದ್ದೇವೆ’ ಎಂದು ಭರತ್​ ಹೇಳಿದ್ದಾರೆ.

ಈ ಸಿನಿಮಾದಲ್ಲಿ ಭರತ್​ ಅವರು ಮರಿ ದಾಸ ಎಂಬ ಪಾತ್ರ ಮಾಡುತ್ತಿದ್ದಾರೆ. ‘ಈಗಿನ ಕಾಲದಲ್ಲಿ ಮೆಜೆಸ್ಟಿಕ್​ ಎನ್ನುವ ಊರಿನಲ್ಲಿ ಯಾವ ರೀತಿ ಚಟುವಟಿಕೆಗಳು ನಡೆಯುತ್ತವೆ? ಈಗ ಯಾವ ರೀತಿ ರೌಡಿಸಂ ಇದೆ? ಅದರ ಸ್ವರೂಪ ಯಾವ ರೀತಿ ಇರಲಿದೆ ಎಂಬುದನ್ನು ನಮ್ಮ ಸಿನಿಮಾದಲ್ಲಿ ತೋರಿಸುತ್ತೇವೆ. ಶೀರ್ಷಿಕೆ ಕಾರಣದಿಂದ ನಿರೀಕ್ಷೆ ಇದೆ. ನಿರೀಕ್ಷೆ ಬರಲು ಕಾರಣ ಡಿ ಬಾಸ್​. ಹಾಗಾಗಿ ನಮಗೆ ಭಯ ಮತ್ತು ಜವಾಬ್ದಾರಿ ಇದೆ. ನಿರೀಕ್ಷೆಯ ಮಟ್ಟ ತಲುಪಲು ನಾವು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅವರ ರೀತಿ ಸಕ್ಸಸ್​ ಸಿಗದಿದ್ದರೂ ಅವರ ಯಶಸ್ಸಿನಲ್ಲಿ ಕಿಂಚಿತ್ತು ಸಿಕ್ಕರೂ ಕೂಡ ಅದನ್ನು ನಾವು ಯಶಸ್ಸು ಅಂತ ಪರಿಗಣಿಸುತ್ತೇವೆ’ ಎಂದು ಭರತ್​ ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್ ಮಾಜಿ ಪಿಎ ವಿರುದ್ಧ ಪತ್ರಿಕಾ ಪ್ರಕಟಣೆ; 7 ವರ್ಷವಾದ್ರೂ ಯಾರಿಗೂ ಸಿಕ್ಕಿಲ್ಲ ಮಲ್ಲಿಕಾರ್ಜುನ್

ನಟಿ ಸಂಹಿತಾ ವಿನ್ಯಾ ಅವರು ಒಂದು ಚಾಲೆಂಜಿಂಗ್​ ಪಾತ್ರ ಮಾಡಲಿದ್ದಾರಂತೆ. ‘ನಾಳೆಯಿಂದಲೇ ಶೂಟಿಂಗ್​ ಆರಂಭ ಆಗಲಿದೆ. ಎಲ್ಲರ ಮನಸ್ಸಿನಲ್ಲೂ ಡಿ ಬಾಸ್​ ದರ್ಶನ್​ ಇರುತ್ತಾರೆ. ಆದರೆ ನಮ್ಮದು ಹೊಸಬರ ಸಿನಿಮಾ. ಇದನ್ನು ಜನರು ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಕಥೆಯಂತೂ ತುಂಬ ಅದ್ಭುತವಾಗಿ ಮೂಡಿಬರಲಿದೆ’ ಎಂದು ಸಂಹಿತಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್