ದರ್ಶನ್ ಮಾಜಿ ಪಿಎ ವಿರುದ್ಧ ಪತ್ರಿಕಾ ಪ್ರಕಟಣೆ; 7 ವರ್ಷವಾದ್ರೂ ಯಾರಿಗೂ ಸಿಕ್ಕಿಲ್ಲ ಮಲ್ಲಿಕಾರ್ಜುನ್

‘ಪ್ರೇಮ ಬರಹ’ ಸಿನಿಮಾದ ವಿತರಣೆಯ ವಿಚಾರವಾಗಿ ಅರ್ಜುನ್ ಸರ್ಜಾ ಮತ್ತು ಮಲ್ಲಿಕಾರ್ಜುನ್ ನಡುವೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಕೊಡುವ ಒಪ್ಪಂದ ಆಗಿತ್ತು. ಈ ವಿಚಾರವಾಗಿ ಸ್ವತಃ ಮಲ್ಲಿಕಾರ್ಜುನ್ ಅವರೇ ‘ಶ್ರೀ ಕಾಲಕಾಲೇಶ್ವರ ಎಂಟರ್​ಪ್ರೈಸಸ್’ ಮೂಲಕ ವಿತರಣೆಯ ಹಣದ ವಿಚಾರವನ್ನು ಬರೆದುಕೊಟ್ಟಿದ್ದರು. ಬಳಿಕ ಮಲ್ಲಿಕಾರ್ಜುನ್ ನಾಪತ್ತೆ ಆದರು.

ದರ್ಶನ್ ಮಾಜಿ ಪಿಎ ವಿರುದ್ಧ ಪತ್ರಿಕಾ ಪ್ರಕಟಣೆ; 7 ವರ್ಷವಾದ್ರೂ ಯಾರಿಗೂ ಸಿಕ್ಕಿಲ್ಲ ಮಲ್ಲಿಕಾರ್ಜುನ್
ದರ್ಶನ್ ಮಾಜಿ ಪಿಎ ಮಲ್ಲಿಕಾರ್ಜುನ್ ವಿರುದ್ಧ ಪತ್ರಿಕಾ ಪ್ರಕಟಣೆ
Follow us
Mangala RR
| Updated By: ಮದನ್​ ಕುಮಾರ್​

Updated on: Mar 31, 2024 | 9:59 PM

ಸಿನಿಮಾ ವಿತರಕ ಮಲ್ಲಿಕಾರ್ಜುನ್ ವಿಚಾರವಾಗಿ ನಟ/ನಿರ್ಮಾಪಕ ಅರ್ಜುನ್ ಸರ್ಜಾ (Arjun Sarja) ಅವರು ಮತ್ತು ಅವರ ಪರ ವಕೀಲರು ನ್ಯಾಯಲಯದ ಮೊರೆ ಹೋಗಿದ್ದು, ಕಲಂ 138 ಎನ್.ಐ. ಆಕ್ಟ್​ ಅಡಿಯಲ್ಲಿ ಒಂದು ಕೋಟಿ ವಸುಲಾತಿಗಾಗಿ ಆರೋಪಿ ಮಲ್ಲಿಕಾರ್ಜುನ್ ವಿರುದ್ಧ 2018ರ ಡಿಸೆಂಬರ್​ 27ರಂದು ಪ್ರಕರಣ ದಾಖಲೆ ಮಾಡಿದ್ದರು. ಈಗ ಈ ಪ್ರಕರಣ ಮತ್ತೊಂದು ಹಂತಕ್ಕೆ ಹೋಗಿದೆ. ಮಲ್ಲಿಕಾರ್ಜುನ್ ವಿರುದ್ಧ ಎ.ಸಿ.ಎಂ.ಎಂ. ನ್ಯಾಯಾಲಯ ಪತ್ರಿಕಾ ಪ್ರಕಟಣೆಗೆ ಆರೋಪಿಗೆ ಉದ್ಘೋಷಣೆ ಪತ್ರವನ್ನ ಪ್ರಕಟಿಸಲು ಅನುಮತಿ ಕೊಟ್ಟಿದೆ. ಈ ಪತ್ರಿಕೆಯ ಪ್ರಕಟಣೆಯ ನಡುವೆಯೂ ಮಲ್ಲಿಕಾರ್ಜುನ್ (Mallikarjun) ನ್ಯಾಯಲಯಕ್ಕೆ ಹಾಜರಾಗದೇ ಇದ್ದರೆ ವಾರೆಂಟ್ ಜಾರಿ ಮಾಡುವಂತೆ ಆದೇಶ ನೀಡಿದೆ.

ಏನಿದು ಪ್ರಕರಣ?

ಅರ್ಜುನ್ ಸರ್ಜಾ ನಿರ್ದೇಶನ ಮತ್ತು ನಿರ್ಮಾಣದ ಚಿತ್ರ ‘ಪ್ರೇಮ ಬಹರ’ ಚಿತ್ರವನ್ನ ಮಲ್ಲಿಕಾರ್ಜುನ್ (ಮಲ್ಲಿ) ರಾಜ್ಯಾದ್ಯಂತ ವಿತರಣೆ ಮಾಡಿದ್ದರು. 2018 ಫೆಬ್ರವರಿ 9ರಂದು ರಾಜ್ಯಾದ್ಯಂತ ‘ಪ್ರೇಮ ಬರಹ’ ಸಿನಿಮಾ ರಿಲೀಸ್ ಆಗಿತ್ತು. ಚಂದನ್ ಕುಮಾರ್ ಹಾಗೂ ಅರ್ಜುನ್ ಸರ್ಜಾ ಅವರ ಮೊದಲ ಪುತ್ರಿ ಐಶ್ವರ್ಯಾ ಅರ್ಜುನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್, ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಅವರು ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. 2018ರ ಶುರುವಿನಲ್ಲಿ ಎಲ್ಲವೂ ಚೆನ್ನಾಗೆ ಇತ್ತು. ಆದರೆ ‘ಪ್ರೇಮ ಬರಹ’ ಸಿನಿಮಾದ ವಿತರಣೆಯ ಹಣದ ವಿಚಾರದಲ್ಲಿ ದರ್ಶನ್ ಮಾಜಿ ಪಿ.ಎ. ಮಲ್ಲಿಕಾರ್ಜುನ್ ಮತ್ತು ನಟ-ನಿರ್ಮಾಪಕ-ನಿರ್ದೇಶಕ ಅರ್ಜುನ್ ಸರ್ಜಾರಲ್ಲಿ ವೈ ಮನಸು ಶುರುವಾಯ್ತು.

ಅರ್ಜುನ್ ಸರ್ಜಾ ಮತ್ತು ಮಲ್ಲಿಕಾರ್ಜುನ್ ನಡುವೆ ‘ಪ್ರೇಮ ಬರಹ’ ಸಿನಿಮಾದ ವಿತರಣೆಯ ವಿಚಾರವಾಗಿ ಬರೋಬ್ಬರಿ 1 ಕೋಟಿ ಕೊಡುವ ಒಪ್ಪಂದ ಆಗಿತ್ತು. ಈ ವಿಚಾರವಾಗಿ ಸ್ವತಃ ಮಲ್ಲಿಕಾರ್ಜುನ್ ಅವರೇ ‘ಶ್ರೀ ಕಾಲಕಾಲೇಶ್ವರ ಎಂಟರ್​ಪ್ರೈಸಸ್’ ಬುಕ್​​ಲೈಟ್​ನಲ್ಲಿ ವಿತರಣೆಯ ಹಣದ ವಿಚಾರವನ್ನು ಬರೆದುಕೊಟ್ಟಿದ್ದರು. ಆ ಪತ್ರದ ಸಾರಂಶ ಹೀಗಿದೆ:

‘ದಿನಾಂಕ:18.06.2018. ಮೇಲ್ಕಂಡ ನಮ್ಮ ಸಂಸ್ಥೆಯಿಂದ ವಿತರಣೆಗೊಂಡ ‘ಪ್ರೇಮ ಬರಹ ಕನ್ನಡ ಚಲನಚಿತ್ರದ ಲೆಕ್ಕಾಚಾರವು ಮುಗಿದಿದ್ದು, ನಾವುಗಳು ನಿರ್ಮಾಪಕರಿಗೆ ಷೇರು ಹಣವಾದ ರೂ.1,00,00,000/- (ಒಂದು ಕೋಟಿ ರೂಪಾಯಿಗಳು)ಗಳನ್ನು ಪಾವತಿಸಬೇಕಾಗಿದೆ. ಸದರಿ ಷೇರು ಹಣದ ಪಾವತಿಗೆ 30.06.2018ರ ವರೆಗೆ ಸಮಯಾವಕಾಶ ಇರುತ್ತದೆ. ಇದರ ಸಲುವಾಗಿ ರೂ.50,00,00/- (ಐವತ್ತು ಲಕ್ಷ ರೂಪಾಯಿಗಳು) ಗಳ ಒಂದು ಚೆಕ್ಕನ್ನು (ಚೆಕ್ ನಂ.253134 , ದಿನಾಂಕ. 30.06.2018, ವಿಜಯಾ ಬ್ಯಾಂಕ್ , ಗಾಂಧಿನಗರ, ಬೆಂಗಳೂರು)ಗಳ ಇನ್ನೊಂದು ಚೆಕ್ಕನ್ನು (ಚೆಕ್ ನಂ. 253135, ದಿನಾಂಕ 30.06.2018, ವಿಜಯಾ ಬ್ಯಾಂಕ್, ಗಾಂಧಿನಗರ , ಬೆಂಗಳೂರು) ನಿರ್ಮಾಪಕರಿಗೆ ನೀಡಿರುತ್ತೇವೆ. ಇದರ ಜೊತೆಗೆ ‘ಪ್ರೇಮ ಬರಹ ಚಿತ್ರದ ನಮ್ಮ ಕಡೆಯಿಂದ ಎಲ್ಲಾ ಲೆಕ್ಕಾಚಾರದ ವ್ಯವಹಾರವು ಮುಕ್ತಾಯಗೊಳ್ಳಲಿದೆ. ಧನ್ಯವಾದಗಳು. ಇಂತಿ ತಮ್ಮ ವಿಶ್ವಾಸಿ. ಶ್ರೀ ಕಾಲ ಕಾಲೇಶ್ವರ ಎಂಟರ್​ಪ್ರೈಸಸ್’.

ಈ ಮೆಲ್ಕಂಡ ಪತ್ರದ ಆಧಾರದ ಮೇಲೆ ಅರ್ಜುನ್ ಸರ್ಜಾ ಕೇಸ್ ಹಾಕಿದ್ದರು. ಫೆಬ್ರವರಿ ತಿಂಗಳು 9ರಂದು 2018ರಲ್ಲಿ ತೆರೆಕಂಡ ‘ಪ್ರೇಮ ಬರಹ’ದ ಕಲೆಕ್ಷನ್ ಹಣವನ್ನು ಮಲ್ಲಿಕಾರ್ಜುನ್ ಕೊಟ್ಟಿರಲಿಲ್ಲ. 2018 ಫೆಬ್ರವರಿ ತಿಂಗಳ ನಂತರ ಮುಂದಿನ ಆರೇಳು ತಿಂಗಳು ಅರ್ಜುನ್ ಸರ್ಜಾ ಅವರು ಮಲ್ಲಿಕಾರ್ಜುನ್ ಅವರಲ್ಲಿ ವಿತರಣೆಯ ಹಣವನ್ನ ಕೊಡುವಂತೆ ಕೇಳಿಕೊಂಡಿದೆ. ಇದೇ ಸಮಯದಲ್ಲಿ ಮಲ್ಲಿಕಾರ್ಜುನ್ ನಾಪತ್ತೆ ಆಗಿಬಿಟ್ಟರು. ಒಟ್ಟು ಸುಮಾರು 11 ಕೋಟೆ ಹಣ ಮೋಸ ಮಾಡಿ ಓಡಿಹೋಗಿದ್ದಾರೆ ಎಂದು ಆಗ ಗಾಂಧಿನಗರದಲ್ಲಿ ಮಾತುಗಳು ಕೇಳಿಬರುತ್ತಿತ್ತು. ಈ ವಿಚಾರವನ್ನ ನಟ ದರ್ಶನ್ ಅವರಲ್ಲಿ ಕೇಳಿದಾಗ ‘ನನಗೆ 2 ಕೋಟಿ ಕೊಡಬೇಕಿತ್ತು ಮಲ್ಲಿ. ನನ್ನ ಹೆಸರಿನಲ್ಲಿ ಅನೇಕರಿಗೆ ಮೋಸ ಮಾಡಿದ್ದಾನೆ ಅನ್ನೋ ವಿಚಾರ ಕೇಳಿದ್ದೇನೆ. ಆತ ಎಲ್ಲಿಗೆ ಹೋಗಿದ್ದಾನೆ ಎಂದು ನನಗೆ ಗೊತ್ತಿಲ್ಲ’ ಎಂದಿದ್ದರು ದರ್ಶನ್.

ಇದನ್ನೂ ಓದಿ: ‘ಎಲ್ಲವೂ ಭಾರತದ ಸಿನಿಮಾ ಎಂದು ಕರೆಯಬೇಕು’; ಅಭಿಪ್ರಾಯ ತಿಳಿಸಿದ ಅರ್ಜುನ್ ಸರ್ಜಾ

ಮೂಲತಃ ಉತ್ತರ ಕರ್ನಾಟಕ ಸೀಮೆಯ ಗದಗ ಜಿಲ್ಲೆಯವರಾಗಿದ್ದ ಮಲ್ಲಿಕಾರ್ಜುನ್ ಏಳು ವರ್ಷದಿಂದ ಯಾರಿಗೂ ಸಿಕ್ಕಿಲ್ಲ. 2018ರಲ್ಲಿ ಮಲ್ಲಿಕಾರ್ಜುನ್ ನಾಪತ್ತೆಯಾದಾಗ ಅರ್ಜುನ್ ಸರ್ಜಾ ಟೀಮ್ ಅವರ ಊರಿನ ಕಡೆ ಹೊರಟರು. ಮಲ್ಲಿ ಅವರ ಧರ್ಮ ಪತ್ನಿ ಕೊಪ್ಪಳ ಮೂಲದವರು. ಆಗ ಅವರ ಮನೆಗೆ ಹುಡುಕಿಕೊಂಡು ಹೋದಾಗ ಮಲ್ಲಿಕಾರ್ಜುನ್ ಪತ್ನಿ ತೇಜಶ್ವಿನಿ ನಮ್ಮ ಮನೆಗೂ ನನ್ನ ಗಂಡ ಬಂದಿಲ್ಲ. ಇದೊಂದು ಪತ್ರ ಬರೆದು ಹೊರಟು ಹೋಗಿದ್ದಾರೆ ಎಂದು ಹೇಳಿದರು. ಆ ಪತ್ರದ ಸಾರಂಶ ಇಂತಿದೆ.

‘ಪ್ರೀತಿಯ ತೇಜಶ್ವಿನಿಗೆ… ಮೊದಲನೆದಾಗಿ ದಯವಿಟ್ಟು ನನ್ನನ್ನು ಕ್ಷಮಿಸು. ನಾನು ನನ್ನ ವೈಯಕ್ತಿಕ ವ್ಯವಹಾರಕ್ಕಾಗಿ ತುಂಬಾ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇನೆ. ನನ್ನ ಈ ಕೆಲಸದಿಂದ ನಾನು ಯಾರಿಗೂ ಮುಖ ತೋರಿಸಲಾಗದ ಪರಿಸ್ಥಿತಿಯಲ್ಲಿದ್ದೇನೆ. ಆದ ಕಾರಣ ನಾನು ಎಲ್ಲೋ ಕಷ್ಟಪಟ್ಟು ದುಡಿದು ವಾಪಸ್ಸು ಬಂದು ಸಾಲ ತೀರಿಸಿ, ನನಗಂಟಿರೋ ಕಳಂಕಾನ ಹೋಗಲಾಡಿಸಿ ಮತ್ತೆ ಧೈರ್ಯವಾಗಿ ತಲೆಯತ್ತಿ ಎಲ್ಲರ ಮುಂದೆ ಜೀವನ ನಡೆಸಬೇಕು ಎಂದುಕೊಂಡಿದ್ದೇನೆ. ಅಲ್ಲಿಯವರಿಗೆ ನಿಮ್ಮ ಎದುರಿಗೆ ಬರುವ ಶಕ್ತಿ ನನಗಿಲ್ಲ. ನನ್ನನ್ನು ಯಾವುದೇ ಕಾರಣಕ್ಕೂ ಹುಡುಕುವ ಪ್ರಯತ್ನ ಮಾಡಬೇಡಿ. ನನ್ನ ಸಮಸ್ಯೆಯಿಂದ ನಿನ್ನನ್ನು ಮಗನನ್ನು ಹಾಗೂ ಮನೆಯವರನ್ನೂ ಬಿಟ್ಟು ಹೋಗುವ ಪರಿಸ್ಥಿತಿ ಬಂದೊದಗಿದೆ. ದಯವಿಟ್ಟು ನನ್ನನ್ನು ಕ್ಷಮಿಸು. ಇಂತಿ ನಿನ್ನ ಪ್ರೀತಿಯ ಮಲ್ಲಿಕಾರ್ಜುನ್’.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ