ಆಡಿ ಕ್ಯೂ 7 ಕಾರು ಖರೀದಿಸಿದ ಅಶ್ವಿನಿ ಪುನೀತ್​ರಾಜ್​ಕುಮಾರ್, ಬೆಲೆ ಎಷ್ಟು ಕೋಟಿ?

Ashwini Puneeth Rajkumar: ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ದುಬಾರಿ ಆಗಿರುವ ಐಶಾರಾಮಿ ಆಡಿ ಕ್ಯೂ7 ಕಾರು ಖರೀದಿ ಮಾಡಿದ್ದಾರೆ. ಈ ದುಬಾರಿ ಕಾರಿನ ಬೆಲೆ ಎಷ್ಟು?

ಆಡಿ ಕ್ಯೂ 7 ಕಾರು ಖರೀದಿಸಿದ ಅಶ್ವಿನಿ ಪುನೀತ್​ರಾಜ್​ಕುಮಾರ್, ಬೆಲೆ ಎಷ್ಟು ಕೋಟಿ?
Follow us
ಮಂಜುನಾಥ ಸಿ.
|

Updated on: Mar 31, 2024 | 12:46 PM

ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneethrajkumar) ಕನ್ನಡ ಚಿತ್ರರಂಗದ ಸಕ್ರಿಯ ಸಿನಿಮಾ ನಿರ್ಮಾಪಕಿ. ಇತರೆ ನಿರ್ಮಾಣ ಸಂಸ್ಥೆಗಳಂತೆ ಸ್ಟಾರ್ ನಟರ ಹಾಕಿಕೊಂಡು ಸಿದ್ಧ ಮಾದರಿ ಕಮರ್ಶಿಯಲ್ ಸಿನಿಮಾಗಳನ್ನು ಮಾತ್ರವೇ ಮಾಡದೆ ಭಿನ್ನ ಕತೆಯುಳ್ಳ ಸಿನಿಮಾಗಳನ್ನು ಮಾಡುತ್ತಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ವಿಶೇಷವಾಗಿ ನಿರ್ದೇಶಕಿಯರಿಗೆ, ಮಹಿಳಾ ತಂತ್ರಜ್ಞರಿಗೆ ಅವಕಾಶ ನೀಡುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳನ್ನು ಸಹ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣದ ಜೊತೆಗೆ ಇತರರ ಸಿನಿಮಾಗಳ ಪ್ರಚಾರ ಕಾರ್ಯದಲ್ಲಿಯೂ ಭಾಗಿಯಾಗುವ ಅಶ್ವಿನಿ ಅವರು ಇತ್ತೀಚೆಗಷ್ಟೆ ಹೊಸದೊಂದು ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ.

ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಐಶಾರಾಮಿ ಆಡಿ ಕ್ಯೂ7 ಕಾರು ಖರೀದಿ ಮಾಡಿದ್ದಾರೆ. ಕಾರಿನೊಟ್ಟಿಗೆ ಅಶ್ವಿನಿ ಅವರು ನಿಂತಿರುವ ಚಿತ್ರವನ್ನು ಆಡಿ ಬೆಂಗಳೂರು ಫೇಸ್​ಬುಕ್ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ. ಗ್ರೇ ಬಣ್ಣದ ಆಡಿ ಕ್ಯೂ 7 ಕಾರನ್ನು ಅಶ್ವಿನಿ ಪುನೀತ್​ರಾಜ್​ಕುಮಾರ್ ಖರೀದಿ ಮಾಡಿದ್ದು ಈ ಕಾರಿನ ಬೆಲೆ ಬೆಂಗಳೂರಿನಲ್ಲಿ 1.10 ಕೋಟಿಯಿಂದ 1.20 ಕೋಟಿ ರೂಪಾಯಿಗಳಿವೆ. ಅಶ್ವಿನಿ ಅವರು ಆಡಿ ಕ್ಯೂ7 ಟಾಪ್ ಎಂಡ್ ಮಾಡೆಲ್ ಅನ್ನೇ ಖರೀದಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಅಶ್ವಿನಿ ಪುನೀತ್​-ಶೋಭಾ ಕರಂದ್ಲಾಜೆ ಭೇಟಿ ಬಗ್ಗೆ ಶಿವಣ್ಣ ಮೊದಲ ಪ್ರತಿಕ್ರಿಯೆ

ಅಶ್ವಿನಿ ಪುನೀತ್ ರಾಜ್​ಕುಮಾರ್ ಖರೀದಿ ಮಾಡಿರುವ ಆಡಿ ಕ್ಯೂ 7 ಕಾರು ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಈ ಕಾರು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಭದ್ರತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಹಲವು ಏರ್ ಬ್ಯಾಗ್​ಗಳು, ಕ್ಯಾಮೆರಾ, ಅಡಾಸ್ ತಂತ್ರಜ್ಞಾನ, ರೋಡ್​ ಗ್ರಿಪ್​ನ ಹಲವು ತಂತ್ರಜ್ಞಾನಗಳನ್ನು ಒಳಗೊಂಡಿದೆ. ಜೊತೆಗೆ ಐಶಾರಾಮಿತ್ವಕ್ಕೂ ಮಹತ್ವ ನೀಡಲಾಗಿದೆ. ಪೈಲೆಟ್ ಸೀಟ್​ಗಳು. ಮಸಾಜರ್ ಇನ್ನಿತರೆ ಸವಲತ್ತುಗಳು ಇರುವ ಸೀಟ್​ಗಳು, ಅತ್ಯದ್ಭುತ ಎನ್​ಫೊಟೇನ್​ಮೆಂಟ್ ಸಿಸ್ಟಮ್, ಆಧುನಿಕ ತಂತ್ರಜ್ಞಾನದ ಶಾಕ್ ಅಬ್ಸಾರ್ಬರ್​ಗಳು, ಕಡಿಮೆ ಸೆಕೆಂಡ್​ಗಳಲ್ಲಿ 100 ಕಿ.ಮೀ ವೇಗ ದಾಟಬಲ್ಲ ಕ್ಷಮತೆಯನ್ನು ಈ ಕಾರು ಹೊಂದಿದೆ.

ಪುನೀತ್ ರಾಜ್​ಕುಮಾರ್ ಅವರಿಗೂ ಕಾರುಗಳ ಬಗ್ಗೆ ವಿಶೇಷ ಪ್ರೀತಿ ಇತ್ತು. ಹಲವು ಐಶಾರಾಮಿ, ದುಬಾರಿ ಕಾರುಗಳನ್ನು ಪುನೀತ್ ರಾಜ್​ಕುಮಾರ್ ಖರೀದಿ ಮಾಡಿದ್ದರು. ಸ್ಯಾಂಡಲ್​ವುಡ್​ನ ನಟರಲ್ಲಿಯೇ ಮೊದಲ ಬಾರಿ ಲ್ಯಾಂಬರ್ಗಿನಿ ಉರುಸ್ ಕಾರು ಖರೀದಿ ಮಾಡಿದ್ದರು ಅಪ್ಪು. ಈಗ ಆ ಕಾರನ್ನು ಅವರ ಹತ್ತಿರದ ಸಂಬಂಧಿಯೇ ಓಡಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ