ಕೇಳದೆ ನಿಮಗೀಗ… ಬಿಡುಗಡೆಗೆ ಸಿದ್ಧವಾಗಿದೆ ‘ಮುಕ್ತ ಮನಸು’ ಸಿನಿಮಾ

‘ಮುಕ್ತ ಮನಸು’ ಸಿನಿಮಾದಲ್ಲಿ ಮೋಹನ್‌ ರಂಗನಾಥ್ ಮತ್ತು ಮಾನ್ಯ ಅವರು ಜೋಡಿಯಾಗಿ ನಟಿಸಿದ್ದಾರೆ. ಶೋಭರಾಜ್, ರಮೇಶ್‌ ಪಂಡಿತ್, ನಾಗರತ್ನ, ಅಪರ್ಣ, ಸೆಂಚುರಿ ಗೌಡ, ಜಾನು, ಮಧು, ಮಂಜು ಬಿಳಿಗೆರೆ ಮುಂತಾದವರು ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ರಿಲೀಸ್​ ಆಗಲಿದೆ. ಈಗ ಹಾಡು ಮತ್ತು ಟ್ರೇಲರ್​ ಬಿಡುಗಡೆ ಆಗಿದೆ.

ಕೇಳದೆ ನಿಮಗೀಗ... ಬಿಡುಗಡೆಗೆ ಸಿದ್ಧವಾಗಿದೆ ‘ಮುಕ್ತ ಮನಸು’ ಸಿನಿಮಾ
ಮೋಹನ್‌ ರಂಗನಾಥ್, ಮಾನ್ಯ
Follow us
ಮದನ್​ ಕುಮಾರ್​
|

Updated on: Mar 31, 2024 | 8:19 PM

ಹೊಸ ಪ್ರತಿಭೆಗಳೆಲ್ಲ ಸೇರಿ ‘ಮುಕ್ತ ಮನಸು’ (Muktha Manasu) ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಮಾಡಿದ್ದಾರೆ. ವಿಶೇಷವೆಂದರೆ, ‘ಕೇಳದೆ ನಿಮಗೀಗ’ ಎಂಬ ಟ್ಯಾಗ್​ ಲೈನ್​ ಈ ಸಿನಿಮಾಗಿದೆ. ಮೈಸೂರಿನ ವೆಂಕಟೇಶ್ ಅವರು ‘ಎಸ್.ಎಲ್.ಜೆ. ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಬೋರೇಗೌಡ, ಲೋಕೇಶ್ ಜಿ.ಎನ್, ವೀಣಾ ಅವರು ಈ ಸಿನಿಮಾಗೆ ಸಹ ನಿರ್ಮಾಪಕರು. ಆರ್.ಸಿ. ರಂಗಶೇಖರ್ ಅವರು ಸಂಭಾಷಣೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ಮೊದಲ ಹಂತದ ಪ್ರಚಾರವಾಗಿ ಕನ್ನಡ ಸಿಮಾದ (Kannada Cinema) ಹಾಡುಗಳು ಮತ್ತು ಟ್ರೇಲರ್ ರಿಲೀಸ್​ ಮಾಡಲಾಗಿದೆ.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಸೀಸನ್ 5ರ ಸ್ಪರ್ಧಿ ಆಗಿದ್ದ ಮೈಸೂರಿನ ಮೋಹನ್‌ ರಂಗನಾಥ್ ಅವರು ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ಆಟೋ ಚಾಲಕನಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ನಟಿ ಮಾನ್ಯ ಅವರು ಕ್ಲಾಸಿಕಲ್ ಡ್ಯಾನ್ಸರ್ ಆಗಿದ್ದು, ಈ ಸಿನಿಮಾದಲ್ಲಿ ಮನಸು ಹೆಸರಿನ ಪಾತ್ರ ಮಾಡಿದ್ದಾರೆ. ನಾಯಕಿಯಾಗಿ ಇದು ಅವರ ಮೂರನೇ ಸಿನಿಮಾ.

ಈ ಸಿನಿಮಾದ ಪಾತ್ರವರ್ಗದಲ್ಲಿ ಶೋಭರಾಜ್, ಅಪರ್ಣ, ರಮೇಶ್‌ ಪಂಡಿತ್, ನಾಗರತ್ನ, ಜಾನು, ಸೆಂಚುರಿ ಗೌಡ, ಮಧು, ಮಂಜು ಬಿಳಿಗೆರೆ ಮುಂತಾದ ಕಲಾವಿದರು ಇದ್ದಾರೆ. ಚಿತ್ರದ 5 ಗೀತೆಗಳಿಗೆ ವಿನು ಮನಸು ಸಂಗೀತ ನಿರ್ದೇಶನ ಮಾಡಿದ್ದಾರೆ. ರವಿ ಅವರ ಛಾಯಾಗ್ರಹಣ, ಕೌರವ ವೆಂಕಟೇಶ್ ಅವರ ಸಾಹಸ, ಪ್ರಮೋದ್-ಸತ್ಯ ಅವರ ನೃತ್ಯ ನಿರ್ದೇಶನ ಈ ಸಿನಿಮಾಗಿದೆ. ಮಂಡ್ಯ, ಮೈಸೂರು ಮುಂತಾದೆಡೆ ಚಿತ್ರೀಕರಣ ಮಾಡಲಾಗಿದೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ.

‘ಮುಕ್ತ ಮನುಸು’ ಚಿತ್ರತಂಡ

‘ಮುಕ್ತ ಮನಸು’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಆರ್.ಸಿ. ರಂಗಶೇಖರ್ ಮಾಹಿತಿ ಹಂಚಿಕೊಂಡರು. ‘ನಾನು ರಂಗಭೂಮಿ ಕಲಾವಿದನಾಗಿ ಸತತ 25 ವರ್ಷದಿಂದ ‘ರಂಗಾಯಣ’ದಲ್ಲಿ ಕೆಲಸ ಮಾಡಿದ್ದೇನೆ. ಡಾ. ರಾಜ್‌ಕುಮಾರ್ ಫಿಲ್ಮ್​ ಶಾಲೆಯಲ್ಲಿ ಕೋರ್ಸ್ ಮಾಡಿದ್ದೇನೆ. ಈ ಎಲ್ಲ ಅನುಭವಗಳಿಂದ ಸಿನಿಮಾಗೆ ನಿರ್ದೇಶನ ಮಾಡಿದ್ದೇನೆ. ಪ್ರೇಮಿಗಳು ಮುಕ್ತವಾಗಿ ಯಾವುದೇ ಕಲ್ಮಶವಿಲ್ಲದೆ ಪ್ರೀತಿಸಿದರೆ, ಅವರ ಪ್ರೀತಿ ಕೊನೆಯವರೆಗೂ ಉಳಿದುಕೊಳ್ತದೆ. ಅದು ಹೇಗಿರುತ್ತದೆ? ಹಳ್ಳಿಯಿಂದ ನಗರಕ್ಕೆ ಓದಲು ಬರುವ ಕಥಾನಾಯಕಿ ಪಯಣದಲ್ಲಿ ಒಬ್ಬ ಹುಡುಗನ ಜೊತೆ ಪ್ರೀತಿ ಬೆಸೆಯುತ್ತದೆ. ಮನೆಯಲ್ಲಿ ವಿರೋಧ ಬಂದಾಗ ಮುಕ್ತ ಮನಸುಗಳ ಪ್ರೀತಿಯು ಯಾವ ಹಂತವನ್ನು ತಲುಪುತ್ತೆ ಎಂಬುದನ್ನೆಲ್ಲ ಕಮರ್ಷಿಯಲ್ ಆಗಿ ತೋರಿಸಿದ್ದೇವೆ’ ಎಂದಿರುವ ನಿರ್ದೇಶಕರು ಸಣ್ಣದೊಂದು ಪಾತ್ರವನ್ನೂ ನಿಭಾಯಿಸಿದ್ದಾರೆ.

‘ಜಗತ್ತು ಇದಕ್ಕಿಂತ ದೊಡ್ಡ ಯುದ್ಧ ಕಂಡಿಲ್ಲ’: ಟ್ರೇಲರ್​ ನೋಡಿ ಬೆರಗಾದ ಅಕ್ಷಯ್​ ಕುಮಾರ್​ ಫ್ಯಾನ್ಸ್​

ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣೇಗೌಡ ಅವರು ಚಿತ್ರತಂಡವನ್ನು ಹೊಗಳಿದ್ದಾರೆ. ‘ತುಣುಕುಗಳನ್ನು ನೋಡಿದರೆ ನಿರ್ಮಾಪಕರು ಖರ್ಚು ಮಾಡಿರುವುದು ಕಾಣುತ್ತದೆ. ಅವರಿಂದಾಗಿ ಗುಣಮಟ್ಟ ಚೆನ್ನಾಗಿ ಮೂಡಿಬಂದಿದೆ. ಇದೆಲ್ಲಾವನ್ನು ಡೈರೆಕ್ಟರ್​ ಸದುಪಯೋಗ ಮಾಡಿಕೊಂಡಿದ್ದಾರೆ. ಅವರ ಪ್ರಯತ್ನ ಪೂರ್ಣಗೊಂಡಿದೆ. ಇನ್ನು ಈ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸ ಇದೆ. ದೇಶದಲ್ಲಿ ಈಗ ಎಲ್ಲ ಚಿತ್ರಗಳಿಗೆ ಪ್ರೇಕ್ಷಕರ ಕೊರತೆ ಕಾಣುತ್ತಿದೆ. ಈ ಸಿನಿಮಾಗೆ ಪ್ರೋತ್ಸಾಹ ಸಿಗಲಿ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ