Darshan: ‘ತಪ್ಪು ಚಿನ್ನಾ, ಎಲ್ರಿಗೂ ಅವಕಾಶ ನೀಡಬೇಕು’; ದರ್ಶನ್ ವಿಶೇಷ ಮನವಿ

|

Updated on: Apr 24, 2024 | 8:15 AM

ದರ್ಶನ್ ಅವರು ಮಂಡ್ಯದಲ್ಲಿ ಸ್ಟಾರ್ ಚಂದ್ರು ಪರ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರದ ವೇಳೆ ದರ್ಶನ್ ನೋಡಲು ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದರು. ಅವರನ್ನು ನೋಡಿ ಅಭಿಮಾನಿಗಳು ಖುಷಿಯಾಗುತ್ತಿದ್ದಾರೆ. ಈ ವೇಳೆ ಅವರು ಅಭಿಮಾನಿಗಳ ಬಳಿ ವಿಶೇ ಮನವಿ ಮಾಡಿಕೊಂಡಿದ್ದಾರೆ.

ನಟ ದರ್ಶನ್ (Darshan) ಅವರು ಮಂಡ್ಯದಲ್ಲಿ ಸ್ಟಾರ್ ಚಂದ್ರು ಪರ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರದ ವೇಳೆ ದರ್ಶನ್ ನೋಡಲು ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದರು. ಅವರನ್ನು ನೋಡಿ ಅಭಿಮಾನಿಗಳು ಖುಷಿಯಾಗುತ್ತಿದ್ದಾರೆ. ಮುಖ್ಯಮಂತ್ರಿ ಚಂದ್ರು ಮಾತನಾಡುವಾಗ ದರ್ಶನ್ ಪರ ಘೋಷಣೆ ಕೂಗಲಾಗುತ್ತಿತ್ತು. ಇದು ದರ್ಶನ್​ಗೆ ಇಷ್ಟವಾಗಿಲ್ಲ. ಈ ಬಗ್ಗೆ ಅವರು ಓಪನ್ ಆಗಿ ಮಾತನಾಡಿದ್ದಾರೆ. ‘ಹಿರಿಯರು ಮಾತನಾಡುವಾಗ ಎರಡು ನಿಮಿಷ ಕಾಲಾವಕಾಶ ನೀಡಬೇಕು. ಇಲ್ಲಾ ಅಂದ್ರೆ ತಪ್ಪಾಗುತ್ತೆ ಚಿನ್ನಾ’ ಎಂದರು ದರ್ಶನ್. ಏಪ್ರಿಲ್ 26ರಂದು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.